ಕಾಸರಗೋಡು: ಪುಳ್ಕೂರು ಶ್ರೀ ಮಹಾದೇವ ದೇವಸ್ಥಾನದ ವಾರ್ಷಿಕ ಜಾತ್ರೆಯ ಸಂದರ್ಭ ಕಾರ್ಮಿಕ ನೇತಾರ, ವಕೀಲ ಪದ್ಮನಾಭ ಶೆಟ್ಟಿ ಅವರಿಗೆ ಹುಟ್ಟೂರ ಸನ್ಮಾನ ಸಮಾರಂಭ ಸಿರಿಬಾಗಿಲಿನಲ್ಲಿ ದೇವಸ್ಥಾನದ ಆಡಳಿತ ಸಮಿತಿ ವತಿಯಿಂದ ಜರಗಿತು.
ಕ್ಷೇತ್ರದ ತಂತ್ರಿವರ್ಯ ಬ್ರಹ್ಮ ಶ್ರೀ ಇರುವೈಲು ಕೃಷ್ಣದಾಸ ತಂತ್ರಿಗಳು ದೀಪ ಬೆಳಗಿಸಿ ಸಮರಂಭ ಉದ್ಘಾಟಿಸಿ, ಆಶೀರ್ವಚನ ನೀಡಿದರು. ವಿಶ್ವಹಿಂದು ಪರಿಷತ್ತು ಮಾತೃ ಸಮಿತಿಯ ಕಾಸರಗೋಡು ಜಿಲ್ಲಾಧ್ಯಕ್ಷೆಯಾದ ಮೀರಾ ಆಳ್ವ ಧಾರ್ಮಿಕ ಭಾಷಣ ಮಾಡಿದರು. ಶೀನ ಶೆಟ್ಟಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ, ವಕೀಲ ಪದ್ಮನಾಭ ಶೆಟ್ಟಿ ಅವರನ್ನು ಫಲ ಪುಷ್ಪ ಶಾಲು ಹೊದಿಸಿ ಸನ್ಮಾನಿಸಿದರು.
ತುರ್ತು ಪರಿಸ್ಥಿತಿಯ ಕಾಲದಲ್ಲಿ ಒಂಭತ್ತು ತಿಂಗಳ ಸೆರೆಮಮನೆವಾಸ ಅನುಭವಿಸುವ ಮಧ್ಯೆ ವಾಣಿಜ್ಯ ಶಾಸ್ತ್ರದಲ್ಲಿ ಪದವಿ ಗಳಿಸಿದ್ದ ಇವರು ಹಲವಾರು ಸಂಘಟನೆಗಳಲ್ಲಿ ಸಕ್ರಿಯರಾಗಿದ್ದುಕೊಂಡು ಧಾರ್ಮಿಕ,ಶೈಕ್ಷಣಿಕ,ಸಾಮಾಜಿಕ ಕ್ಷೇತ್ರಗಳಲ್ಲಿ ತನ್ನನ್ನು ತೂಡಗಿಸಿಕೊಂಡಿದ್ದರು.
ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ನಡೆಯಿತು. ಮಹಾದೇವ ಕಲ್ಚರಲ್ ಮತ್ತು ಸ್ಪೋಟ್ರ್ಸ್ ಕ್ಲಬ್‍ನ ಕೋಶಾಧಿಕಾರಿ ಅಜಿತ್ ಶೆಟ್ಟಿ ಸ್ವಾಗತಿಸಿದರು.ಉಷಾ.ಪಿ.ಶೆಟ್ಟಿ ಉಪಸ್ಥಿತರಿದ್ದರು. ಮಧೂರು ಪಂಚಾಯಿತಿ ಸದಸ್ಯೆ ಸುಮಿತ್ರಾ ಮಯ್ಯ ಮತ್ತು ಎಸ್.ಎಂ.ಸಿ.ಯ ಕಾರ್ಯದರ್ಶಿ ನಿತೀಶ್ ಆಳ್ವ ಉಪಸ್ಥಿತರಿದ್ದರು. ಬೆದ್ರಡ್ಕ ಸನಾತನ ಬಾಲಗೋಕುಲದ ಮಕ್ಕಳಿಂದ ಪ್ರಾರ್ಥನೆ ನಡೆಯಿತು. ಕ್ಷೇತ್ರದ ಆಡಳಿತ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಮೋಹನ್ ಕುಮಾರ್ ಶೆಟ್ಟಿ ಸನ್ಮಾನ ಪತ್ರ ವಾಚಿಸಿ, ಕಾರ್ಯಕ್ರಮ ನಿರೂಪಿಸಿದರು. ಸಮಿತಿ ಸದಸ್ಯ ರವೀಂದ್ರ ರೈ ವಂದಿಸಿದರು. ಕಾರ್ಯಕ್ರಮದ ಅಂಗವಾಗಿ ಸ್ಥಳೀಯ ಮತ್ತು ಸನಾತನ ಬಾಲಗೋಕುಲ ಬೆದ್ರಡ್ಕದ ಮಕ್ಕಳಿಂದ ನೃತ್ಯ ವೈವಿಧ್ಯ ನಡೆಯಿತು.