ಬದಿಯಡ್ಕ: ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಉತ್ಸವದ ಸಂದರ್ಭದಲ್ಲಿ ಭಾನುವಾರ ರಾತ್ರಿ ಶ್ರೀಭೂತಬಲಿ, ಪಲ್ಲಕಿ ಉತ್ಸವ, ರಥೋತ್ಸವ, ನೃತ್ತ ನಡೆಯಿತು. ಲಲಿತಾ ಸಹಸ್ರನಾಮ ಪಾರಾಯಣ, ವೇದಮಂತ್ರಗಳ ಘೋಷ, ಚೆಂಡೆ, ವಾದ್ಯಗಳು ಮೊದಲಾದವುಗಳೊಂದಿಗೆ ಪಲ್ಲಕ್ಕಿ ಉತ್ಸವದ ಸಂದರ್ಭದಲ್ಲಿ ನೂರಾರು ಮಂದಿ ಭಕ್ತಾದಿಗಳು ಪಾಲ್ಗೊಂಡಿದ್ದರು. ಬೆಳಗ್ಗೆ ಶ್ರೀಭೂತಬಲಿ, ಮಧ್ಯಾಹ್ನ ಮಹಾಪೂಜೆ, ಅನ್ನ ಸಂತರ್ಪಣೆ ನಡೆಯಿತು. ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ರಂಗಸಿರಿ ಬದಿಯಡ್ಕ ತಂಡದವರಿಂದ ಯಕ್ಷಗಾನ ಕೂಟ, ರವೀಂದ್ರ ಭಟ್ ಗೋಸಾಡ ಅವರಿಂದ ಶಾಸ್ತ್ರೀಯ ಸಂಗೀತ ಕಚೇರಿ ಹಾಗೂ ರಾತ್ರಿ ಅಗಲ್ಪಾಡಿ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಂದ ವಿವಿಧ ಕಾರ್ಯಕ್ರಮಗಳು ಜರಗಿತು. ಸೋಮವಾರ ಬೆಳಗ್ಗೆ ಶ್ರೀ ಜಟಾಧಾರಿ ದೈವದ ಭಂಡಾರ ರಾಜಾಂಗಣಕ್ಕೆ ಆಗಮನ, ಭಂಡಾರ ಸ್ವೀಕಾರ, ಮಧ್ಯಾಹ್ನ ಮಹಾಪೂಜೆ ಜರಗಿತು.
ಇಂದಿನ ಕಾರ್ಯಕ್ರಮಗಳು : ಬೆಳಿಗ್ಗೆ 7ಕ್ಕೆ ಕವಾಟೋದ್ಘಾಟನೆ, ಉಷಃಪೂಜೆ, 10 ರಿಂದ ಶ್ರೀಭೂತಬಲಿ, ಅವಭೃತ, ನೃತ್ತ, ಬಟ್ಳು ಕಾಣಿಕೆ, ಧ್ವಜಾವರೋಹಣ, ಮಂತ್ರಾಕ್ಷತೆ, ಮಹಾಪೂಜೆ, ಸಂತರ್ಪಣೆ, ಸಂಜೆ 6.30 ರಿಂದ ಭಜನೆ, ರಾತ್ರಿ 8 ರಿಂದ ಮಹಾಪೂಜೆ, ರಾತ್ರಿ 2.30 ರಿಂದ ಶ್ರೀಜಟಾಧಾರಿ ದೈವಗಳ ಮಹಿಮೆ, ಅರಸಿನಹುಡಿ ಪ್ರಸಾದ ವಿತರಣೆ ನಡೆಯಲಿದೆ.