ಪೆರ್ಲ:ಮಹಾಮ್ಮಾಯಿ ಮರಾಟಿ ವಿವಿದೋದ್ದೇಶ ಸಂಘ ರಚನೆ ಸಭೆ ಪೆರ್ಲ ಶ್ರೀ ಸತ್ಯನಾರಾಯಣ ಶಾಲಾ ಪರಿಸರದಲ್ಲಿ ಭಾನುವಾರ ನಡೆಯಿತು.
ಮಹಾಮ್ಮಾಯಿ ಸ್ವಸಾಹಾಯ ಸಂಘ ಸ್ಥಾಪಕಾಧ್ಯಕ್ಷ ಪುಟ್ಟ ನಾಯ್ಕ ಪೆರಿಯಾಲ್ತಡ್ಕ ಮಾತನಾಡಿ, ಹೆಚ್ಚಿನ ಮರಾಟಿ ಜನಾಂಗದವರು ಆರ್ಥಿಕ ಸಂದಿಗ್ಧತೆ ಎದುರಿಸುತ್ತಿದ್ದು ಸ್ವಾವಲಂಬಿಗಳಾಗಿ ಬದುಕಲು ವಿಸ್ಕøತ ಯೋಜನೆಗಳ ಅಗತ್ಯ ಇದೆ. ಈ ನಿಟ್ಟಿನಲ್ಲಿ ಸಹಕಾರಿ ಸಂಘಗಳ ರಚನೆಯ ಮಹತ್ವವನ್ನು ಅರ್ಥೈಸಬೇಕು ಎಮದರು. ಡಾ.ಕೇಶವ ನಾಯ್ಕ್ ಖಂಡಿಗೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮುದಾಯದ ಬಡ ಜನರ ಏಳಿಗೆ ಈ ರೀತಿಯ ಯೋಜನೆಗಳಿಂದ ಸಾಧ್ಯ. ಯೋಜನೆ ಸಾಕಾರಗೊಳಿಸಲು ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕು ಎಂದು ತಿಳಿಸಿದರು.
ಕೇರಳ ಸಂರಕ್ಷಣಾ ಸಮಿತಿ ಮಾಜಿ ಕಾರ್ಯದರ್ಶಿ ನಾರಾಯಣ ನಾಯ್ಕ್ ಅಡ್ಕಸ್ಥಳ ಮಾತನಾಡಿದರು. ಮಹಾಮ್ಮಾಯಿ ಸ್ವಸಾಹಾಯ ಸಂಘದ ಅಧ್ಯಕ್ಷ ಸದಾನಂದ ನಾಯ್ಕ ಬೆದ್ರಂಪಳ್ಳ, ಮರಾಟಿ ಸಂರಕ್ಷಣಾ ಸಮಿತಿ ವಾಣೀನಗರ ಹಿರಿಯ ನೇತಾರ ರಾಮ ನಾಯ್ಕ ನೆಕ್ಕರೆಮಜಲು, ಸಾವಿತ್ರಿ ಖಂಡಿಗೆ, ಸುಶೀಲಾ ತಡೆಗಲ್ಲು ಉಪಸ್ಥಿತರಿದ್ದರು.
ಈ ಸಂದರ್ಭ ನೂತನ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ಪುಟ್ಟ ನಾಯ್ಕ ಪೆರಿಯಾಲ್ತಡ್ಕ, ಪ್ರಧಾನ ಕಾರ್ಯದರ್ಶಿ ಆನಂದ ನಾಯ್ಕ ಬಿಡಾರ, ಉಪಾಧ್ಯಕ್ಷೆ ಸಾವಿತ್ರಿ ಖಂಡಿಗೆ ಮತ್ತು ಕುಂಞಣ್ಣ ನಾಯ್ಕ ಖಂಡೇರಿ, ಜೊತೆ ಕಾರ್ಯದರ್ಶಿ ಕೀರ್ತನ್ ಕುಮಾರ್ ಬಜಕುಡೆ ಮತ್ತು ಸುಶೀಲಾ ತಡೆಗಲ್ಲು, ಖಜಾಂಚಿ ವಿಶ್ವನಾಥ ನಾಯ್ಕ ಬಜಕೂಡ್ಲು ಆಯ್ಕೆಯಾದರು. ಡಾ.ಕೇಶವ ನಾಯ್ಕ ಖಂಡಿಗೆ, ನಾರಾಯಣ ನಾಯ್ಕ ಅಡ್ಕಸ್ಥಳ, ರಾಮನಾಯ್ಕ ನೆಕ್ಕರೆಮಜಲು ಸಲಹಾ ಸಮಿತಿಗೆ ಆಯ್ಕೆಯಾದರು. ಪುಟ್ಟನಾಯ್ಕ ಪೆರಿಯಾಲ್ತಡ್ಕ ಸ್ವಾಗತಿಸಿ, ಆನಂದ ನಾಯ್ಕ ಬಿಡಾರ ವಂದಿಸಿದರು.