ಉಪ್ಪಳ: ತಿರುವನಂತಪುರಂ ನ ಕೇರಳ ಕೃಷಿ ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ಜನವರಿ 29ರಿಂದ 31 ರ ವರೆಗೆ ನಡೆದ ಭಾರತೀಯ ವಿದ್ಯಾನಿಕೇತನದ ಕೇರಳ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಕೊಂಡೆವೂರಿನ ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠದ 11 ಮಂದಿ ವಿದ್ಯಾರ್ಥಿಗಳು ಕಾಸರಗೋಡು ಜಿಲ್ಲೆಯನ್ನು ಪ್ರತಿನಿಧಿಸಿ ವಿವಿಧ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಪಡೆದಿದ್ದಾರೆ.
17ವರ್ಷ ವಯೋಮಿತಿಯ ಮಕ್ಕಳಿಗಾಗಿರುವ ಸ್ಪರ್ಧೆಗಳಲ್ಲಿ ಬಾಲಕರ ವಿಭಾಗದ 3000 ಮೀಟರ್ ಓಟದಲ್ಲಿ 9ನೇ ತರಗತಿಯ ಪ್ರದ್ಯೋತ್ ಎನ್. ಪ್ರಥಮ ಸ್ಥಾನ, ಬಾಲಕಿಯರ ವಿಭಾಗದ ಡಿಸ್ಕಸ್ ಎಸೆತದಲ್ಲಿ 9ನೇ ತರಗತಿಯ ಕು. ದೀಪಿಕಾ ಪ್ರಥಮ ಸ್ಥಾನ, ಜಾವಲಿನ್ ಎಸೆತದಲ್ಲಿ 9ನೇ ತರಗತಿಯ ಕು. ಕೃತಿ ಪ್ರಥಮ ಸ್ಥಾನ ಹಾಗೂ 3000 ಮೀಟರ್ ನಡಿಗೆಯಲ್ಲಿ 8ನೇ ತರಗತಿಯ ಕು. ಸ್ನೇಹಾ ಆಳ್ವ ಪ್ರಥಮ ಸ್ಥಾನ ಪಡೆದು ಚೆನ್ನೈಯಲ್ಲಿ ನಡೆಯಲಿರುವ ವಲಯ ಮಟ್ಟದ ಸ್ಪರ್ಧೆಗಳಿಗೆ ಆಯ್ಕೆಯಾಗಿದ್ದಾರೆ. ಜೊತೆಗೆ 800 ಮೀಟರ್ ಓಟದಲ್ಲಿ 9ನೇ ತರಗತಿಯ ಕು. ರುಚಿತಶ್ರೀ ತೃತೀಯ ಸ್ಥಾನ, ಶಾಟ್‍ಪುಟ್ ಎಸೆತದಲ್ಲಿ 9ನೇ ತರಗತಿಯ ಕು. ಸುಕನ್ಯಾ ತೃತೀಯ ಸ್ಥಾನ ಹಾಗೂ ಬಾಲಕರ ರಿಲೇಯಲ್ಲಿ 8ನೇ ತರಗತಿಯ ಯೋಗರಾಜ್ ತೃತೀಯ ಸ್ಥಾನ ಪಡೆದಿದ್ದಾರೆ.
ರಾಜ್ಯಮಟ್ಟದಲ್ಲಿ ಸ್ಪರ್ಧಿಸಿ ಸಂಸ್ಥೆಗೆ ಕೀರ್ತಿ ತಂದ ಈ ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ಸಂಸ್ಥೆಯ ಸಂಸ್ಥಾಪಕ ಪರಮಪೂಜ್ಯ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಆಶೀರ್ವದಿಸಿದ್ದು, ಶಾಲಾ ಆಡಳಿತ ಮಂಡಳಿ, ರಕ್ಷಕ-ಶಿಕ್ಷಕ ವೃಂದ, ಮುಖ್ಯೋಪಾಧ್ಯಾಯಿನಿ ಹಾಗೂ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿ ವೃಂದವು ಅಭಿನಂದಿಸಿರುತ್ತದೆ.