ಮಧೂರು: ಪುಳ್ಕೂರು ಶ್ರೀ ರಕ್ತೇಶ್ವರೀ ಕ್ಷೇತ್ರ ಬ್ರಹ್ಮಕಲಶೋತ್ಸವ ಏಪ್ರಿಲ್ 27 ರಿಂದ 30 ರ ವರೆಗೆ ನಡೆಯಲಿದ್ದು, ಯಶಸ್ವಿಗಾಗಿ ಮಹಿಳಾ ಸಮಿತಿಯನ್ನು ರಚಿಸಲಾಯಿತು.
ಪುಷ್ಪಾ ಸದಾನಂದ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯನ್ನು ಕ್ಷೇತ್ರ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ತಾರಾನಾಥ ಮಧೂರು ಉದ್ಘಾಟಿಸಿದರು. ಜನಾರ್ಧನ, ಉಮೇಶ, ರವೀಂದ್ರ ರೈ, ರವಿ ಮೊದಲಾದವರು ಮಹಿಳಾ ಸಮಿತಿಯ ಉದ್ದೇಶದ ಕುರಿತು ಮಾತನಾಡಿದರು.
ಪದಾಧಿಕಾರಿಗಳಾಗಿ ಪುಷ್ಪಾ ಸದಾನಂದ(ಅಧ್ಯಕ್ಷೆ), ಲಕ್ಷ್ಮೀ ಜನಾರ್ಧನ, ಇಂದಿರಾ ನಾರಾಯಣ, ನವ್ಯಶ್ರೀ, ಜಯಪ್ರಶಾಂತ್(ಉಪಾಧ್ಯಕ್ಷರು), ವಿದ್ಯಾ ಪಿ., ವೀಣಾ ಉಮೇಶ್(ಪ್ರಧಾನ ಕಾರ್ಯದರ್ಶಿಗಳು), ಅನಿತಾ ಅಶೋಕ್, ಪ್ರೀತಿ ಸುರೇಶ್, ಶೈಲಜ, ಪ್ರಿಯ, ಶ್ಯಾಮಲಾ ಸುರೇಶ್(ಕಾರ್ಯದರ್ಶಿಗಳು), ರವಿಕಲ (ಕೋಶಾಧಿಕಾರಿ) ಅವರನ್ನು ಆರಿಸಲಾಯಿತು. ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುರೇಶ್ ಕೆ.ಎಂ. ಸ್ವಾಗತಿಸಿ, ವಿದ್ಯಾ ವಂದಿಸಿದರು.