ಕಾಸರಗೋಡು: ಸಮಯವು ಅಮೂಲ್ಯ ಸಂಪತ್ತಾಗಿದೆ. ಅದನ್ನು ಹಾಳು ಮಾಡಿದರೆ ಅದು ಮರಳಿ ಲಭಿಸದು. ವಿದ್ಯಾರ್ಥಿಗಳು ಒಂದು ನಿಮಿಷವನ್ನೂ ವ್ಯರ್ಥ ಮಾಡದೆ ಕಲಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ವಿಶ್ರಾಂತ ಪ್ರಾಧ್ಯಾಪಕ ಚಂದ್ರಹಾಸ. ಪಿ ತಿಳಿಸಿದ್ದಾರೆ.
ಅವರು ಕೂಡ್ಲು ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗಾಗಿ ನಡೆದ ಮಾರ್ಗದರ್ಶನ ಶಿಬಿರದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಹತ್ತನೇ ತರಗತಿ ಉತ್ತೀರ್ಣರಾದ ಬಳಿಕ ಪ್ಲಸ್ ವನ್ ಗೆ ಅರ್ಜಿ ಸಲ್ಲಿಸುವ ರೀತಿಯ ಬಗ್ಗೆ ಮತ್ತು ಪ್ಲಸ್ ಟೂ ತರಗತಿಗಳಲ್ಲಿ ಇರುವ ವಿವಿಧ ಕೋರ್ಸ್ ಗಳ ಕುರಿತು ವಿದ್ಯಾರ್ಥಿಗಳಿಗೆ ಅವರು ಸಮಗ್ರ ಮಾಹಿತಿ ನೀಡಿದರು.ಶಾಲಾ ಮುಖ್ಯ ಶಿಕ್ಷಕ ಶ್ರೀಹರಿ.ಎನ್,ಅಧ್ಯಾಪಕರಾದ ವಿಶಾಲಾಕ್ಷ ಪುತ್ರಕಳ,ಎಂ ನರಸಿಂಹ ಮಯ್ಯ ಮಧೂರು,ತಲ್ಪನಾಜೆ ವೆಂಕಟ್ರಮಣ ಭಟ್ ಮೊದಲಾದವರು ಉಪಸ್ಥಿತರಿದ್ದರು.