ನವದೆಹಲಿ: ಎಲೆಕ್ಟ್ರಿಕ್ ವಾಹನಗಳಿಗೆ ಚಾಜಿರ್ಂಗ್ ಕೇಂದ್ರಗಳನ್ನು ಸ್ಥಾಪಿಸಲು ಬಿಎಸ್ ಎನ್ ಎಲ್ ಜೊತೆ ಆರಂಭಿಕ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಎನರ್ಜಿ ಎಫಿಷಿಯೆನ್ಸಿ ಸರ್ವೀಸಸ್ ಲಿಮಿಟೆಡ್ (ಇಇಎಸ್ ಎನ್ ಎಲ್) ಮಂಗಳವಾರ ತಿಳಿಸಿದೆ.
ಮೆಮೊಯಾರ್ಂಡಮ್ ಅನುಸಾರ ಇಇಎಸ್ ಎನ್ ಎಲ್ 1,000 ಲ್ಸ್ ಎಸ್ ಎನ್ ಎಲ್ ಸೈಟ್ ಗಳಲ್ಲಿ ಸಾರ್ವಜನಿಕ ಇವಿ ಚಾಜಿರ್ಂಗ್ ಕೇಂದ್ರಗಳನ್ನು ಹಂತಹಂತವಾಗಿ ದೇಶಾದ್ಯಂತ ಸ್ಥಾಪಿಸುತ್ತದೆ ಎಂದು ಇಇಎಸ್ ಎನ್ ಎಲ್ ಹೇಳಿಕೆ ತಿಳಿಸಿದೆ.ಅರ್ಹ ಸಿಬ್ಬಂದಿಯನ್ನು ಬಳಸಿಕೊಂಡು ಚಾಜಿರ್ಂಗ್ ಮೂಲಸೌಕರ್ಯಗಳ ಕಾರ್ಯಾಚರಣೆ ಮತ್ತು ನಿರ್ವಹಣೆಯೊಂದಿಗೆ ಎಂಇಯುಗೆ ಸಂಬಂಧಿಸಿದ ಸೇವೆಗಳ ಮೇಲೆ ಇಇಎಸ್ ಎನ್ ಎಲ್ ಸಂಪೂರ್ಣ ಮುಂಗಡ ಹೂಡಿಕೆ ಮಾಡುತ್ತದೆ. ಚಾಜಿರ್ಂಗ್ ಮೂಲಸೌಕರ್ಯ ಸ್ಥಾಪನೆಗೆ ಗತ್ಯವಾದ ಸ್ಥಳ ಮತ್ತು ವಿದ್ಯುತ್ ಸಂಪರ್ಕಗಳನ್ನು ಒದಗಿಸುವ ಜವಾಬ್ದಾರಿಯನ್ನು ಟೆಲಿಕಾಂ ಪಿಎಸ್‍ಯು ಬಿ ಎಸ್ ಎನ್ ಎಲ್ ನಿರ್ವಹಿಸಲಿದೆ. ರಾಷ್ಟ್ರೀಯ ಎಲೆಕ್ಟ್ರಿಕ್ ಮೊಬಿಲಿಟಿ ಕಾರ್ಯಕ್ರಮದ ದೂರದೃಷ್ಟಿಯೊಂದಿಗೆ ಇಇಎಸ್ ಎನ್ ಎಲ್ ಭಾರತದಾದ್ಯಂತ 300 ಎಸಿ ಮತ್ತು 170 ಡಿಸಿ ಚಾರ್ಜರ್‍ಗಳನ್ನು ನಿಯೋಜಿಸಿದೆ. ಇಲ್ಲಿಯವರೆಗೆ, ದೆಹಲಿ-ಎನ್ ಸಿ ಆರ್‍ನಲ್ಲಿ 66 ಸಾರ್ವಜನಿಕ ಚಾಜಿರ್ಂಗ್ ಪಾಯಿಂಟ್‍ಗಳು ಕಾರ್ಯನಿರ್ವಹಿಸುತ್ತಿವೆ.
ಬೇಡಿಕೆ ಹಾಗೂ ಬೃಹತ್ ಸಂಗ್ರಹಣೆಯ ನವೀನ ಮಾದರಿಯೊಂದಿಗೆ, ಇಇಎಸ್ ಎನ್ ಎಲ್ ಎಲೆಕ್ಟ್ರಿಕ್ ವಾಹನಗಳು ಮತ್ತು ಚಾರ್ಜರ್‍ಗಳನ್ನು ನಿಜವಾದ ಮಾರುಕಟ್ಟೆ ಮೌಲ್ಯಕ್ಕೆ ಹೋಲಿಸಿದರೆ ಗಮನಾರ್ಹವಾಗಿ ರಿಯಾಯಿತಿ ದರದಲ್ಲಿ ಪಡೆಯುತ್ತದೆ.ಇದರೊಡನೆ ಇಇಎಸ್ ಎನ್ ಎಲ್ ಸುಸ್ಥಿರ ವ್ಯವಹಾರ ಮಾದರಿಯನ್ನು ಸ್ಥಾಪಿಸಿದೆ, ಇದು ಇವಿಗಳನ್ನು ಕಟ್ಟ ಕಡೆಯ ಗ್ರಾಹಕರಿಗೂ ಕೈಗೆಟುಕುವಂತೆ ಮಾಡುತ್ತದೆ.