ಬದಿಯಡ್ಕ: ಉದಯಗಿರಿ ಬಾಂಜತ್ತಡ್ಕ ಶ್ರೀ ಶಂಕರನಾರಾಯಣ ಪಂಚಾಯತ್ ಕಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಮತ್ತು ಬೀಳ್ಕೊಡುಗೆ ಸಮಾರಂಭ ಮಾರ್ಚ್ 1 ಭಾನುವಾರ ನಡೆಯಲಿರುವುದು. ಬೆಳಗ್ಗೆ 9.30ಕ್ಕೆ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಕುಸುಮ ಎನ್. ಧ್ವಜಾರೋಹಣಗೈಯುವರು. 10ರಿಂದ ಅಂಗನವಾಡಿ ಮಕ್ಕಳು ಹಾಗೂ ಶಾಲಾ ವಿದ್ಯಾರ್ಥಿಗಳು, ಹಳೆವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು, ಮಧ್ಯಾಹ್ನ ಭೋಜನ, ಅಪರಾಹ್ನ 2 ಗಂಟೆಯಿಂದ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಬದಿಯಡ್ಕ ಗ್ರಾಮಪಂಚಾಯಿತಿ ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷ ಶ್ಯಾಮಪ್ರಸಾದ ಮಾನ್ಯ ಅಧ್ಯಕ್ಷತೆ ವಹಿಸುವರು. ಗ್ರಾಪಂ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಉದ್ಘಾಟಿಸಲಿದ್ದಾರೆ. ನಿವೃತ್ತರಾಗಲಿರುವ ಶಾಲಾ ಮುಖ್ಯ ಅಧ್ಯಾಪಿಕೆ ಅಂಬಿಕಾ ಸರಸ್ವತಿ ಅವರಿಗೆ ಬೀಳ್ಕೊಡುಗೆ. ಅಧ್ಯಾಪಿಕೆ ಅನಿತಾ ಪಿ. ಅಭಿನಂದನಾ ಭಾಷಣ ಮಾಡಲಿದ್ದಾರೆ. ಅಧ್ಯಾಪಿಕೆ ವಿಭಶ್ರೀ ಪಿ. ಸನ್ಮಾನ ಪತ್ರ ವಾಚಿಸಲಿದ್ದಾರೆ. ಬ್ಲಾಕ್ ಪಂಚಾಯಿತಿ ಸದಸ್ಯ ಅವಿನಾಶ್ ರೈ, ಗ್ರಾಪಂ ಸದಸ್ಯೆ ಪ್ರಸನ್ನ ಎನ್.ಕೆ., ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಕುಸುಮ ಎನ್., ಎಸ್.ಎಸ್.ಜಿ ಅಧ್ಯಕ್ಷ ಕೃಷ್ಣ ಪ್ರಸಾದ್, ಎಂ.ಪಿ.ಟಿ.ಎ.ಅಧ್ಯಕ್ಷೆ ಬೇಬಿ ಶಾಲಿನಿ, ಕುಂಬಳೆ ಉಪಜಿಲ್ಲಾ ನಿರೂಪಣಾಧಿಕಾರಿ ಶಿವರಾಮ, ವಿದ್ಯಾಗಿರಿ ಶಾಲಾ ಮುಖ್ಯೋಪಾಧ್ಯಾಯಿನಿ ಲಲಿತಾಂಬಿಕಾ ಎ. ಶುಭಾಶಂಸನೆಗೈಯುವರು. ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಯತೀಶ್ ಕುಮಾರ್ ರೈ ಬಹುಮಾನ ವಿತರಿಸಿ ಮಾತನಾಡುವರು. ಪೆರಡಾಲ ಸರ್ಕಾರೀ ಶಾಲೆಯ ಅಧ್ಯಾಪಕ ರಾಜೇಶ್ ಎಸ್., ಶಾಲಾ ಅಧ್ಯಾಪಕ ಶ್ರೀಧರ ಪ್ರಸಾದ, ಗೀತಾಮಾಲಿನಿ ಸಿ.ಎಚ್. ಪಾಲ್ಗೊಳ್ಳಲಿದ್ದಾರೆ.
ಉದಯಗಿರಿ ಶಾಲಾ ವಾರ್ಷಿಕೋತ್ಸವ; ಮುಖ್ಯೋಪಾಧ್ಯಾಯಿನಿ ಅಂಬಿಕಾ ಸರಸ್ವತಿಯವರಿಗೆ ಬೀಳ್ಕೊಡುಗೆ ಸಮಾರಂಭ
0
ಫೆಬ್ರವರಿ 25, 2020