HEALTH TIPS

ಕಾಸರಗೋಡು ನಗರದಲ್ಲಿ ಟ್ರಾಫಿಕ್ ಮಾಸ್ಟರ್ ಪ್ಲಾನ್


            ಕಾಸರಗೋಡು: ನಗರದ ರಸ್ತೆಗಳಲ್ಲಿ ಅಲ್ಲಲ್ಲಿ ಕಂಡು ಬರುವ `ಯು' ತಿರುವು ಹೊರತುಪಡಿಸಿ ಒಂದು ಕಿಲೋ ಮೀಟರ್ ಅಂತರದಲ್ಲಿ ಮಾತ್ರವೇ `ಯು' ತಿರುವುಗಳನ್ನು ಕೈಗೊಳ್ಳಬೇಕೆಂದೂ, ಕಾಸರಗೋಡು ನಗರದಲ್ಲಿ ಟ್ರಾಫಿಕ್ ಮಾಸ್ಟರ್ ಪ್ಲಾನ್ ಸಿದ್ಧಪಡಿಸಬೇಕೆಂದೂ ತಾಲೂಕು ಅಭಿವೃದ್ಧಿ ಸಮಿತಿ ನಿರ್ದೇಶಿಸಿದೆ. ನಗರಸ`É ವ್ಯಾಪ್ತಿಯ ವ್ಯಾಪಾರ ಸಂಸ್ಥೆಗಳ ಪಾರ್ಕಿಂಗ್ ಸ್ಥಳವನ್ನು ವ್ಯಾಪಾರ ಅಗತ್ಯಕ್ಕಾಗಿ ಉಪಯೋಗಿಸುವುದರಿಂದಾಗಿ ವಾಹನಗಳನ್ನು ನಿಲ್ಲಿಸಲು, ಸಂಚಾರಕ್ಕೆ ಸಮಸ್ಯೆ ಉಂಟಾಗುತ್ತಿರುವುದಾಗಿ ತಾಲೂಕು ಸಮಿತಿ ಸಭೆ ಆತಂಕ ವ್ಯಕ್ತಪಡಿಸಿದೆ.
          ಆಟೋ ರಿಕ್ಷಾಗಳ ಅನಧಿಕೃತ ಪಾರ್ಕಿಂಗ್ ಹೊರತುಪಡಿಸುವುದಕ್ಕೆ ನಗರದಲ್ಲಿ ಸಂಚರಿಸುವ ಆಟೋ ರಿಕ್ಷಾಗಳಿಗೆ ಪ್ರತ್ಯೇಕ ನಂಬ್ರ ನೀಡಿ ಅದನ್ನು ರಿಕ್ಷಾದಲ್ಲಿ ಪ್ರದರ್ಶಿಸುವುದಕ್ಕೆ ಕ್ರಮ ಸ್ವೀಕರಿಸಬೇಕೆಂದು ನಗರಸಭೆಗೆ ಸಭೆಯಲ್ಲಿ ಆಗ್ರಹಿಸಿದೆ. ಹಳೆಯ ಪ್ರೆಸ್ ಕ್ಲಬ್ ಬಳಿ ಟ್ರಾಫಿಕ್ ಪೆÇಲೀಸರಿಗೆ ಟ್ರಾಫಿಕ್ ಕೇಂದ್ರ ಸ್ಥಾಪಿಸಬೇಕೆಂದು ಆಗ್ರಹಿಸಲಾಯಿತು. ತಾಲೂಕು ವ್ಯಾಪ್ತಿಯಲ್ಲಿ ಕಳೆದ ವರ್ಷ 180 ರಷ್ಟು ಮಂದಿಗೆ ಹಾವು ಕಚ್ಚಿರುವುದಾಗಿಯೂ, ಈ ಹಿನ್ನೆಲೆಯಲ್ಲಿ ಸೆರೆ ಹಿಡಿದ ಹಾವುಗಳನ್ನು ಜನವಾಸ ಕೇಂದ್ರಗಳಲ್ಲಿ ಬಿಡಬಾರದೆಂದು ಅರಣ್ಯ ಅಧಿಕಾರಿಗಳೊಂದಿಗೆ ಸಭೆಯಲ್ಲಿ ಆಗ್ರಹಿಸಿದೆ. ನಗರಸಭೆಯ ವ್ಯಾಪ್ತಿಯಲ್ಲಿ ಸಿನಿಮಾ ಪೆÇೀಸ್ಟರ್‍ಗಳನ್ನು ಪ್ರದರ್ಶಿಸುವ ಕ್ರಮ ಹೊರತುಪಡಿಸಬೇಕೆಂದು ನಗರಸಭೆಯ ಮುದ್ರೆಯಿರುವ ಪೆÇೀಸ್ಟರ್‍ಗಳನ್ನು ಮಾತ್ರವೇ ನಿಶ್ಚಿತ ಸ್ಥಳದಲ್ಲಿ ಪ್ರದರ್ಶಿಸಬೇಕೆಂದು ಸಭೆ ನಿರ್ದೇಶಿಸಿದೆ. ಆಹಾರ ಸಾಮಗ್ರಿಗಳಿಗೆ ತೋಚಿದಂತೆ ಅಪರಿಮಿತ ಬೆಲೆ ವಸೂಲು ಮಾಡುವ ಹೊಟೇಲ್‍ಗಳ ವಿರುದ್ಧವೂ, ದರ ಪಟ್ಟಿ ಪ್ರದರ್ಶಿಸಲು ಹಿಂದೇಟು ಹಾಕುವವರ ವಿರುದ್ಧವೂ ಕಠಿಣ ಕ್ರಮ ಸ್ವೀಕರಿಸಬೇಕೆಂದು, ಈ ರೀತಿಯ ಹೊಟೇಲ್‍ಗಳಿಗೆ ಪದೆ ಪದೆ ದಾಳಿ ನಡೆಸಿ ಕಾನೂನು ಪ್ರಕಾರವಾಗಿ ಕಾರ್ಯಾಚರಿಸುವುದಕ್ಕೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಯಿತು.
            ಕಾಸರಗೋಡು ಮೀನು ಮಾರುಕಟ್ಟೆಯ ಕಟ್ಟಡದಲ್ಲಿ ಅವೈಜ್ಞಾನಿಕವಾಗಿ ನಿರ್ಮಾಣ ನಡೆಸಿದ ಕಾರಣ ಮಲಿನ ಜಲ ಕಟ್ಟಿ ನಿಲ್ಲುತ್ತಿದ್ದು, ಮೀನು ಮಾರಾಟ ಮಾಡುವವರಿಗೆ, ಗ್ರಾಹಕರಿಗೆ ಸಮಸ್ಯೆ ಉಂಟಾಗುತ್ತಿದೆ. ಮೀನು ಮಾರುಕಟ್ಟೆಯಲ್ಲಿ ಸಾರ್ವಜನಿಕ ಸ್ಥಳವನ್ನು ಮಾರಾಟಕ್ಕಾಗಿ ಉಪಯೋಗಿಸುವುದರಿಂದ ಜನರಿಗೆ ಸಮಸ್ಯೆ ಉಂಟಾಗುತ್ತಿದೆ ಎಂದು ಸಭೆಯಲ್ಲಿ ಅಭಿಪ್ರಾಯಪಟ್ಟಿದೆ.
            ನೀರ್ಚಾಲು - ಸಾಯಿ ಮಂದಿರ - ಮುಗು ರಸ್ತೆಯನ್ನು ಈ ಆರ್ಥಿಕ ವರ್ಷದ ಬಜೆಟ್‍ನಲ್ಲಿ 1,45,60,000 ರೂ. ಮೀಸಲಿಡಲಾಗಿದೆಯೆಂದು ಇನ್ನಷ್ಟು ಮೊತ್ತ ಈ ರಸ್ತೆಗೆ ಮಂಜೂರು ಮಾಡುವುದಕ್ಕಾಗಿ ಪೆÇ್ರಫೆÇೀಸಲ್ ನೀಡಲಾಗಿದೆಯೆಂದು ಶಾಸಕ ಎನ್.ಎ.ನೆಲ್ಲಿಕುನ್ನು ಸಭೆಯಲ್ಲಿ ತಿಳಿಸಿದರು. ಪ್ರೆಸ್ ಕ್ಲಬ್ ಜಂಕ್ಷನ್‍ನಲ್ಲಿ ದಾರಿ ಸೂಚಕ, ರಿಪ್ಲಕ್ಟರ್‍ಗಳನ್ನು ಸ್ಥಾಪಿಸುವುದಕ್ಕೆ ಕ್ರಮ ಕೈಗೊಳ್ಳಲಾಗಿದೆಯೆಂದು ಸಭೆಯಲ್ಲಿ ನಗರಸಭಾ ಅಧಿಕಾರಿಗಳು ತಿಳಿಸಿದರು.
     ತಾಲೂಕು ಕಾನರೆನ್ಸ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದರು. ತಹಶೀಲ್ದಾರ್ ಎ.ವಿ.ರಾಜನ್, ವಾರಿಜಾಕ್ಷನ್, ಇಲಾಖೆಯ ಅಧಿಕಾರಿಗಳು, ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಭಾಗವಹಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries