ಮುಳ್ಳೇರಿಯ: ಕಿನ್ನಿಂಗಾರು ಬೆಳೇರಿ ಮೇಗಿನಮನೆ ಪಚ್ಚಮ್ಮಾರ್ ತರವಾಡು ಪುನಃ ಪ್ರತಿಷ್ಠಾ ಬ್ರಹ್ಮಕಲಶ ಹಾಗೂ ದೈವಗಳ ನೃತ್ಯೋತ್ಸವ ಫೆ.6ರಿಂದ 8ರವರೆಗೆ ಜರುಗಲಿದ್ದು ಭಾನುವಾರ ಬ್ರಹ್ಮಕಲಶ ಸಮಿತಿ ಸಭೆ ನಡೆಯಿತು.
ಪ್ರತಿಷ್ಠಾ ಮಹೋತ್ಸವ ಸಮಿತಿ ಅಧ್ಯಕ್ಷ ದಾಮೋದರ ಮಣಿಯಾಣಿ ನಾಕೂರು ಅಧ್ಯಕ್ಷತೆ ವಹಿಸಿದ್ದರು. ಸ್ವಾಗತ ಸಮಿತಿ ಅಧ್ಯಕ್ಷ ಮನಮೋಹನ ರೈ ಪಿಂಡಗ, ಕಾರ್ಯಾಧ್ಯಕ್ಷ ಪದ್ಮನಾಭ ಮಣಿಯಾಣಿ ಬೆಳೇರಿ, ಕಾರ್ಯದರ್ಶಿ ಅಪ್ಪಕುಂಞÂ ಬೆಳೇರಿ, ಕಾರ್ಯಾಲಯ ಸಮಿತಿ ಅಧ್ಯಕ್ಷ ರಾಘವ ಬೆಳೇರಿ, ಖಜಾಂಚಿ ಮೋಹನಕೃಷ್ಣ, ಉಗ್ರಾಣ ಸಮಿತಿಯ ಬಾಲಗೋಪಾಲ ಬೆಳೇರಿ, ಅಲಂಕಾರ ಸಮಿತಿಯ ಶಿವರಾಮ ಜಿ.ಎಮ್., ನೀರಾವರಿ ಸಮಿತಿಯ ನಾರಾಯಣ ಬಿ.ಕೆ., ಚಪ್ಪರ ಸಮಿತಿಯ ದಾಮೋದರ ನಿಡ್ಪಳ್ಳಿ, ಧ್ವನಿ ಮತ್ತು ಬೆಳಕು ವ್ಯವಸ್ಥೆಯ ಜಯಪ್ರಕಾಶ್, ಆಹಾರ ಸಮಿತಿಯ ಗೋಪಾಲ ಬೆಳೇರಿ, ಸ್ವಯಂ ಸೇವಕ ಸಮಿತಿಯ ಕೃಷ್ಣ ಕಿನ್ನಿಂಗಾರು, ಮಹಿಳಾ ಸಮಿತಿಯ ಶಾರದಾ ಬೆಳೇರಿ ಸಹಿತ ಸಮಿತಿ ಸದಸ್ಯರು ಉಪಸ್ಥಿತರಿದ್ದರು.ಕುಂಞÂರಾಮ ಮಾಸ್ತರ್ ಸ್ವಾಗತಿಸಿ, ವಂದಿಸಿದರು.