HEALTH TIPS

ಸ್ಕೌಟ್ಸ್ ಮತ್ತು ಗೈಡ್ ನೇತೃತ್ವದಲ್ಲಿ ಪಕ್ಷಿ ವೀಕ್ಷಣೆ-ಶಾಲಾ ಪರಿಸರದಲ್ಲಿ ಬಣ್ಣದ ಬಾನಾಡಿಗಳು

       
           ಕುಂಬಳೆ: ಒಣಗಿದ ಗಿಡ ಮರಗಳಿಗೆ ಹಕ್ಕಿಗಳು ಭೇಟಿ ನೀಡುವುದು ಯಾಕೆ ? ಮುರಕಲ್ಲು ಪಾರೆ ಪ್ರದೇಶದಲ್ಲೂ ಹಕ್ಕಿಗಳು ಮೊಟ್ಟೆಗಳನ್ನು ಇಡುತ್ತವೆಯೇ ? ನಿರಂತರ ಇಂಪಾದ ಸ್ವರ ಹೊರಡಿಸುವ ಪಕ್ಷಿಗಳಿಗೆ ಆಯಾಸವೆಂಬುದು ಇಲ್ಲವೇ ? ಹಕ್ಕಿಗಳಂತೆ ನಮಗೂ ಬಣ್ಣದ ರೆಕ್ಕೆಗಳಿರುತ್ತಿದ್ದರೆ ?
         ಕುಂಬಳೆ ಹೋಲಿ ಫ್ಯಾಮಿಲಿ ಶಾಲೆಯಲ್ಲಿ ಹಮ್ಮಿಕೊಂಡ ಕ್ಯಾಂಪಸ್ ಬರ್ಡ್ ಕೌಂಟ್ ಎಂಬ ಪಕ್ಷಿ ನಿರೀಕ್ಷಣಾ ಕಾರ್ಯಕ್ರಮವು ಇಂತಹ ಹಲವಾರು ಕುತೂಹಲಕಾರಿ ಪ್ರಶ್ನೆಗಳಿಗೆ ವೇದಿಕೆಯಾಯಿತು.
     ಶಾಲೆಯ ಆಟದ ಮೈದಾನ ಹಾಗೂ ಪೆÇಸ್ತಡ್ಕ ಪ್ರದೇಶದಲ್ಲಿ ಎರಡು ದಿನಗಳ ಹಕ್ಕಿ ಗಣತಿಯನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು. ಬೆಳಗ್ಗೆ ಮತ್ತು ಸಂಜೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ವಯಂ ಸೇವಕರು ನಿರೀಕ್ಷಣೆಯಲ್ಲಿ ಪಾಲ್ಗೊಂಡರು.
         ಕಂದು ನೊಣ ಹಿಡುಕ (ಏಷ್ಯನ್  ಬ್ರೌನ್ ಫ್ಲೈಕ್ಯಾಚರ್ ), ನೀಲ ಬಾಲದ ಕಳ್ಳಿ ಪೀರ (ಬ್ಲೂ ಟೈಲ್ಡ್ ಬೀ ಈಟರ್), ಹಳದಿ ಟಿಟ್ಟಿಭ (ಎಲ್ಲೋ ವ್ಯಾಟಲ್ಡ್ ಲ್ಯಾಪ್ವಿಂಗ್), ಮಲೆ ನೆಲಗುಬ್ಬಿ (ಮಲಬಾರ್ ಲಾರ್ಕ್), ಕಂಚು ಕುಟಿಗ (ಕೋಪರ್ ಸ್ಮಿತ್ ಬಾರ್ಬೆಟ್) ಮೊದಲಾದ ಒಟ್ಟು 42 ವಿಧದ ಪಕ್ಷಿಗಳನ್ನು ಇದೇ ಸಂದರ್ಭದಲ್ಲಿ ಗುರುತಿಸಲಾಯಿತು.
ಬೆಂಕಿ ಅನಾಹುತದಿಂದ ಮೈದಾನದ ಪೆÇದರುಗಳ ನಾಶ ಹಾಗೂ ಅಲ್ಲಲ್ಲಿ ಪ್ಲಾಸ್ಟಿಕ್ ಮಾಲಿನ್ಯವನ್ನು ಉರಿಸಿರುವುದರಿಂದ ಜೈವ ವೈವಿಧ್ಯತೆಯ ನಷ್ಟವನ್ನು ಗಮನಿಸಿದ ಮಕ್ಕಳು ಬೇಸರ ವ್ಯಕ್ತ ಪಡಿಸಿದರು.
     ಹಕ್ಕಿಗಳ ವಲಸೆಯ ಸಮಯವಾದ್ದರಿಂದ ವಿಶ್ವದೆಲ್ಲೆಡೆ ಫೆಬ್ರವರಿ ತಿಂಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಭಾರತದಲ್ಲಿ ಬರ್ಡ್ ಕೌಂಟ್ ಇಂಡಿಯಾ ಎಂಬ ಸ್ವಯಂ ಸೇವಾ ಸಂಸ್ಥೆಯ ಮೇಲ್ವಿಚಾರಣೆಯಲ್ಲಿ ಜರಗಿದ ಪಕ್ಷಿ ನಿರೀಕ್ಷಣೆಯಲ್ಲಿ ಕಾಸರಗೋಡು ಜಿಲ್ಲೆಯಿಂದ ಕುಂಬಳೆ ಹೋಲಿ ಫ್ಯಾಮಿಲಿ ಶಾಲೆ ಮಾತ್ರವೇ ಭಾಗವಹಿಸಿತ್ತು.

       ಅಭಿಮತ:
       ಮಕ್ಕಳಿಗೊಂದು ಹೊಸ ಅನುಭವವಿದು. ತಮ್ಮ ಸುತ್ತು ಮುತ್ತಲಿರುವ ಹಕ್ಕಿಗಳ ಬಗ್ಗೆ ತಿಳಿದು ಪರಿಸರಕ್ಕೆ ಪೂರಕ ಜೀವನ ರೀತಿಯನ್ನು ಅಳವಡಿಸಿಕೊಳ್ಳಲು ಇದರಿಂದ ವಿದ್ಯಾರ್ಥಿಗಳಿಗೆ ಸಾಧ್ಯವಾಗಲಿದೆ. ನಿರೀಕ್ಷಣೆ ಹಾಗೂ ಸಂಶೋಧನೆಯ ಮನೋಭಾವ ಬೆಳೆಯಲೂ ಪಕ್ಷಿ ನಿರೀಕ್ಷಣೆಯು ಉತ್ತಮ ಚಟುವಟಿಕೆಯಾಗಿದೆ.
                   - ರಾಜು ಕಿದೂರು
                ಶಿಕ್ಷಕ, ಪಕ್ಷಿ ಪ್ರೇಮಿ ತಂಡ ಸದಸ್ಯ, ಕಾಸರಗೋಡು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries