HEALTH TIPS

ಸಾಮಾಜಿಕ ಜಾಲತಾಣಗಳೊಂದಿಗೆ ವ್ಯವಹರಿಸುವಾಗ ಎಚ್ಚರ ಅಗತ್ಯ-ಚಿನ್ಮಯದಲ್ಲಿ ಜಾಗೃತಿ ತರಗತಿ

   
             ಕಾಸರಗೋಡು: ವಿದ್ಯಾನಗರದ ಚಿನ್ಮಯ ವಿದ್ಯಾಲಯದಲ್ಲಿ ಕಂಪ್ಯೂಟರ್ ವಿಭಾಗದ ವಿದ್ಯಾರ್ಥಿಗಳು ಸೈಬರ್ ಸುರಕ್ಷತೆಯ ಬಗೆಗಿನ ತಿಳಿವಳಿಕೆ ತರಗತಿಯನ್ನು ಏರ್ಪಡಿಸಿದರು.
ದೈನಂದಿನ ಆಗು ಹೋಗುಗಳಿಗೆ ಇಂಟರ್ನೆಟ್ ಸೌಲಭ್ಯಗಳನ್ನು ಬಳಸುವ ಎಳೆ ಹರೆಯದ ಬಾಲಕರು ಸಾಕಷ್ಟು ಎಚ್ಚರ ವಹಿಸದಿದ್ದಲ್ಲಿ ದುರಂತವನ್ನೆದುರಿಸ ಬೇಕಾಗುವುದು. ಅಂತರ್ಜಾಲ ಎಂದರೆ ವಾಹನಗಳ ದಟ್ಟಣೆಯಿದ್ದಲ್ಲಿ ಎಚ್ಚರ ವಹಿಸಿ ನಡೆದಂತೆ. ಅನೇಕ ಆಕರ್ಷಕ ಮಾಹಿತಿಗಳು, ಬೇಡಿಕೆಗಳು ಕಣ್ಣ ಮುಂದೆ ನಲಿದಾಡುವಾಗ ದುಡುಕದೆ ಬುದ್ಧಿವಂತಿಕೆಯಿಂದ ನಿರಾಕರಿಸಬೇಕು. ಸಂದೇಹವಿದ್ದಲ್ಲಿ ಹೆತ್ತವರನ್ನು, ಹಿರಿಯರ ಅಭಿಪ್ರಾಯವನ್ನು ಕೇಳುವುದು ಉತ್ತಮ ಎಂದು ವಿದ್ಯಾರ್ಥಿಗಳು ಅಭಿಪ್ರಾಯಪಟ್ಟರು. 
           ಮನೆಯಲ್ಲಿ ಕಂಪ್ಯೂಟರ್ ಇಲ್ಲದವರು ಸೈಬರ್ ಕೆಫೆಗೆ ಹೋಗುತ್ತಾರೆ. ತಮ್ಮ ಬಗ್ಗೆ ಎಚ್ಚರ ವಹಿಸುವವರು ಇಲ್ಲವೆಂದಾಗ ಅಪ್ರಾಪ್ತ ಬಾಲಕರು ವೀಕ್ಷಿಸ ತಕ್ಕುದಲ್ಲದ ಸಂಗತಿಗಳನ್ನು ವೀಕ್ಷಿಸುತ್ತಾ ತಪ್ಪು ದಾರಿಯತ್ತ ಸಾಗುವ ಸಾಧ್ಯತೆ ಇರುವುದು.
       ನಾವು ವೈಯಕ್ತಿಕ ಮಾಹಿತಿಯನ್ನು ಇಂಟರ್ನೆಟ್‍ನಲ್ಲಿ ಸೂಚಿಸುವುದು ಸರಿಯಲ್ಲ. ಮೊಬೈಲ್‍ಗೆ ರಿಚಾರ್ಜ್ ಮಾಡುವಾಗಲೂ ಅಪಾಯಕರವಲ್ಲದ ಕೇಂದ್ರಗಳನ್ನು ನಾವು ಆಯ್ಕೆ ಮಾಡುವುದು ಉತ್ತಮ. ಮೊಬೈಲ್ ಆಟವಾಡುವಾಗ ಸ್ನೇಹಿತರಲ್ಲದವರೊಂದಿಗೆ ಅಪರಿಚಿತರೊಂದಿಗೆ ಆಟ ವಾಡಿದರೆ ಜೀವಕ್ಕೇ ಅಪಾಯ ಸಂಭವಿಸಬಹುದು.
        ಇತರರ ವೈಫೈನ್ನು ಆಶ್ರಯಿಸುವಾಗಲೂ ತಪ್ಪದೇ ಲೋಗ್ ಔಟ್(ನಿರ್ಗಮನ ಗುಂಡಿ) ಯನ್ನು ಒತ್ತುವುದನ್ನು ಮರೆಯಬಾರದು. ಸಾಮಾಜಿಕ ಜಾಲ ತಾಣಗಳು ನಮ್ಮನ್ನು ಬಲೆಗೆ ಬೀಳಿಸುವ ಮಾಧ್ಯಮ ಗಳಾಗಿವೆ. ಅಪರಿಚಿತರೊಂದಿಗೆ ಸಂತೋಷ, ಸಿಟ್ಟನ್ನು ಪ್ರದರ್ಶಿಸುತ್ತಾ ಕಣ್ಣಿಗೆ ಕಾಣದವರೊಂದಿಗೆ, ಅಪರಿಚಿತರೊಂದಿಗೆ ಸಲಿಗೆ ಸಲ್ಲದು. ಈ ಬಗ್ಗೆ ಹೆತ್ತವರು ಸದಾ ಮಕ್ಕಳ ಕಾವಲುಗಾರರಾಗಿ ದುಡಿಯಬೇಕಾದುದು ಅನಿವಾರ್ಯ.
          ಚಿನ್ಮಯ ವಿದ್ಯಾಲಯದ 11 ನೇ ತರಗತಿಯ ನದಾ ಅಬ್ದುಲ್ಲ, 9 ನೇ ತರಗತಿಯ ದೀಪ್ತಿ ಭಾಸ್ಕರನ್, ಆಯಿಷ ಗುರಿಕಲ್, ಹಿಮಾನಿ ತರಗತಿಯನ್ನು ನಡೆಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries