ಕಾಸರಗೋಡು: ವಿವಿಧ ಅಗತ್ಯಗಳಿಗಾಗಿ ಕಚೇರಿಗಳಿಗೆ ಆಗಮಿಸುವ ಸಾರ್ವಜನಿಕರ ಬೇಡಿಕೆಗಳಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸಬೇಕೆಂದು ಕಂದಾಯ ಸಚಿವ ಇ.ಚಂದ್ರಶೇಖರನ್ ಹೇಳಿದರು.
ಜಿಲ್ಲೆಯ ವೆಸ್ಟ್ ಎಳೇರಿ ಸ್ಮಾರ್ಟ್ ವಿಲೇಜ್ ಕಚೇರಿಯನ್ನು ಉದ್ಘಾಟಿಸಿ ಸಚಿವರು ಮಾತನಾಡಿದರು.
ಸಾಮಾನ್ಯ ಜನರು ಹೆಚ್ಚಾಗಿ ಅವಲಂಬಿಸಿರುವ ಗ್ರಾಮ ಮತ್ತು ಪಂಚಾಯತ್ ಕಚೇರಿಗಳ ನೌಕರರು ಜನರ ಅಗತ್ಯಗಳಿಗೆ ದೊಡ್ಡ ಪ್ರಮಾಣದಲ್ಲಿ ಪೂರೈಸಲು ಸಾಧ್ಯವಾಗುತ್ತದೆ. ಸೇವೆಗಳನ್ನು ಸಮಯೋಚಿತವಾಗಿ ಸ್ವೀಕರಿಸುವ ಹಕ್ಕು ಸಾರ್ವಜನಿಕರಿಗೆ ಇದೆ. ಸೇವೆಯನ್ನು ತ್ವರಿತಗೊಳಿಸುವ ಸರಕಾರದ ನೀತಿಯ ಭಾಗವಾಗಿ ಸರಕಾರಿ ಸೇವೆಗಳನ್ನು ಆನ್‍ಲೈನ್‍ನಲ್ಲಿ ಲಭ್ಯಗೊಳಿಸಲಾಯಿತು. ಇದಕ್ಕೆ ವಿರುದ್ಧವಾಗಿ ಅನೇಕ ಅಧಿಕಾರಿಗಳು ಕೆಲಸ ಮಾಡುತ್ತಾರೆ. ಸರಕಾರ ಇದನ್ನು ಗಂಭೀರತೆಯಿಂದ ಮಾಡುತ್ತಿದೆ ಎಂದರು.
ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯವು 220 ಗ್ರಾಮ ಕಚೇರಿಗಳನ್ನು ಸ್ಮಾರ್ಟ್ ವಿಲೇಜ್ ಕಚೇರಿಗಳಾಗಿ ಮಾರ್ಪಡಿಸಿದೆ. ರಾಜ್ಯದ 1664 ಗ್ರಾಮ ಕಚೇರಿಗಳನ್ನು ಆಧುನೀಕರಿಸಲು ಸರಕಾರ ಹೆಚ್ಚಿನ ಆದ್ಯತೆ ನೀಡಿದೆ ಎಂದರು ಸಚಿವರು ಹೇಳಿದರು.
ಗ್ರಾಮ ಕಚೇರಿಗಳ ಮೂಲ ಸೌಕರ್ಯಗಳನ್ನು ವಿಸ್ತರಿಸುವ ಭಾಗವಾಗಿ ರಾಜ್ಯದ ಸುಮಾರು 230 ಗ್ರಾಮ ಕಚೇರಿಗಳನ್ನು ನಿರ್ಮಿಸಲಾಗಿದೆ. 270 ಗ್ರಾಮ ಕಚೇರಿಗಳಿಗೆ ಹೆಚ್ಚಿನ ಕೊಠಡಿ ನಿರ್ಮಿಸಲಾಗಿದೆ ಮತ್ತು 230 ಗ್ರಾಮ ಕಚೇರಿಗಳನ್ನು ದುರಸ್ತಿ ಮಾಡಲಾಗುತ್ತಿದೆ. ಈ ಸರಕಾರದ ಅಂತ್ಯದ ವೇಳೆಗೆ 300 ಕ್ಕೂ ಹೆಚ್ಚು ಗ್ರಾಮ ಕಚೇರಿಗಳನ್ನು ಸ್ಮಾರ್ಟ್ ವಿಲೇಜ್ ಕಚೇರಿಗಳಾಗಿ ಪರಿವರ್ತಿಸಲಾಗುವುದು. ಗ್ರಾಮ ಕಚೇರಿಗಳು ಮತ್ತು ಕಂದಾಯ ಕಚೇರಿಗಳ ನವೀಕರಣಕ್ಕಾಗಿ ಸರಕಾರ ಇದುವರೆಗೆ 113 ಕೋಟಿ ರೂ. ವೆಚ್ಚ ಮಾಡಿದೆ ಎಂದು ಅಶರು ತಿಳಿಸಿದರು.
ಶಾಸಕ ಕೆ.ರಾಜಗೋಪಾಲನ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾ„ಕಾರಿ ಡಾ|ಡಿ.ಸಜಿತ್‍ಬಾಬು, ಪರಪ್ಪ ಬ್ಲಾಕ್ ಪಂಚಾಯತ್ ಅಧ್ಯಕ್ಷ ಪಿ.ರಾಜನ್, ಉಪಜಿಲ್ಲಾ„ಕಾರಿ ಅರುಣ್ ಕೆ.ವಿಜಯನ್, ಎಡಿಎಂ ಎನ್.ದೇವಿದಾಸ್, ವೆಸ್ಟ್ ಎಳೇರಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸುಕುಮಾರನ್, ಬ್ಲಾಕ್ ಪಂಚಾಯತ್ ಸದಸ್ಯ ನ್ಯಾಯವಾದಿ ಪಿ.ವೇಣುಗೋಪಾಲನ್, ವೆಳ್ಳರಿಕುಂಡು ತಹಶೀಲ್ದಾರ್ ಪಿ.ಕುಂಞÂರಾಮನ್, ರಾಜಕೀಯ ಪಕ್ಷದ ಪ್ರತಿನಿ„ಗಳಾದ ಎ.ಅಪ್ಪುಕುಟ್ಟನ್, ಸಿ.ಪಿ.ಸುರೇಶ್, ಜೋಯಿ ಜೋಸೆಫ್, ಜೆಟೊ ಜೋಸೆಫ್ ಮತ್ತು ಪಿ.ಜೆ.ಆ್ಯಂಟೆಕ್ಸ್ ಮೊದಲಾದವರು ಮಾತ ನಾಡಿದರು.