ಬದಿಯಡ್ಕ: 2018-20ನೇ ಸಾಲಿನ ನವಜೀವನ ಶಾಲೆಯ ಸ್ಟೂಡೆಂಟ್ ಪೊಲೀಸ್ ತಂಡದ ಪಾಸಿಂಗ್ ಔಟ್ ಪರೇಡ್ ಶುಕ್ರವಾರ ಶಾಲಾ ಮೈದಾನದಲ್ಲಿ ನಡೆಯಿತು.
ಬದಿಯಡ್ಕ ಠಾಣಾಧಿಕಾರಿ ಅನೀಶ್ ಗೌರವ ವಂದನೆ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮುಹಮ್ಮದ್ ಅಶ್ರಫ್, ಸಹಾಯಕ ಮುಖ್ಯೋಪಾಧ್ಯಾಯಿನಿ ಮಿನಿ, ಡ್ರಿಲ್ ಇನ್ಸ್‍ಪೆಕ್ಟರ್ ವಿಶ್ವಾಂಭರನ್, ಸಿಪಿಒ ಕೃಷ್ಣ ಯಾದವ್, ಎಸಿಪಿಒ ವನಜ, ಅಧ್ಯಾಪಕರುಗಳಾದ ವಿಜಯನ್, ಹರೀಶ್ ಎಸ್.ಕೆ. ಉಪಸ್ಥಿತರಿದ್ದರು. ಮುಖ್ಯ ಅತಿಥಿಯಾಗಿ ಎಡಿಎನ್‍ಒ ಶ್ರೀಧರನ್ ಪಾಲ್ಗೊಂಡಿದ್ದರು. ವಿದ್ಯಾರ್ಥಿನಿ ಲತಾಶ್ರೀ ಪರೇಡ್ ಕಮಾಂಡೋ ಆಗಿ ಕಾರ್ಯನಿರ್ವಹಿಸಿದರು.