ಮಂಜೇಶ್ವರ: ಬಹುಭಾಷಾ ಸಂಗಮ ಭೂಮಿಯಾಆದದ ವರ್ಕಾಡಿಯು ಮಾನವೀಯ ಏಕತೆಯ ವಿಶಿಷ್ಟ ಮಾದರಿ ಗ್ರಾಮವಾಗಿದೆ. ಅಭಿವೃದ್ದಿಗಾಗಿ ಎಲ್ಲರೂ ಒಗ್ಗಟ್ಟಿನಿಂದ ಕೈಜೋಡಿಸುತ್ತಿರುವುದು ಶ್ಲಾಘನೀಯ. ಇಲ್ಲಿಯ ಸಂಸ್ಕøತಿ, ಕಲೆ, ಆಚರಣೆಗಳುಉ ರಾಷ್ಟ್‍ರೀಯ ಸಸಂಸ್ಕøತಿಯ ಪರಿಕಲ್ಪನೆಯಾಗದೆ.ಸೌಹಾರ್ಧತೆಯ ಸಂಗಮಭೂಮಿಯಾದ ಇಲ್ಲಿ ಗಾಂಧಿಯ ಗ್ರಾಮ ಸ್ವರಾಜ್ಯ ಪರಿಕಲ್ಪನೆ ಸಾಕಾರಗೊಳ್ಳುವುದು ಎಂದು ಸಂಸದ ರಾಜಮೋಹನ ಉಣ್ಣಿತ್ತಾನ್ ಅವರು ತಿಳಿಸಿದರು.
ವರ್ಕಾಡಿ ಧರ್ಮನಗರದ ಕಿರು ಮೈದಾನದಲ್ಲಿ ಎರಡು ದಿನಗಳಕಾಲ ವರ್ಕಾಡಿ ಗ್ರಾ.ಪಂ., ಸಾರ್ವಜನಕರು ಹಾಗೂ ಸ್ಥಳಿಯ ಸಂಘಸಂಸ್ಥೆಗಳ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವರ್ಕಾಡಿ ಫೆಸ್ಟ್ 2020 ರ ಭಾನುವಾರ ಸಂಜೆ ನಡೆದ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ವರ್ಕಾಡಿ ಗ್ರಾ.ಪಂ.ಅಧ್ಯಕ್ಷ ಅಬ್ದುಲ್ ಮಜೀದ್ ಬಿ.ಎ. ಅಧ್ಯಕ್ಷತೆ ವಹಿಸಿದ್ದರು. ಪದ್ಮಶ್ರೀ ಹರೇಕಳ ಹಾಜಬ್ಬ, ವರ್ಕಾಡಿ ಕೃಷಿ ವಿಜ್ಞಾನ ಕಾಲೇಜಿನ ಪ್ರಾಧ್ಯಾಪಕ ಶಶಿಕಾಂತ್ ಬಿ.ಎಚ್.,ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶ್ ವಿ., ಕೇರಳ ತುಳು ಅಕಾಡೆಮಿ ಕಾರ್ಯದರ್ಶಿ ಪ್ರದೀಪ್ ಕುಮಾರ್ ಬೋಳ್ನ, ವರ್ಕಾಡಿ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ದಿವಾಕರ ಎಸ್., ವರ್ಕಾಡಿ ಕೆಪಿಎಸ್‍ಸಿ ಬ್ಯಾಂಕ್ ಅಧ್ಯಕ್ಷ ಮೋಹನ ಮಾಸ್ತರ್, ವರ್ಕಾಡಿ ಅಗ್ರಿಕಲ್ಚರಿಸ್ಟ್ ಸಹಕಾರಿ ಬ್ಯಾಂಕ್ ಅಧ್ಯಕ್ಷ ವಿಶ್ವನಾಥ ಕುದುರು, ವರ್ಕಾಡಿ ಹಾಲುತ್ಪಾದಕ ಸಹಕಾರಿ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ ನೂಜಿ, ವಿವಿಧ ರಾಜಕೀಯ ಪಕ್ಷಗಳ ಮುಖಂಡರಾದ ಟಿ.ಎ.ಮೂಸಾ, ಮುಹಮ್ಮದ್ ಡಿಎಂಕೆ, ಅಬ್ದುಲ್ ರಝಾಕ್ ಚಿಪ್ಪಾರ್, ರೋನಿ ಡಿಸೋಜ, ಶ್ರೀಕ್ಷೇತ್ರ ಒಡಿಯೂರು ಗ್ರಾಮ ವಿಕಾಸ ಯೋಜನೆಯ ವಿಸ್ತಾರಕ ಸದಾಶಿವ ಅಳಿಕೆ, ಜಿ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ, ಬ್ಲಾಕ್ ಪಂಚಾಯತಿ ಉಪಾಧ್ಯಕ್ಷೆ ಮಮತಾ ದಿವಾಕರ ಮೊದಲಾದವರು ಉಪಸ್ಥಿತರಿದ್ದು ಶುಭಹಾರೈದಸಿರು.
ಈ ಸಂದರ್ಭ ಸಂಸದ ರಾಜಮೋಹನ ಉಣ್ಣಿತ್ತಾನ್ ಅವರು ಕುಟುಂಬಶ್ರೀ ನೂತನ ಸಭಾ ಭವನ, ಎಂಸಿಎಫ್ ಕಟ್ಟಡ ಉದ್ಘಾಟನೆಯ ಶಿಲಾಫಲಕ ಅನಾವರಣಗೊಳಿಸಿದರು. ಪದ್ಮಶ್ರೀ ಹರೇಕಳ ಹಾಜಬ್ಬ ಅವರನ್ನು ವರ್ಕಾಡಿ ಜನತೆಯ ಪರವಾಗಿ ಅಭಿನಂದಿಸಿ ಗೌರವಿಸಲಾಯಿತು. ಜೊತೆಗೆ ವರ್ಕಾಡಿ ಗ್ರಾ.ಪಂ.ವ್ಯಾಪ್ತಿಯ ನಿವೃತ್ತ ಯೋಧರಿಗೆ ಹಾಗೂ ವಿವಿಧ ಕ್ಷೇತ್ರಗಳ ಪ್ರತಿಭೆಗಳನ್ನು ಗೌರವಿಸಲಾಯಿತು. ಗ್ರಾ.ಪಂ. ಕಾರ್ಯದರ್ಶಿ ರಾಜೇಶ್ವರಿ ಬಿ.ಸ್ವಾಗತಿಸಿ, ಸಹ ಕಾರ್ಯದರ್ಶಿ ರಾಧಾಕೃಷ್ಣ ಪಿಳ್ಳೆ ವಂದಿಸಿದರು. ಆಶಾ ದಿಲೀಪ್ ಸುಳ್ಯಮೆ ದಂಪತಿಗಳು ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ ದಫ್ ಮುಟ್ಟು, ಕುಸಲ್ದ ಗೌಜಿ ತುಳು ಹಾಸ್ಯ ಪ್ರಹಸನ ನಡೆಯಿತು.