HEALTH TIPS

ಗೆಜ್ಜೆಗಿರಿ ನಂದನ ಬಿತ್ತಿಲ್‍ಗೆ ಬ್ರಹ್ಮಶ್ರೀ ನಾರಾಯಣ ಗುರು ಯುವ ವೇದಿಕೆಯ ಪದಾಧಿಕಾರಿಗಳ ಸಂದರ್ಶನ


       ಮಂಜೇಶ್ವರ: ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತಿಲ್-ದೇಯಿ-ಬೈದ್ಯೆತಿ-ಕೋಟಿಚೆನ್ನಯ ಮೂಲಸ್ಥಾನ ಬಡಗನ್ನೂರು ಪುತ್ತೂರು ಇಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಕಾಸರಗೋಡು ಜಿಲ್ಲಾ ಬ್ರಹ್ಮಶ್ರೀ ನಾರಾಯಣ ಗುರು ಯುವ ವೇದಿಕೆಯ ಪದಾಧಿಕಾರಿಗಳು ಸಂದರ್ಶನ ಮಾಡಿದರು.
        ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಫೆ.24 ರಿಂದ ಮಾ.2 ರ ವರೆಗೆ ನಡೆಯಲಿರುವುದು. ಮೂಲಸ್ಥಾನದ ಚರಿತ್ರೆಯನ್ನು ತಿಳಿಯಹೋದರೆ ಎರಾಜೆ ಬರ್ಕೆ ಎಂಬ ಪ್ರತಿಷ್ಠಿತ ಮನೆತನದ ನೆಲವೇ ಗೆಜ್ಜೆಗಿರಿ ನಂದನ ಬಿತ್ತಿಲ್. ಸಾವಿರಾರು ವರ್ಷಗಳ ಇತಿಹಾಸ ಇರುವ ಈ ಮನೆತನ ಪಡುಮಲೆ ಅರಸು ಬಳ್ಳಾಲರ ಸಂಸ್ಥಾನದಲ್ಲಿ ಮಹತ್ವದ ಸ್ಥಾನಮಾನ ಪಡೆದ ಮಣ್ಣು. 500 ವರ್ಷಗಳ ಹಿಂದೆ ಈ ಮನೆತನದಲ್ಲಿ ಯಜಮಾನರಾಗಿ ಮೆರೆದವರು ಗುರುಸಾಯನ ಬೈದ್ಯರು. ಇವರ ಕಾಲದಲ್ಲಿ ನಡೆದಿದ್ದೇ ಕೋಟಿ ಚೆನ್ನಯರ ಕಥಾನಕ. ಮಾತೆ ದೇಯಿ ಬೈದ್ಯೆತಿಗೆ ಗುರು ಸಾಯನರು ಪುನರ್ಜನ್ಮ ನೀಡಿದ ನೆಲವೇ ಗೆಜ್ಜೆಗಿರಿ. ಕೋಟಿ ಚೆನ್ನಯರು ಬದುಕಿನ ಬಹುಪಾಲನ್ನು ಕಳೆದ ತಾಣವಿದು. ವೀರರ ತಾಯಿ, ಮಾವನವರು ವಾಸಿಸಿದ್ದ ಕೌಟುಂಬಿಕ ಮೂಲವಿದು. ಧರ್ಮದೈವ ಧೂಮಾವತಿಯ ತಾಣವು ಇದೇ. ಒಟ್ಟಾರೆಯಾಗಿ ಕೋಟಿಚೆನ್ನಯರ ಪಾಲಿಗಿದು ಮೂಲಸ್ಥಾನ. ಈ ಮೂರು ತಲೆಮಾರುಗಳ ಕಾರಣಿಕ ಶಕ್ತಿಗಳು ಮಾನವ ರೂಪದಲ್ಲಿ ವಾಸಿಸಿದ್ದ ಮನೆ ಈಗ ಸತ್ಯಧರ್ಮ ಚಾವಡಿಯಾಗಿ ಪುನರುತ್ಥಾನಗೊಂಡಿದೆ. ಆ ಕಾಲದ ಧರ್ಮದೈವ ಧೂಮಾವತಿ ಮತ್ತು ಸಪರಿವಾರ ದೈವಗಳ ತಾಣವು ಜೀರ್ಣೋದ್ಧಾರಗೊಂಡಿದೆ. ಚಾರಿತ್ರಿಕ ಸರೋಳಿ ಸೈಮಂಜ ಕಟ್ಟೆಗೆ ಹೊಸ ರೂಪ ಬಂದಿದೆ. ದೇಯಿ ಮಾತೆಯ ಮಹಾ ಸಮಾ„ ಪಾರಂಪರಿಕ ಶೈಲಿಯಲ್ಲಿ ಪುನರುತ್ಥಾನಗೊಂಡಿದೆ. ಸಾಯನ ಬೈದ್ಯೆರ ಗುರು ಪೀಠ ಸ್ಥಾಪನೆಗೊಂಡಿದೆ. ಅವಳಿ ವೀರರಿಗೆ ಮೂಲಮಣ್ಣಲ್ಲಿ ಮೂಲಸ್ಥಾನ ಗರಡಿ ನಿರ್ಮಾಣಗೊಂಡಿದೆ. ಬೇರ್ಮೆರ್‍ಗುಂಡ ಮೂಡಿಬಂದಿದೆ. ಸಮಗ್ರ ಮೂಲಸ್ಥಾನ ಭವ್ಯವಾಗಿ ಪುನರುತ್ಥಾನಗೊಂಡು ಭಕ್ತರ ಪಾಲಿಗೆ ಅಮೃತ ಸಂಜೀವಿನಿಯಾಗಿ ಮೂಡಿಬಂದಿದೆ.
      ಗೆಜ್ಜೆಗಿರಿ ಕ್ಷೇತ್ರದ ಯಜಮಾನರಾದ ಶ್ರೀಧರ ಪೂಜಾರಿ, ಆಡಳಿತ ಸಮಿತಿಯ ಅಧ್ಯಕ್ಷರಾದ ಜಯಂತ ನಡುಬೈಲು, ಬೃಹ್ಮಕಲಶೋತ್ಸವದ ಕಾರ್ಯಾಧ್ಯಕ್ಷರಾದ ನಾರಾಯಣ ಪೂಜಾರಿ ಮಡ್ಯಂಗಳ ಮುಂತಾದವರು ವಿಶೇಷ ಸ್ಥಳ ಪುರಾಣಗಳನ್ನು ನೀಡಿದರು.
     ವೇದಿಕೆಯ ಜಿಲ್ಲಾಧ್ಯಕ್ಷ ಕೃಷ್ಣ ಶಿವಕೃಪಾ, ಉಪಾಧ್ಯಕ್ಷರಾದ ಕೃಷ್ಣಪ್ಪ ಪೂಜಾರಿ ಬಡಾಜೆ, ಕೋಶಾಧಿಕಾರಿ ರವೀಂದ್ರ ಪೂಜಾರಿ ಭಂಡಾರಮನೆ ಕಡಂಬಾರು, ಕಾರ್ಯದರ್ಶಿ ಹರೀಶ್ ಸುವರ್ಣ, ಪ್ರಧಾನ ಸಂಚಾಲಕರಾದ ರವಿ ಮುಡಿಮಾರು, ಸದಸ್ಯರಾದ ಮಾಧವ ಪೂಜಾರಿ ಕುದುಕೋರಿ, ನವೀರಾಜ ಮುಡಿಮಾರು ಮುಂತಾದವರು ಉಪಸ್ಥಿತರಿದ್ದರು.
        ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನಬಿತ್ತಿಲು ಇದರ ಐತಿಹಾಸಿಕ ಬ್ರಹ್ಮಕಲಶೋತ್ಸವಕ್ಕೆ ಕಾಸರಗೋಡು ಮಂಜೇಶ್ವರ ಉದ್ಯಾವರ ಮಾಡ ಕ್ಷೇತ್ರ ಪರಿಸರದಿಂದ ವಿಜೃಂಭಣೆಯಿಂದ ಫೆ.25 ರಂದು ಬೆಳಗ್ಗೆ 9 ಗಂಟೆಗೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಹೊರಡಲಿದೆ. ಭಕ್ತಾಭಿಮಾನಿಗಳು ಭಕ್ತ್ಯಾನುಸಾರ ಹಸಿರು ವಾಣಿ ಹೊರೆಕಾಣಿಕೆಯನ್ನು ತಂದೊಪ್ಪಿಸಬೇಕಾಗಿ ವಿನಂತಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ರವಿ ಮುಡಿಮಾರು (9048325353) ಅವರನ್ನು ಸಂಪರ್ಕಿಸಬಹುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries