HEALTH TIPS

ಗೋಸಾಡ ಶ್ರೀಕ್ಷೇತ್ರ ತುಳುನಾಡಿನ ಐತಿಹ್ಯವನ್ನು ಹೊತ್ತ ಜಗನ್ಮಾತೆಯ ನೆಲೆವೀಡು-ಕೊಂಡೆವೂರು ಶ್ರೀ- ಗೋಸಾಡ ಶ್ರೀ ಮಹಿಷಮರ್ದಿನಿ ಕ್ಷೇತ್ರದ ನವೀಕರಣ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ


          ಮುಳ್ಳೇರಿಯ: ಆಧ್ಯಾತ್ಮಿಕತೆಯ ಭರತ ಖಂಡದ ಧೀಮಂತಿಕೆಯ ಸಂಕೇತವಾಗಿದೆ. ರಾಷ್ಟ್ರದ ಉದ್ದಗಲ ಹರಡಿರುವ ಚೈತನ್ಯ ಸ್ವರೂಪಗಳಾದ ಆರಾಧನಾಲಯಗಳು ಎಲ್ಲಾ ಕಾಲದಲ್ಲೂ ಸಜ್ಜನರನ್ನು ಸಂರಕ್ಷಿಸಿ ದುರ್ಜನರ ಸದ್ದನ್ನು ಅಡಗಿಸಿ ನೆಮ್ಮದಿ ನೆಲೆಗೊಳಿಸಿದೆ. ಶಕ್ತಿ ಸ್ವರೂಪಿಣಿಯಾದ ಜಗಜ್ಜನನಿ ನೆಲೆನಿಂತ ಗೋಸಾಡ ಶ್ರೀಕ್ಷೇತ್ರ ತುಳುನಾಡಿನ ಐತಿಹ್ಯದ ನೆಲೆವೀಡು ಎಂದು ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀಯೋಗಾನಂದ ಸರಸ್ವತಿ ಸ್ವಾಮೀಜಿ ಅವರು ಆಶೀರ್ವಚನ ನೀಡಿದರು.
           ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿರುವ ಗೋಸಾಡ ಶ್ರೀಮಹಿಷಮರ್ಧಿನಿ ದೇವಾಲಯದಲ್ಲಿ ಮಂಗಳವಾರ ಬೆಳಿಗ್ಗೆ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನಗೈದು ಅವರು ಮಾತನಾಡಿದರು.
        ಮಹಿಷಮರ್ಧಿನಿ ದುಷ್ಟತೆಯ ವಿರುದ್ದ ಧರ್ಮದ ವಿಜಯದ ಸಂಕೇತವಾಗಿದೆ. ಪ್ರತಿಯೊಬ್ಬ ಮನುಷ್ಯನ ಅಂತರಂಗದೊಳಗಿನ ದುಷ್ಟತನ ನಾಶವಾಗಿ ಧನಾತ್ಮಕ, ಆಧ್ಯಾತ್ಮಿಕ ಚಿಂತನೆ ಮೈಗೂಡಿದಾಗ ಮಹಿಷಮರ್ಧಿನಿಯ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದು ಶ್ರೀಗಳು ತಿಳಿಸಿದರು.
          ಧಾರ್ಮಿಕ ಉಪನ್ಯಾಸಗೈದ ರಾ.ಸ್ವ.ಸೇ.ಸಂಘದ ಅಖಿಲ ಭಾರತ ಕುಟುಂಬ ಪ್ರಬೋಧನ್ ಪ್ರಮುಖ್ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಅವರು, ಭಾರತೀಯ ಪ್ರಾಚೀನ ಸಂಸ್ಕøತಿ ಎಂದಿಗೂ ಶಕ್ತಿಯುತವಾಗಿ ಅಪೂರ್ವವಾದುದು. ರಾಷ್ಟ್ರದಲ್ಲೇ ಹೆಚ್ಚು ಭಾಷೆಗಳನ್ನಾಡುವವರಿರುವ ವಿಶಿಷ್ಟ ಜಿಲ್ಲೆಯಾಗಿರುವ ಕಾಸರಗೋಡಿನ ಸಾಂಸ್ಕøತಿಕ-ಸಾಮಾಜಿಕ ಶ್ರೀಮಂತಿಕೆಯನ್ನು ಜಾಗರೂಕತೆಯಿಂದ ಕಾಪಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಜವಾಬ್ದಾರರು,. ಧಾರ್ಮಿಕ ಶ್ರದ್ದಾ ಕೇಂದ್ರಗಳು ಒಗ್ಗಟ್ಟಿನ ಪ್ರತೀಕಗಳಾಗಿ ಸಮಾಜ, ರಾಷ್ಟ್ರವನ್ನು ಮುನ್ನಡೆಸುತ್ತದೆ ಎಂದರು.
