ನವದೆಹಲಿ: ದೇಶದ ಟೆಲಿಕಾಂ ವಲಯದಲ್ಲಿ ಸದ್ಯ ಟೆಲಿಕಾಂ ಕಂಪನಿಗಳ ನಡುವೆ ಪೈಪೆÇೀಟಿ ತ್ರೀವವಾಗಿದೆ. ಖಾಸಗಿ ಟೆಲಿಕಾಂಗಳ ಅಬ್ಬರದ ಓಟಕ್ಕೆ ಸರ್ಕಾರಿ ಸ್ವಾಮ್ಯದ ಬಿಎಸ್ ಎನ್ ಎಲ್ ಸಂಸ್ಥೆ ಸಹ ಭರ್ಜರಿ ಸ್ಫರ್ಧೆ ಒಡ್ಡಿದೆ. ಈಗಾಗಲೇ ಹಲವು ಆಕರ್ಷಕ ಪ್ರೀಪೇಯ್ಡ್ ಪ್ಲ್ಯಾನ್‍ಗಳನ್ನು ಪರಿಚಯಿಸಿರುವ ಬಿಎಸ್ ಎನ್ ಎಲ್ ಟೆಲಿಕಾಂ ಇದೀಗ ತನ್ನ ಗ್ರಾಹಕರಿಗೆ ಭಾರಿ ಸರ್‍ಪ್ರೈಸ್ ನೀಡಿದ್ದು, ಗ್ರಾಹಕರಿಗೆ ಖುಷಿ ನೀಡಿದೆ.
ಬಿಎಸ್ ಎನ್ ಎಲ್ ಟೆಲಿಕಾಂ ತನ್ನ 1999ರೂ. ವಾರ್ಷಿಕ ಪ್ರೀಪೇಯ್ಡ್ ಪ್ಲ್ಯಾನಿನಲ್ಲಿ ಇದೀಗ ಮತ್ತೆ 71 ದಿನಗಳನ್ನು ಹೆಚ್ಚಿಸಿದೆ. ಈ ಹಿಂದೆ ನೀಡಿದ್ದ ಈ ಕೊಡುಗೆಯನ್ನು ಸಂಸ್ಥೆಯು ಮತ್ತೊಮ್ಮೆ ಘೋಷಿಸಿದೆ. ಈ ಮೂಲಕ ವ್ಯಾಲಿಡಿಟಿ ಪ್ರಿಯ ಗ್ರಾಹಕರ ಮುಖದಲ್ಲಿ ಖುಷಿ ತಂದಿದೆ. ಪ್ರಸ್ತುತ ಈ ಪ್ರೀಪೇಯ್ಡ್ ಪ್ಲ್ಯಾನ್ ಕೊಡುಗೆಯಲ್ಲಿ ಗ್ರಾಹಕರಿಗೆ ಒಟ್ಟು 436 ದಿನಗಳ ವ್ಯಾಲಿಡಿಟಿ ವ್ಯಾಲಿಡಿಟಿ ದೊರೆಯಲಿದೆ.
ಅಧಿಕ ವ್ಯಾಲಿಡಿಟಿ ಕೊಡುಗೆ ಬಿಎಸ್ ಎನ್ ಎಲ್ 2020ರ 'ಗಣರಾಜ್ಯೋತ್ಸವ ದಿನ'ದ ಪ್ರಯುಕ್ತ ತನ್ನ ಜನಪ್ರಿಯ 1999ರೂ. ಪ್ಲ್ಯಾನಿನ ವ್ಯಾಲಿಡಿಟಿ ಅವಧಿಯಲ್ಲಿ 71 ದಿನಗಳ ಹೆಚ್ಚಳ ಘೋಷಿಸಿತ್ತು. ಈಗ ಮತ್ತೆ ಈ ಯೋಜನೆಯನ್ನು ಮುಂದುವರೆಸುವುದಾಗಿ ಹೇಳಿದೆ. ಹೀಗಾಗಿ ವಾರ್ಷಿಕ ಪ್ಲ್ಯಾನ್ ರೀಚಾರ್ಜ್ ಮಾಡಿಸಿಕೊಳ್ಳುವ ಗ್ರಾಹಕರಿಗೆ 365 ದಿನಗಳ ವ್ಯಾಲಿಡಿಟಿ ಜೊತೆಗೆ ಹೆಚ್ಚುವರಿಯಾಗಿ 71 ದಿನಗಳು ಸೇರಿಕೊಳ್ಳಲಿವೆ.
