ಕಾಸರಗೋಡು: ಕಾಸರಗೋಡು ತಾಲೂಕು ಸಪ್ಲೈ ಆಫೀಸ್ ವ್ಯಾಪ್ತಿಯ ವಿವಿಧ ಪಂಚಾಯತ್‍ಗಳ ಕೃಷಿ ಅಗತ್ಯಕ್ಕಿರುವ ಸೀಮೆ ಎಣ್ಣೆ ಪರವಾನಗಿಗಳು ವಿವಿಧ ದಿನಾಂಕಗಳಲ್ಲಿ, ವಿವಿಧ ಕೇಂದ್ರಗಳಲ್ಲಿ ವಿತರಣೆಗೊಳ್ಳಲಿವೆ.
ಬೆಳಗ್ಗೆ 10.30ರಿಂದ ಮಧ್ಯಾಹ್ನ 3 ಗಂಟೆ ವರೆಗೆ ವಿತರಣೆ ನಡೆಯಲಿದೆ. ಫೆ.20ರಂದು ಕುತ್ತಿಕೋಲ್, ಮುಳಿಯಾರು, ಚೆಂಗಳ, 22ರಂದು ಬೇಡಡ್ಕ, ಬೆಳ್ಳೂರು, ಬದಿಯಡ್ಕ, ಕಾರಡ್ಕ, 24ರಂದು ದೇಲಂಪಾಡಿ, ಕುಂಬ್ಡಾಜೆ, ಚೆಮ್ನಾಡ್, ಮಧೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೃಷಿ ಭವನಗಳಲ್ಲಿ, 24ರಂದು ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯತ್, ಕಾಸರಗೋಡು ನಗರಸಭೆ ವ್ಯಾಪ್ತಿಯ ಮಂದಿಗೆ ಕಾಸರಗೋಡು ತಾಲೂಕು ಸಪ್ಲೈ ಆಫೀಸ್‍ನಲ್ಲಿ ಸೀಮೆ ಎಣ್ಣೆ ಪರವಾನಗಿ ವಿತರಿಸಲಾಗುವುದು. ಪಡಿತರ ಚೀಟಿ, ಆಧಾರ್ ಕಾರ್ಡ್‍ಗಳ ನಕಲು, ಕೃಷಿ ಭವನದಿಂದ ಲಭಿಸಿದ ಟೋಕನ್, ಪರವಾನಗಿಯ ಮೌಲ್ಯ 50 ರೂ. ಸಹಿತ ಪರವಾನಗಿಯ ಮಾಲಿಕ, ಯಾ ಕಾರ್ಡಿನಲ್ಲಿ ಹೆಸರಿರುವ ಯಾರಾದರೂ ಹಾಜರಾಗಿ ಆಯಾ ಕೇಂದ್ರಗಳಿಂದ ಪರವಾನಗಿ ಪಡೆಯಬೇಕು.