        ಶ್ರೀಕ್ಷೇತ್ರ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನಾರಾಯಣ ರೈ ಕುದ್ಕಾಡಿ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಸುಧೀರ್ ಕುಮಾರ್ ಶೆಟ್ಟಿ ಎಣ್ಮಕಜೆ, ಮಧೂರು ಕ್ಷೇತ್ರ ಜೀರ್ಣೋದ್ದಾರ ಸಮಿತಿ ಪ್ರಧಾನ ಕಾರ್ಯದರ್ಶಿ ಜಯದೇವ ಖಂಡಿಗೆ, ಜಿ.ಪಂ. ಸದಸ್ಯ ನ್ಯಾಯವಾದಿ ಕೆ. ಶ್ರೀಕಾಂತ್, ಬ್ರಹ್ಮಾವರದ ವಿಶ್ವೇಶ್ವರ ಚಡಗ, ಸುಬ್ರಹ್ಮಣ್ಯ ಕಡಂಬಳಿತ್ತಾಯ, ಚಂದ್ರಶೇಖರ ರಾವ್ ಕಲ್ಲಗ, ಮುಂಬಯಿಯ ಸಿದ್ಧೇಶ್ವರ ಅನ್ನದಾತ ಅಯ್ಯಪ್ಪ ಸ್ವಾಮಿ ಫೌಂಡೇಶನ್ ನ ಗೌರವಾಧ್ಯಕ್ಷ ಸುರೇಶ್ ಎಸ್. ಶೆಟ್ಟಿ ಕೇದಗೆ ಉಪಸ್ಥಿತರಿದ್ದು ಶುಭಹಾರೈಸಿದರು. ಶ್ರೀ ಗೋಪಾಲಕೃಷ್ಣ ಪೈ, ಸುಬ್ರಹ್ಮಣ್ಯ ಭಟ್ ಕೆ, ರಂಗನಾಥ ರಾವ್, ರಾಘವ ಬೆಳ್ಳಿಗೆ, ರಾಮಪ್ಪ ಮಂಜೇಶ್ವರ, ಶ್ರೀಧರ ಬೆಳ್ಳೂರು  ಶುಭಾಶಂಸನೆಗೈದರು. ಜಯರಾಜ್ ಕುಣಿಕುಳ್ಳಾಯ ಉಬ್ರಂಗಳ, ಸುಂದರ ಮವ್ವಾರು, ವೆಂಕಟ್ರಮಣ ಭಟ್ ಉಪ್ಪಂಗಳ, ಪರಮೇಶ್ವರ ಭಟ್, ವಿಶ್ವನಾಥ ಆಳ್ವ ಮಠದಮೂಲೆ ಕಳತ್ತಗದ್ದೆ, ಭರತ ಮಣಿಯಾಣಿ ಮಲ್ಲಮೂಲೆ ಉಪಸ್ಥಿತರಿದ್ದರು.
          ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಪ್ರಸಾದ ಮಣಿಯಾಣಿ ಸ್ವಾಗತಿಸಿ, ಹರೀಶ್ ಗೋಸಾಡ ವಂದಿಸಿದರು. ರಾಜೇಂದ್ರ ಮಣಿಯಾಣಿ ಕಾರ್ಯಕ್ರಮ ನಿರೂಪಿಸಿದರು.
        ಧಾರ್ಮಿಕ ಸಭೆಯ ಬಳಿಕ ಗೋವಿಂದ ಭಟ್ ಬೆಂದ್ರೋಡು ಮತ್ತು ಬಳಗದವರಿಂದ ಯಕ್ಷಗಾನ ತಾಳಮದ್ದಳೆ ನಡೆಯಿತು.ಬೆಳಗ್ಗೆ ಗಣಪತಿ ಹವನ, ಅಂಕುರ ಪೂಜೆ ಮುಂತಾದ ವೈದಿಕ ಕಾರ್ಯಕ್ರಮಗಳು ನಡೆದವು.  ಇದೇ ವೇಳೆ ವಿಘ್ನೇಶ್ವರ ಚಡಗ ಶಾಸ್ತಾನ ಮತ್ತು ಮನೆಯವರು ಶ್ರೀಕ್ಷೇತ್ರಕ್ಕೆ ರಜತ ಗಣಪತಿಯ ಕವಚವನ್ನು ಕಾಣಿಕೆಯಾಗಿ ಸಮರ್ಪಿಸಿದರು.
                        ಇಂದಿನ ಕಾರ್ಯಕ್ರಮ:
    ಫೆ.12ರಂದು ಬೆಳಗ್ಗೆ 8.44ರ ಅನಂತರ 10ರ ಒಳಗೆ ನಡೆಯುವ ಮೀನ ಲಗ್ನ ಸುಮುಹೂರ್ತದಲ್ಲಿ ಮಹಿಷಮರ್ದಿನೀ ಅಮ್ಮನವರ ಪುನ: ಪ್ರತಿಷ್ಠೆ, ಜೀವಕಲಶಾಭಿಷೇಕ, ಪರಿವಾರ ದೇವರುಗಳ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಚಂಡಿಕಾ ಹೋಮ ನಡೆಯಲಿದೆ. ರಾತ್ರಿ ಶ್ರೀ ಭೂತಬಲಿ ಉತ್ಸವ ನೆಯಲಿದೆ. ಸಂಜೆ ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ಸಮಾರೋಪ ಕಾರ್ಯಕ್ರಮದಲ್ಲಿ ಮಲ್ಲ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರ ಆಡಳಿತ ಮೊಕ್ತೇಸರ ಆನೆಮಜಲು ವಿಷ್ಣು ಭಟ್ ಅಧ್ಯಕ್ಷತೆ ವಹಿಸುವರು. ಎಡನೀರು ಮಠಾಧೀಶ ಶ್ರೀಶ್ರೀ  ಕೇಶವಾನಂದ ಭಾರತೀ ಸ್ವಾಮೀಜಿ  ಆಶೀರ್ವಚನ ನೀಡುವರು. ಎಂ.ಪುರುಷೋತ್ತಮ ಭಟ್ ಮವ್ವಾರು, ಅರವಿಂದ ಕುಮಾರ್ ಅಲೆವೂರಾಯ, ಬ್ರಹ್ಮಶ್ರೀ ಗೋಪಾಲಕೃಷ್ಣ ಭಟ್, ಕೆ.ಎನ್.ಕೃಷ್ಣ ಭಟ್, ವಾಸುದೇವ ಭಟ್ ಉಪ್ಪಂಗಳ, ಅಂಬಾಡಿ ಕಾರ್ನವರ್, ಶ್ರೀನಿವಾಸ ಅಮ್ಮಣ್ಣಾಯ ಉಪಸ್ಥಿತರಿರುವರು. ಹಿರಣ್ಯ ವೆಂಕಟೇಶ ಭಟ್ ಧಾರ್ಮಿಕ ಭಾಷಣ ಮಾಡುವರು.  ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿರುವರು. ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ ಕರ್ನಾಟಕ ಶಾಸ್ತ್ರೀಯ ಸಂಗೀತ, ಅಪರಾಹ್ನ ಭಕ್ತಿ ಝೇಂಕಾರ, ರಾತ್ರಿ ಯಕ್ಷಗಾನ ಬಯಲಾಟ ನಡೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries