ಕಾಸರಗೋಡು: ಅಪಘಾತ ಸಾಧ್ಯತೆ ವಲಯಗಳಲ್ಲಿ ಟೀ ವೆಲ್ಡಿಂಗ್/ ಕಾಫಿವೆಲ್ಡಿಂಗ್ ಮೆಷಿನ್ ಗಳನ್ನು ಅಳವಡಿಸಲು ಕೈಜೋಡಿಸುವ ಅವಕಾಶಗಳಿವೆ. ವ್ಯಾಪಾರಿ-ವ್ಯವಸಾಯಿ ಸಂಘಟನೆಗಳು, ಪೆಟ್ರೋಲ್ ಪಂಪ್ ಸಂಸ್ಥೇಗಳು, ಕುಟುಂಬಶ್ರೀ ಯೂನಿಟ್ ಗಳು, ಇನ್ನಿತರ ಸಂಘ-ಸಂಸ್ಥೆಗಳು ಈ ನಿಟ್ಟಿನಲ್ಲಿ ಕೈಜೋಡಿಸಬಹುದು.
ರಾಷ್ಟ್ರೀಯ ಹೆದ್ದಾರಿ 66, ಕೆ.ಎಸ್.ಟಿ.ಪಿ. ರಸ್ತೆಗಳಲ್ಲಿ ರಸ್ತೆ ಸುರಕ್ಷೆ ಮಂಡಳಿ ಶಿಫಾರಸು ಮಾಡಿರುವ 15 ಅಪಘಾತ ಸಾಧ್ಯತೆ ವಲಯಗಳಲ್ಲಿ 2016-18 ವರ್ಷಗಳಲ್ಲಿ 215 ರಸ್ತೆ ಅಪಘಾತಗಳು ಸಂಭವಿಸಿದ್ದು, 58 ಮಂದಿ ಬಲಿಯಾಗಿದ್ದಾರೆ.
ಮಂಜೇಶ್ವರ ಹಿದಾಯತ್ ನಗರ, ಕುಂಜತ್ತೂರು ಮಾಡ, ಉಪ್ಪಳ ಗೇಟ್, ಮಂಗಲ್ಪಾಡಿ, ಹೊಸಂಗಡಿ, ವಾಮಂಜೂರು, ಚೆರ್ಕಳ, ನೀಲೇಶ್ವರ, ಪೆರಿಯ ಬಝಾರ್, ತ್ರಿಕನ್ನಡ್, ಕರುವಾಂಜೇರಿ, ಉದುಮಾ ಲಲಿತ್ ರೆಸಾರ್ಟ್, ಐಂuಟಿಜeಜಿiಟಿeಜತ್, ಪೆÇಯಿನಾಚಿ, ಪಾಲಕುನ್ನು ಪ್ರದೇಶಗಳಲ್ಲಿ ಅಪಘಾತ ಸಾಧ್ಯತೆಗಳು ಅಧಿಕವಾಗಿವೆ. ರಾತ್ರಿ ಕಾಲಗಳಲ್ಲಿ ಇಲ್ಲಿ ಅಪಘಾತ ಅತ್ಯಧಿಕ ಪ್ರಮಾಣದಲ್ಲಿ ನಡೆಯುತ್ತಿವೆ. ಕೈಜೋಡಿಸುವ ನಿಟ್ಟಿನಲ್ಲಿ ಮಾಹಿತಿಗಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: 04994255833, 9447726900, 9400225996.