ಇಸ್ಲಾಮಾಬಾದ್: ಚೀನಾದಲ್ಲಿ ಕೊರೊನಾ ವೈರಸ್ ಯಮರೂಪಿಯಾಗಿ ಕಾಡುತ್ತಿದ್ದರೆ, ಪಾಕಿಸ್ತಾನಕ್ಕೆ ಮಿಡತೆ ಚಿಂತೆಯಾಗಿ ಕಾಡುತ್ತಿದೆ. ಜಂಟಿ ದೇಶಗಳು ಮಿಡತೆ ಓಡಿಸಲು ಯೋಜನೆಯನ್ನು ರೂಪಿಸುತ್ತಿದ್ದು, ಇನ್ನು ಕೆಲ ತಿಂಗಳಲ್ಲಿ ಚೀನಾದಿಂದ ಪಾಕಿಸ್ತಾನಕ್ಕೆ 1 ಲಕ್ಷ ಬಾತುಕೋಳಿಗಳ ಸೇನೆ ಬರಲಿದೆ.
ಒಂದು ಬಾತುಕೋಳಿ ದಿನವೊಂದಕ್ಕೆ ಕನಿಷ್ಠ 200 ಮಿಡತೆಗಳನ್ನು ತಿನ್ನುತ್ತದೆ. ಹಾಗಿದ್ದಾಗ ಒಂದು ಲಕ್ಷ ಬಾತುಕೋಳಿಗಳನ್ನು ಕರೆ ತಂದರೆ ಅದರಿಂದ ಮಿಡತೆಯ ಕಾಟವನ್ನು ಸುಲಭವಾಗಿ ನಿಯಂತ್ರಿಸಬಹುದು. ಬೇರೆ ಯಾವುದೇ ಕೀಟನಾಶಕಗಳಿಗಿಂತ ಈ ಜೈವಿಕ ಶಸ್ತ್ರಾಸ್ತ್ರ ಹೆಚ್ಚು ಫಲಕಾರಿ ಎಂದು ಯೋಜನೆಯ ಉಸ್ತುವಾರಿ ಹೊತ್ತಿರುವ ಜಿಜಿಯಾಂಗ್? ಅಕಾಡೆಮಿ ಆಫ್? ಅಗ್ರಿಕಲ್ಚರ್ ಸೈನ್ಸ್?ನ ಹಿರಿಯ ಸಂಶೋಧಕ ಲು ಲಿಝಿ ತಿಳಿಸಿದ್ದಾರೆ. ಈ ಯೋಜನೆಗೆ ಚೀನಾದ ಅಗ್ರಿಕಲ್ಚರ್? ಅಕಾಡೆಮಿಯ ಜತೆ ಪಾಕಿಸ್ತಾನದ ವಿಶ್ವವಿದ್ಯಾನಿಲಯವೂ ಕೈ ಜೋಡಿಸಿದೆ ಎನ್ನಲಾಗಿದೆ.ಪಾಕಿಸ್ತಾನಕ್ಕೆ ಬಾತುಕೋಳಿಗಳನ್ನು ಕರೆತರುವುದಕ್ಕೂ ಮೊದಲು ಚೀನಾದಲ್ಲಿ ಅದರ ಪ್ರಯೋಗ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.ಪೂರ್ವ ಆಫ್ರಿಕಾದಲ್ಲಿ ಆರಂಭವಾದ ಮಿಡತೆಯ ಕಾಟ ದಕ್ಷಿಣ ಏಷ್ಯಾದವರೆಗೂ ಹಬ್ಬಿದೆ. ಪಾಕಿಸ್ತಾನ, ಚೀನಾ, ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ಮಿಡತೆಯ ಕಾಟ ಹೆಚ್ಚಿದ್ದು, ಭಾರೀ ಪ್ರಮಾಣದಲ್ಲಿ ಕೃಷಿ ಬೆಳೆಗಳ ನಾಶವಾಗುತ್ತಿದೆ. ಇದರ ನಿಯಂತ್ರಣಕ್ಕೆಂದು ಆಯಾ ದೇಶಗಳು ಕಠಿಣ ಪ್ರಯತ್ನ ಮಾಡುತ್ತಿವೆ.
ಕಳೆದ ವಾರ ಚೀನಾದ ಕೃಷಿ ತಜ್ಞರ ತಂಡವೊಂದು ಪಾಕಿಸ್ತಾನಕ್ಕೆ ಭೇಟಿ ನೀಡಿ ಮಿಡತೆ ನಿಯಂತ್ರಣದ ಬಗ್ಗೆ ಪರಿಶೀಲನೆ ನಡೆಸಿತ್ತು. ಪಾಕಿಸ್ತಾನ ಮಿಡತೆಗಳ ವಿಚಾರದಲ್ಲಿ ಎಷ್ಟರ ಮಟ್ಟಿಗೆ ಬೇಸತ್ತು ಹೋಗಿದೆ ಎಂದರೆ ಪಾಕ್?ನ ಆಡಳಿತ ಕೆಲ ದಿನಗಳ ಹಿಂದೆ ತನ್ನ ಜನರಿಗೆ ಮಿಡತೆಗಳನ್ನು ಅಡುಗೆ ಮಾಡಿ ಊಟ ಮಾಡಿ ಎಂದು ಹೇಳಿದೆ ಎನ್ನುವುದು ವರದಿಯಾಗಿತ್ತು. ಆಫ್ರಿಕಾದಲ್ಲಿ ಅತಿ ಹೆಚ್ಚು ಮಿಡತೆ ಸಮಸ್ಯೆ ಉಂಟಾಗಿದ್ದು 128 ಮಿಲಿಯನ್? ಡಾಲರ್ ನಷ್ಟವುಂಟಾಗಿದೆ ಎನ್ನಲಾಗಿದೆ.