ಕಾಸರಗೋಡು: ಯುವಜನತೆಯ ನಡುವೆ ಸಾಮಾಜಿಕ ಭಾವೈಕ್ಯ ಜಾಗೃತಗೊಳಿಸಿ ಅವರನ್ನು ಉತ್ತಮ ಪ್ರಜೆಗಳನ್ನಾಗಿಸುವ ಹೊಣೆ ಯೂತ್ ಕ್ಲಬ್ ಗಳಿಗೆ ಇದೆ ಎಂದು ಶಾಸಕ ಎನ್.ಎ.ನೆಲ್ಲಿಕುನ್ನು ತಿಳಿಸಿದರು.
ನೆಹರೂ ಯುವ ಕೇಂದ್ರದ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಕಾಸರಗೋಡು ಬ್ಲೋಕ್ ಮಟ್ಟದ ಯುವ ಅಧಿವೇಶನ ಉದ್ಘಾಟಿಸಿ ಅವರು ಮತನಾಡಿದರು.
ನೆಹರೂ ಯುವ ಕೇಂದ್ರದ ಜಿಲ್ಲಾ ಯೂತ್ ಕೋಡಿನೇಟರ್ ಜಸೀಮತಾ ಡಿಸೋಜಾ ಅಧ್ಯಕ್ಷತೆ ವಹಿಸಿದ್ದರು. ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಜಿಲ್ಲಾ ವಾರ್ತಾಧಿಕಾರಿ ಮಧುಸೂದನನ್ ಎಂ. ಉಪಸ್ಥಿತರಿದ್ದರು. ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ, ವಿವಿಧ ಕ್ಲಬ್ ಗಳಿಗೆ ಕ್ರೀಡಾ ಉಪಕರಣಗಳ ವಿತರಣೆ ನಡೆಯಿತು. ನಿವೃತ್ತ ಉದ್ಯೋಗಾಧಿಕಾರಿ ಕೆ.ರತ್ನಾವತಿ, ನ್ಯಾಯವಾದಿ ರಾಮಕೃಷ್ಣ ಕಲ್ಲೂರಾಯ, ಕಾಸರಗೋಡು ಹೆಲ್ತ್ ಲೈನ್ ಇನ್ಸ್ ಪೆಕ್ಟರ್ ಮೋಹನನ್ ಮಾಂಗಾಡ್ ವಿವಿಧ ವಿಷಯಗಳಲ್ಲಿ ತರಗತಿ ನಡೆಸಿದರು. ನೆಹರೂ ಯುವ ಕೇಂದ್ರ ಸ್ವಯಂಸೇವಕ ಮಹಮೂದ್ ಸಾದತ್ ಸ್ವಾಗತಿಸಿದರು. ಸ್ವಯಂಸೇವಕಿ ಯಶೋದಾ ವಂದಿಸಿದರು.