ಕುಂಬಳೆ: ಗಾಂಧೀಜಿಯವರು ಸತ್ಯಾಗ್ರಹಕ್ಕೆ ಅತ್ಯಂತ ಮಹತ್ವವನ್ನು ನೀಡಿದ್ದರು. ಸತ್ಯಾಗ್ರಹದ ಮೂಲಕ ಅನೇಕ ಸಾಮಾಜಿಕ ಕೆಲಸಗಳಲ್ಲಿ ಯಶಸ್ಸನ್ನು ಪಡೆದಿದ್ದರು ಎಂದು ಮಂಜೇಶ್ವರ ತಾಲೂಕು ಲೈಬ್ರೆರಿ ಕೌನ್ಸಿಲ್‍ನ ಸದಸ್ಯ ದಾಸಪ್ಪ ಮಾಸ್ತರ್ ಅಭಿಪ್ರಾಯಪಟ್ಟರು.
ಯುವಕ ಸಂಘ ಗ್ರಂಥಾಲಯ ಮತ್ತು ವಾಚನಾಲಯ ಧರ್ಮತ್ತಡ್ಕ ಇದರ ಆಶ್ರಯದಲ್ಲಿ ನಡೆದ ಗಾಂಧಿ ಸ್ಮೃತಿ ಮತ್ತು ಹಿರಿಯ ಸದಸ್ಯರಿಗೆ ಗೌರವಾರ್ಪಣೆ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಗಾಂಧೀಜಿಯವರು ಖಾದಿ ಬಟ್ಟೆಯನ್ನು ಅತಿಯಾಗಿ ಪ್ರೀತಿಸಿದ್ದರು. ಖಾದಿ ಬಟ್ಟೆಗೆ ಅವರು ನೀಡಿದ ಪ್ರಾಮುಖ್ಯತೆ ಮುಂದೆ ಖಾದಿ ಗುಡಿಕೈಗಾರಿಕೆಯ ಬೆಳವಣಿಗೆಗೂ ಕಾರಣವಾಯಿತು ಎಂದರು.
ಈ ಸಂದರ್ಭದಲ್ಲಿ ಗ್ರಂಥಾಲಯದ ಹಿರಿಯ ಸದಸ್ಯರಾದ ತಿಮ್ಮಣ್ಣ ಮಾಸ್ತರ್ ಮೇಪೆÇೀಡು, ಶಂಕರ ನಾರಾಯಣ ಭಟ್ ಕೊಯಂಗಾನ, ಸಿ.ಎಚ್.ಗೋವಿಂದ ಮಾಸ್ತರ್ ಚೆಕ್ಕಮನೆ, ಪದ್ಮನಾಭ ನಂಬಿಯಾರ್ ಮಾಸ್ತರ್, ಡಾ.ವೆಂಕಟ್ರಮಣ ಭಟ್ ಕೊಣಲೆ ಅವರನ್ನು ಗೌರವಿಸಲಾಯಿತು. ಗ್ರಂಥಾಲಯದ ಹಿರಿಯ ಸದಸ್ಯರಾದ ಶಂಕರ ರಾವ್ ಗೌರವ ಸ್ವೀಕರಿಸಿದವರ ಪರಿಚಯವನ್ನು ಮಾಡಿದರು.
ಸ್ಥಳೀಯ ಶಾಲಾ ಪ್ರಾಂಶುಪಾಲ ಎನ್.ರಾಮಚಂದ್ರ ಭಟ್, ತಾಲೂಕು ಗ್ರಂಥಾಲಯ ಸದಸ್ಯ ಪಿ.ರಾಮಚಂದ್ರ ಭಟ್ ಶುಭ ಹಾರೈಸಿದರು. ಗ್ರಂಥಾಲಯದ ಅಧ್ಯಕ್ಷ ರವಿಲೋಚನ ಸಿ.ಎಚ್. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಗ್ರಂಥಾಲಯದ ಸದಸ್ಯ ಹರೀಶ ಜಿ. ಸ್ವಾಗತಿಸಿ. ಕಾರ್ಯದರ್ಶಿ ರವಿಚಂದ್ರ ಇಟ್ಟಿಗುಂಡಿ ವಂದಿಸಿದರು. ಪ್ರಜ್ಞಾ ಕಾರ್ಯಕ್ರಮ ನಿರೂಪಿಸಿದರು. ಸ್ಥಳೀಯ ಮುಖ್ಯೋಪಾಧ್ಯಾಯ ಗೋವಿಂದ ಮಾಸ್ತರ್, ರಾಮಮೋಹನ ಮಾಸ್ತರ್ ಉಪಸ್ಥಿತರಿದ್ದರು.