ಕುಂಬಳೆ: ವಿಶೇಷವಾಗಿ ನಿರ್ಮಿಸಲಾಗಿರುವ ಮುಂಡಪ್ಪಳ ಶ್ರೀಕ್ಷೇತ್ರ ತನಗೆ ಹೊಸ ಅನುಭೂತಿ ನೀಡಿದೆ. ನಿರಂತರ ಮಂತ್ರೋಚ್ಚಾರದಿಂದ ಇಂದ್ರಿಯಗಳು ನಿಯಂತ್ರಣಕ್ಕೊಳಪಟ್ಟು ಆತ್ಮ ಜ್ಞಾನವನ್ನು ಪಡೆಯಲು ಸಾಧ್ಯವಿದೆ ಎನ್ನುವುದನ್ನು ತಾನು ಸ್ವತಃ ಅನುಸರಿಸಿ ಅನುಭವಿಸಿರುವೆ. ಈ ಹಿನ್ನೆಲೆಯಲಲಿ ಆಧ್ಯಾತ್ಮಕತೆ, ದೇವರ ಆರಾಧನೆಗಳು ನಿತ್ಯನಿರಂತರ ನಡೆಯುವುದು ಸಮಾಜ, ರಾಜ್ಯ, ರಾಷ್ಟ್ರದ ಏಳ್ಗೆಗೆ ಅಗತ್ಯ ಎಂದು ಸಂಸದ ರಾಜಮೋಹನ ಉಣ್ಣಿತ್ತಾನ್ ಅವರು ತಿಳಿಸಿದರು.
ಇಚ್ಲಂಪಾಡಿ ದರ್ಬಾರ್‍ಕಟ್ಟೆಯ ಮುಂಡಪ್ಪಳ್ಳ ಶ್ರೀರಾಜರಾಜೇಶ್ವರಿ ದೇವಾಲಯದ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಂಗವಾಗಿ ಆಯೋಜಿಸಿರುವ ಸಾಂಸ್ಕøತಿಕ ಧಾರ್ಮಿಕ ಕಾರ್ಯಕ್ರಮವನ್ನು ಶನಿವಾರ ಸಂಜೆ ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟ್ರದ ಪುಣ್ಯ ಮಣ್ಣಿಗೆ ನಮ್ಮ ನಿಲುವಿಗೆ ಎಂದಿಗೂ ಅರ್ಥವಾಗದ ವಿಶೇಷ ಆಧ್ಯಾತ್ಮಿಕ-ಧಾರ್ಮಿಕ ಶಕ್ತಿ ಇದೆ. ವಿವಿಧಡೆಗಳ ಆರಾಧನಾ ಕ್ರಮಗಳು ವಿಭಿನ್ನವಾಗಿದ್ದರೂ ಅದರದ್ದೇ ಆದ ಕ್ರಮಗಳಿಂದ ಶ್ರೀಮಂತಗೊಂಡು ಸನಾತನತೆ ಬೆಳೆದುನಿಂತಿದೆ. ಈಶ್ವರ-ಪಾರ್ವತಿ ಸಂಕಲ್ಪಗಳು
ಕಲಿಯುಗದಲ್ಲಿ ಸತ್ಕರ್ಮಗಳನ್ನು ಮಾಡದ ಹೊರತು ಆತ್ಮಕ್ಕೆ ಶಾಂತಿ ಲಭಿಸದು. ಸಂಪತ್ತು ನಿನ್ನೆ ಬೇರೊಬ್ಬರಲ್ಲಿತ್ತು. ಇಂದು ನಮ್ಮಲ್ಲಿದೆ. ನಾಳೆ ಮತ್ತೊಬ್ಬರ ಕೈಸೇರುತ್ತದೆ. ಆದರೆ ನಮ್ಮ ಬದುಕಿನ ಸಂಪಾದನೆ ಬದುಕಿನ ಕೊನೆಗೆ ಮರಣಿಸುವಾಗ ಏನನ್ನೂ ಕೊಂಡೊಯ್ಯಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಬದುಕಿನ ಪ್ರತಿಯೊಂದು ಕರ್ಮಗಳನ್ನೂ ಫಲಾಪೇಕ್ಷೆಯಿಲ್ಲದೆ, ದೈವಚಿಂತನೆಗಳಲ್ಲಿ ಮುನ್ನಡೆಯುತ್ತ ಸಾರ್ಥಕಪಡಿಸುವ ಬದುಕು ನಮ್ಮದಾಗಿರಲಿ ಎಂದು ಸಂಸದರು ತಿಳಿಸಿದರು.
ಕೋಳಾರು ಕುಂಞಣ್ಣ ಭಂಡಾರಿ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಬ್ರಹ್ಮಶ್ರೀದೇಲಂಪಾಡಿ ಬಾಲಕೃಷ್ಣ ತಂತ್ರಿ ಅವರು ಉಉಸ್ಥಿತರಿದ್ದು ಆಶೀರ್ವಚನ ನೀಡಿ, ಆರಾಧನಾಲಯಗಳ ಕಾಲಾಕಾಲಗಳ ಆಚರಣೆಗಳಿಂದ ಎಲ್ಲರಿಗೂ ನೆಮ್ಮದಿ ಪ್ರಾಪ್ತವಾಗುತ್ತದೆ. ಕುಂಬಳೆ ಸೀಮೆಯ ಪ್ರಾಚೀನ ರಾಜವಂಶದೊಂದಿಗೆ ಸಂಬಂಧಹೊಂದಿರುವ ರಾಜರಾಜೇಶ್ವರಿ ಕ್ಷೇತ್ರದ ಪುನರ್ ನವೀಕರಣದಿಂದ ಸಕಲ ಸಂಪತ್ತುಗಳು ಪ್ರಾಪ್ತವಾಗುತ್ತದೆ ಎಂದು ತಿಳಿಸಿದರು.ಸಂಸ್ಕಾರ ಸಂಸ್ಕøತಿಗಳು ನಮ್ಮ ಕ್ರಿಯಾತ್ಮಕತೆಯ ಸಂಕೇತ ಎಂದರು.
ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಸುಗುಣಾ ಬಿ.ತಂತ್ರಿ ಧಾರ್ಮಿಕ ಭಾಷಣಗೈದರು. ಯುಎಇ ಎಕ್ಸೇಂಜ್ ನ ನಿವೃತ್ತ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಎಣ್ಮಕಜೆ, ಕಂಬಾರು ಶ್ರೀದುರ್ಗಾಪರಮೇಶ್ವರಿ ಕ್ಷೇತ್ರದ ಬ್ಲಾ.ಪಂ.ಸದಸ್ಯ ಸತ್ಯಶಂಕರ ಭಟ್, ಕುಂಬಳೆ ಗ್ರಾ.ಪಂ.ಉಪಾಧ್ಯಕ್ಷೆ ಗೀತಾ ಲೋಕನಾಥ ಶೆಟ್ಟಿ, ಕಿದೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ರಘುರಾಮ ರೈ, ಉಪ್ಪಳ ಪಿಸಿಎಆರ್‍ಡಿ ಬ್ಯಾಂಕ್ ನಿರ್ದೇಶಕ ಸೋಮಶೇಖರ ಜೆ.ಎಸ್.,ಕುಂಬಳೆ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸದಾನಂದ ಕಾಮತ್, ಆರಿಕ್ಕಾಡಿ ಪಾರೆಸ್ಥಾನ ಶ್ರೀಭಗವತಿ ಆಲಿಚಾಮುಂಡಿ ಕ್ಷೇತ್ರದ ಅಧ್ಯಕ್ಷ ಎಂ.ಸುಕುಮಾರ, ಶಡ್ರಂಪಾಡಿ ಗೋಪಾಲಕೃಷ್ಣ ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ಶಂಕರನಾರಾಯಣ ಭಟ್ ಹೊಸಮನೆ, ಮೊಗೇರ ಸರ್ವೀಸ್ ಸೊಸೈಟಿ ಅಧ್ಯಕ್ಷ ಬಾಬು ಎಂ.ಪಚ್ಲಂಪಾರೆ ಉಪಸ್ಥಿತರಿದ್ದು ಶುಭಹಾರೈಸಿ ಮಾತನಾಡಿದರು.
ಕುಂಬಳೆ ಗ್ರಾ.ಪಂ.ಸದಸ್ಯರುಗಳಾದ ಹರೀಶ್ ಗಟ್ಟಿ, ಸುಕೇಶ್ ಭಂಡಾರಿ, ಮುರಳೀಧರ ಯಾದವ್ ನಾಯ್ಕಾಪು, ಅರುಣ ಎಂ. ಆಳ್ವ, ಕುಂಬಳೆ ಗ್ರಾ.ಪಂ. ಮಾಜಿ ಅಧ್ಯಕ್ಷ ಎಂ.ಅಬ್ಬಾಸ್, ಸ್ಥಳೀಯರಾದ ಮೊಹ್ಮದ್ ಕುಂಞÂ ದರ್ಬಾರ್‍ಕಟ್ಟೆ ಉಪಸ್ಥಿತರಿದ್ದರು. ದೇವಾಲಯದ ನಿರ್ಮಾತೃ ಕೆ.ಕೆ.ಶೆಟ್ಟಿ ಉಪಸ್ಥಿತರಿದ್ದರು. ದಾಮೋದರ ದೇಲಂಪಾಡಿ ಸ್ವಾಗತಿಸಿ, ಶಿವರಾಮ ಭಂಡಾರಿ ವಂದಿಸಿದರು. ವಿನೋದ ಜೆ. ರೈ ನಿರೂಪಿಸಿದರು.