ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸಿಎಎ ಬಗ್ಗೆ ರಕ್ಷಣಾತ್ಮಕವಾಗಿರುವುದು ಬೇಡ, ಬಲವಾಗಿ ಸಮರ್ಥಿಸಿಕೊಳ್ಳಿ ಎಂದು ಪ್ರಧಾನಿ ನರೇಂದ್ರ ಮೋದಿ ಎನ್ ಡಿಎ ನಾಯಕರಿಗೆ ಸೂಚನೆ ನೀಡಿದ್ದಾರೆ.
ಸಂಸತ್ ಅಧಿವೇಶನದಲ್ಲಿ ಸಿಎಎ ವಿರುದ್ಧ ಪ್ರತಿಪಕ್ಷಗಳ ಟೀಕೆಗಳಿಗೆ ಆಕ್ರಮಣಕಾರಿಯಾಗಿ ಉತ್ತರ ನೀಡುವಂತೆ ಎನ್ ಡಿಎ ನಾಯಕರಿಗೆ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ ಹಾಗೂ ನಮಗೆ ಅಲ್ಪಸಂಖ್ಯಾತರು ದೇಶದ ಇತರ ನಾಗರಿಕರಂತೆಯೇ ಎಂದು ಹೇಳಿದ್ದಾರೆ.ಬಜೆಟ್ ಅಧಿವೇಶನದಲ್ಲಿ ಪ್ರತಿಪಕ್ಷಗಳ ಟೀಕೆಗಳಿಗೆ ಉತ್ತರಿಸಲು ಪ್ರತಿತಂತ್ರ ಹೆಣೆಯುವುದಕ್ಕಾಗಿ ಎನ್ ಡಿಎ ನಾಯಕರ ಸಭೆ ನಡೆಯಿತು. ಈ ಸಭೆಯಲ್ಲಿ ಮೋದಿ ಎನ್ ಡಿಎ ನಾಯಕರಿಗೆ ಸಲಹೆ ನೀಡಿದ್ದಾರೆ.
ಸಿಎಎಗೆ ಸಂಬಂಧಪಟ್ಟಂತೆ ಸರ್ಕಾರ ಯಾವುದೇ ತಪ್ಪನ್ನೂ ಮಾಡಿಲ್ಲ. ಅದರ ಬಗ್ಗೆ ರಕ್ಷಣಾತ್ಮಕವಾಗಿ ನಡೆದುಕೊಳ್ಳುವ ಅಗತ್ಯವಿಲ್ಲ ಎಂಬುದು ಮೋದಿ ಅಭಿಪ್ರಾಯವಾಗಿದೆ. ಬೋಡೋ ಅಕಾಡ್ ಗೆ ಸಹಿ ಹಾಗೂ ತ್ರಿಪುರಾದ ಬ್ರು ಬುಡಕಟ್ಟು ಸಮಸ್ಯೆಗಳನ್ನು ಪರಿಹರಿಸಿದ್ದಕ್ಕಾಗಿ ಎನ್ ಡಿಎ ನಾಯಕರು ಪ್ರಧಾನಿ ಮೋದಿ ಅವರಿಗೆ ಮೆಚ್ಚುಗೆ ಸೂಚಿಸಿದ್ದಾರೆ.