ಮಂಜೇಶ್ವರ: ವರ್ಕಾಡಿ ಗ್ರಾಮ ಪಂಚಾಯತಿ ಆಶ್ರಯದಲ್ಲಿ ಸಾರ್ವಜನಿಕರು ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನಡೆಯುವ ಕಲೆ ಸಂಸ್ಕøತಿಯನ್ನು ಬಿಂಬಿಸುವ ವರ್ಕಾಡಿ ಉತ್ಸವ ಫೆ.8 ಮತ್ತು 9 ರಂದು ನಡೆಯಲಿರುವುದಾಗಿ ವರ್ಕಾಡಿ ಗ್ರಾ.ಪಂ.ಅಧ್ಯಕ್ಷ ಅಬ್ದುಲ್ ಮಜೀದ್ ಬಿ.ಎ. ಅವರು ಗ್ರಾ.ಪಂ. ನಲ್ಲಿ ಕರೆದ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭ ಅಧ್ಯಕ್ಷರು ಉತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಫೆ.8 ರಂದು ಬೆಳಗ್ಗೆ 9 ಗಂಟೆಗೆ ವರ್ಕಾಡಿ ಗ್ರಾ.ಪಂ ಕಚೇರಿ ಪರಿಸರದಲ್ಲಿ ಗ್ರಾ.ಪಂ.ಅಧ್ಯಕ್ಷ ಅಬ್ದುಲ್ ಮಜೀದ್ ಬಿ.ಎ. ಧ್ವಜಾರೋಹಣ ನಡೆಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಈ ಸಂದರ್ಭ ಗ್ರಾ.ಪಂ. ಉಪಾಧ್ಯಕ್ಷೆ ಸುನೀತಾ ಡಿ'ಸೋಜಾ ಮಹಾತ್ಮಾ ಗಾಂಧಿ ಪ್ರತಿಮೆಯನ್ನು ಅನಾವರಣಗೊಳಿಸಿ, ಪುಷ್ಪಾರ್ಚನೆ ನಡೆಸುವರು.
ಬೆಳಗ್ಗೆ 10 ಕ್ಕೆ ವಿಚಾರಗೋಷ್ಠಿ ನಡೆಯಲಿದೆ. ಮಂಜೇಶ್ವರ ಬ್ಲಾ.ಪಂ. ಉಪಾಧ್ಯಕ್ಷೆ ಮಮತಾ ದಿವಾಕರ್ ವಿಚಾರಗೋಷ್ಠಿ ಉದ್ಘಾಟಿಸುವರು. ಕಾನೂನು ಮಾಹಿತಿಯ ಬಗ್ಗೆ ಕಾಸರಗೋಡು ಜಿಲ್ಲಾ ಕಾನೂನು ಪ್ರಾಧಿಕಾರದ ಘಟಕ ಅಧಿಕಾರಿ ದಿನೇಶ ಕೊಡಂಗೆ ವಿಷಯ ಮಂಡನೆ ನಡೆಸುವರು. ಸ್ವೋದ್ಯೋಗದ ಬಗ್ಗೆ ನೌಷಾದ್ ಮತ್ತು ಅನಿಲ್ ಕುಮಾರ್ ಕೆ. ಮಾಹಿತಿ ನೀಡುವರು. ವರ್ಕಾಡಿ ಗ್ರಾ.ಪಂ. ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷೆ ಫಾತಿಮತ್ ಝೌರಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಅಪರಾಹ್ನ ಸಾಂಸ್ಕøತಿಕ ಮೆರವಣಿಗೆ ನಡೆಯಲಿದೆ.
ಸಂಜೆ 5 ಕ್ಕೆ ಕಂದಾಯ ಸಚಿವ ಇ.ಚಂದ್ರಶೇಖರನ್ ಉತ್ಸವವನ್ನು ಉದ್ಘಾಟಿಸುವರು. ಶಾಸಕ ಎಂ.ಸಿ. ಕಮರುದ್ದೀನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಉಳ್ಳಾಲ ಕ್ಷೇತ್ರದ ಶಾಸಕ ಯು.ಟಿ.ಖಾದರ್ ಮುಖ್ಯ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು. ರಾತ್ರಿ 8 ಕ್ಕೆ ಕಬಡ್ಡಿ ಪಂದ್ಯಾಟ ಏರ್ಪಡಲಿದೆ. ಫೆ.9 ರಂದು ಧರ್ಮನಗರದ ಮಿನಿ ಸ್ಟೇಡಿಯಂ ಸಭಾಂಗಣದಲ್ಲಿ ಕೃಷಿ ಮತ್ತು ಜಲಸಂರಕ್ಷಣೆ, ಆರೋಗ್ಯ ಮತ್ತು ಶುಚಿತ್ವ ವಿಷಯದ ಬಗ್ಗೆ ವಿಚಾರಗೋಷ್ಠಿ ನಡೆಯಲಿದೆ. ಕಾಸರಗೋಡು ಜಿ.ಪಂ. ಸದಸ್ಯೆ ಪುಪ್ಪಾ ಅಮೆಕ್ಕಳ ಗೋಷ್ಠಿಯನ್ನು ಉದ್ಘಾಟಿಸುವರು. ಇದೇ ಸಂದರ್ಭ ಸ್ನಾತಕೋತ್ತರ ಪದವೀಧರೆ ಮೀನಾಕ್ಷಿ ಬೊಡ್ಡೋಡಿ ಸಹಿತ ಹಲವು ಕ್ಷೇತ್ರಗಳಲ್ಲಿ ಉನ್ನತ ಸಾಧನೆಗೈದವರಿಗೆ ಸಮ್ಮಾನ ಕಾರ್ಯಕ್ರಮ ನಡೆಯಲಿದೆ. ನಿವೃತ್ತ ಸೈನಿಕರಿಗೆ ಗೌರವಾರ್ಪಣೆ ಕಾರ್ಯಕ್ರಮವೂ ನಡೆಯಲಿದೆ. ರಾತ್ರಿ 7 ರಿಂದ ಹಾಸ್ಯ ಕಾರ್ಯಕ್ರಮ `ಕುಸಲ್ದ ಕುರ್ಲರಿ' ನಡೆಯಲಿದೆ.
ಫೆ. 9ರಂದು 2 ಕ್ಕೆ ಕುಟುಂಬಶ್ರೀ ಕಾರ್ಯಕರ್ತೆಯರಿಂದ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮ, ಅಪರಾಹ್ನ 3 ಕ್ಕೆ ಅಕ್ಕಿ ಮುಡಿ ಕಟ್ಟುವ ಸ್ಪರ್ಧೆ, ತೆಂಗಿನ ಮಡಲು ಹೆಣೆಯುವುದು, ಚಾಪೆ ನೇಯುವ ಸ್ಪರ್ಧೆ, ಬುಟ್ಟಿ ಹೆಣೆಯುವ ಸ್ಪರ್ಧೆ ನಡೆಯಲಿದೆ. ಸಂಜೆ 5 ಕ್ಕೆ ನಡೆಯುವ ಸಮಾರೋಪ ಸಮಾರಂಭವನ್ನು ಸಂಸದ ರಾಜಮೋಹನ್ ಉಣ್ಣಿತ್ತಾನ್ ಉದ್ಘಾಟಿಸುವರು. ಈ ಸಂದರ್ಭ ಎಂ.ಸಿ.ಎಫ್. ಕಟ್ಟಡ ಉದ್ಘಾಟನೆ, ಪ್ರತಿಭಾ ಪುರಸ್ಕಾರ ಪ್ರದಾನ ನಡೆಯಲಿದೆ. ಗ್ರಾ.ಪಂ. ಅಧ್ಯಕ್ಷ ಅಬ್ದುಲ್ ಮಜೀದ್ ಬಿ.ಎ. ಅಧ್ಯಕ್ಷತೆ ವಹಿಸಲಿರುವ ಕಾರ್ಯಕ್ರಮದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಮಾಜಿ ಶಾಸಕ ಸಿ.ಎಚ್.ಕುಂಞಂಬು, ಚಿತ್ರ ನಟ ಪೃಥ್ವಿ ಅಂಬಾರ್ ಕಾರ್ಯಕ್ರಮದಲ್ಲಿ ಉಪಸ್ಥಿತರುವುದಾಗಿ ಅಧ್ಯಕ್ಷರು ತಿಳಿಸಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ಉಪಾಧ್ಯಕ್ಷೆ ಸುನಿತಾ ಡಿ'ಸೋಜ, ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷೆ ರಹ್ಮತ್ ರಜಾಕ್, ಕ್ಷೇಮ ಕಾರ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ತುಳಸಿ ಕುಮಾರಿ, ವಿಧ್ಯಾಭ್ಯಾಸ ಹಾಗೂ ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ಜೆಸಿಂತ ಡಿ'ಸೋಜ, ಸದಸ್ಯರುಗಳಾದ ಅಬ್ದುಲ್ ರಹ್ಮಾನ್, ಪೂರ್ಣಿಮಾ ಎಸ್. ಬೆರಿಂಜೆ, ಮೈಮೂನ, ಗೋಪಾಲಕೃಷ್ಣ ಪಜ್ವ, ವಸಂತ, ಸದಾಶಿವ ನಾಯ್ಕ್, ಆನಂದ ತಚ್ಚಿರೆ, ಸೀತಾ ಡಿ. ಹಾಗೂ ಕಾರ್ಯದರ್ಶಿ ರಾಜೇಶ್ವರಿ ಬಿ. ಉಪಸ್ಥಿತರಿದ್ದರು.