ಮಂಜೇಶ್ವರ: ಇತಿಹಾಸ ಪ್ರಸಿದ್ಧ ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಆಚರಣೆಯು ಭಕ್ತಿ ಸಡಗರದಿಂದ ನಡೆಯಿತು. ಮಧ್ಯಾಹ್ನ ಮಹಾಪೂಜೆ, ವಿಶೇಷ ಬಲಿವಾಡುಕೂಟ ಹಾಗೂ ರಾತ್ರಿ ವಿಶೇಷ ಜಾಮಪೂಜೆಗಳು ಹಾಗೂ ನಾಡಿನ ಭಜನಾ ತಂಡಗಳಿಂದ ಸೂರ್ಯಾಸ್ತದಿಂದ ಸೂರ್ಯೋದಯದವರೆಗೆ ಭಜನಾ ಕಾರ್ಯಕ್ರಮ ನಡೆದು ಶಿವರಾತ್ರಿ ಜಾಗರಣೆ ಆಚರಿಸಲಾಯಿತು.