ಕಾಸರಗೋಡು: ಅಣಂಗೂರು ಜೆ.ಪಿ.ನಗರದಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ಕೊರಗಜ್ಜ ಹಾಗು ಚಾಕಾರು ಗುಳಿಗ ದೈವದ ಪ್ರತಿಷ್ಠಾ ಮಹೋತ್ಸವ ಮಾರ್ಚ್ 29 ಮತ್ತು 30 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಪ್ರತಿಷ್ಠಾ ಮಹೋತ್ಸವದ ಯಶಸ್ಸಿಗಾಗಿ ಪ್ರತಿಷ್ಠಾ ಮಹೋತ್ಸವ ಸಮಿತಿಯನ್ನು ರಚಿಸಲಾಯಿತು.
ಮುಖ್ಯ ರಕ್ಷಾ„ಕಾರಿಯಾಗಿ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು, ರಕ್ಷಾಧಿಕಾರಿಯಾಗಿ ವಸಂತ ಶಾಂತಿ ಬಂಟ್ವಾಳ, ಕೆ.ಎನ್.ವೆಂಕಟ್ರಮಣ ಹೊಳ್ಳ, ಬಾಬು ಪೂಜಾರಿ, ಗೌರವಾಧ್ಯಕ್ಷರಾಗಿ ಪಿ.ಎಸ್.ಕೃಷ್ಣಪ್ರಸಾದ್ ಕೋಟೆಕಣಿ, ಕಾರ್ಯಾಧ್ಯಕ್ಷರಾಗಿ ಕೆ.ಶಂಕರ್, ಉಪಾಧ್ಯಕ್ಷರುಗಳಾಗಿ ನ್ಯಾಯವಾದಿ ಪಿ.ಮುರಳೀಧರನ್, ಶಿವರಾಮ ಕಾಸರಗೋಡು, ರಾಮನ್ ಚೆನ್ನಿಕೆರೆ, ಗಣಪತಿ ಕೋಟೆಕಣಿ, ಮುರಳಿ ಕೃಷ್ಣ, ಪ್ರೇಮಾ ಎಲ್ಲೋಜಿ ರಾವ್, ಸಂಧ್ಯಾ ಶೆಟ್ಟಿ, ಬಿಂದು ದಾಸ್, ಭಾನು ಪ್ರಕಾಶ್, ಪ್ರಧಾನ ಕಾರ್ಯದರ್ಶಿಯಾಗಿ ಲೋಕೇಶ್ ಶೆಟ್ಟಿ ಬಿ, ಕಾರ್ಯದರ್ಶಿಗಳಾಗಿ ಗಣೇಶ್ ಪಾರೆಕಟ್ಟೆ, ವರ ಪ್ರಸಾದ್ ಕೋಟೆಕಣಿ, ಲವ ಮೀಪುಗುರಿ, ಕೆ.ಮಾಧವನ್, ಜ್ಯೋತಿಷ್ ಜಿ, ಶಾಂತ ಕುಮಾರಿ, ಮುರಳೀಧರ ಪಾರೆಕಟ್ಟೆ, ಕೋಶಾ„ಕಾರಿಯಾಗಿ ತಾರಾನಾಥ ಶೆಟ್ಟಿ, ಪ್ರಧಾನ ಸಂಚಾಲಕರಾಗಿ ಹರೀಶ್ ಕುಮಾರ್ ಕೋಟೆಕಣಿ ಹಾಗು 101 ಮಂದಿ ಸದಸ್ಯರ ಸಮಿತಿಯನ್ನು ರಚಿಸಲಾಯಿತು. ಅಲ್ಲದೆ ವಿವಿಧ ಉಪಸಮಿತಿಗಳನ್ನು ರಚಿಸಲಾಯಿತು.
ಸಮಿತಿ ರಚನೆ ಸಭೆಯನ್ನು ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಸಭೆಯಲ್ಲಿ ಕೆ.ಶಂಕರ್ ಅಧ್ಯಕ್ಷತೆ ವಹಿಸಿದರು. ಶಿವರಾಮ ಕಾಸರಗೋಡು, ಕೃಷ್ಣಪ್ರಸಾದ್ ಕೋಟೆಕಣಿ, ರಾಮನ್ ಚೆನ್ನಿಕೆರೆ, ವಸಂತ ಶಾಂತಿ ಬಂಟ್ವಾಳ, ಲೋಕೇಶ್ ಶೆಟ್ಟಿ, ವೆಂಕಟ್ರಮಣ ಹೊಳ್ಳ, ಜ್ಯೋತಿಷ್ ಜಿ, ಚಂದ್ರನ್, ಪುರುಷೋತ್ತಮ ನಾೈಕ್, ಮಾಧವ, ಬಾಬು ಪೂಜಾರಿ, ಹರೀಶ್ ಕೋಟೆಕಣಿ ಮೊದಲಾದವರು ಉಪಸ್ಥಿತರಿದ್ದರು.