1,999ರೂ. ಪ್ಲ್ಯಾನ್ ಪ್ರಯೋಜನಗಳು ಬಿಎಸ್ ಎನ್ ಎಲ್ ನ 1,999ರೂ. ಪ್ಲ್ಯಾನ್ ಇದೀಗ ಆಫರ್‍ನಲ್ಲಿ ಲಭ್ಯ ಇದೆ. ಈ ಪ್ಲ್ಯಾನಿನಲ್ಲಿ ಭಾರತದ ಯಾವುದೇ ನೆಟ್‍ವರ್ಕ್‍ಗೆ ಅನಿಯಮಿತ ವಾಯಿಸ್ ಕರೆಗಳು, ಪ್ರತಿದಿನ 3ಉಃ ಡೇಟಾ ಸೌಲಭ್ಯ ಸಹ ದೊರೆಯಲಿದೆ (ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 1308ಉಃ ಡಾಟಾ). ಇದರೊಂದಿಗೆ ಪ್ರತಿದಿನ 100 ಎಸ್‍ಎಂಎಸ್ ಜೊತೆಗೆ ಬಿಎಸ್ ಎನ್ ಎಲ್ ಟ್ಯೂನ್ಸ್ ಮತ್ತು ಬಿಎಸ್ ಎನ್ ಎಲ್ ಟಿವಿ ಚಂದಾದಾರಿಕೆಯು ಸಹ ಉಚಿತವಾಗಿ ಲಭ್ಯವಾಗಲಿವೆ.
ಸೀಮಿತ ಅವಧಿಯ ಆಫರ್:
ಬಿಎಸ್ ಎನ್ ಎಲ್ ನ 1,999ರೂ. ಪ್ಲ್ಯಾನಿನಲ್ಲಿ ಮತ್ತೆ ಘೋಷಿಸಿರುವ ಹೆಚ್ಚುವರಿ 71 ದಿನಗಳ ವ್ಯಾಲಿಡಿಟಿ ಆಫರ್ ಸೀಮಿತ ಅವಧಿಯ ಕೊಡುಗೆ ಆಗಿದೆ. ಈ ಕೊಡುಗೆಯು ಇದೇ ಮಾರ್ಚ್ 1, ರಿಂದ ಮಾರ್ಚ್ 31 ವರೆಗೂ ಮಾತ್ರ ಚಾಲ್ತಿ ಇರಲಿದೆ ಎಂದು ಘೋಷಿಸಿದೆ. ಈ ಅವಧಿಯಲ್ಲಿ ರೀಚಾರ್ಜ್ ಮಾಡಿಸಿಕೊಂಡರೇ ಹೆಚ್ಚು ವ್ಯಾಲಿಡಿಟಿ ಸಿಗಲಿದೆ ಹಾಗೂ ಅಧಿಕ ಡೇಟಾ ಪ್ರಯೋಜನ ಸಹ ದೊರೆಯುತ್ತದೆ.
ಇತರೆ ದೀರ್ಘಾವಧಿ ಪ್ಲ್ಯಾನ್:
ಬಿಎಸ್‍ಎಸ್ ಎನ್ ಎಲ್ ನ 999ರೂ. ಪ್ಲ್ಯಾನ್ ಸಹ ಒಂದು ದೀರ್ಘಾವಧಿಯ ಯೋಜನೆ ಆಗಿದೆ. ಈ ಪ್ಲ್ಯಾನ್ ವಾಯಿಸ್ ಕರೆ ಸೌಲಭ್ಯದ ಪ್ಲ್ಯಾನ್ ಆಗಿದ್ದು, ಡೇಟಾ ಸೌಲಭ್ಯ ಕಡಿಮೆ. ಈ ಪ್ಲ್ಯಾನ್ ಒಟ್ಟು 240 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದ್ದು, ಈ ಅವಧಿಯಲ್ಲಿ ಪ್ರತಿದಿನ 250 ನಿಮಿಷಗಳ ಉಚಿತ ಕರೆಯ ಸೌಲಭ್ಯ ದೊರೆಯುತ್ತದೆ. ಇದರೊಂದಿಗೆ ಎಸ್ ಎಂ ಎಸ್ ಲಭ್ಯ. ಆದರೆ ಪ್ರತಿದಿನ ಪ್ರತ್ಯೇಕ ಯಾವುದೇ ಡೇಟಾ ಪ್ರಯೋಜನ ದೊರೆಯುವುದಿಲ್ಲ. ಆದರೆ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 5 ಜಿಬಿ ಡೇಟಾ ಪ್ರಯೋಜನ ಇರುತ್ತದೆ. ಹೀಗಾಗಿ ಇದು ಕರೆ ಮತ್ತು ವ್ಯಾಲಿಡಿಟಿ ಇಷ್ಟ ಪಡುವ ಗ್ರಾಹಕರಿಗೆ ಬೆಸ್ಟ್ ಪ್ಲ್ಯಾನ್ ಆಗಿದೆ ಎಮದು ವಿಶ್ಲೇಶಿಸಲಾಗುತ್ತಿದೆ.