ಪೆರ್ಲ:ಶೇಣಿ ರಂಗಜಂಗಮ ಟ್ರಸ್ಟ್ ಕಾಸರಗೋಡು ಮತ್ತು ಯಕ್ಷಸ್ನೇಹಿ ಬಳಗ ಪೆರ್ಲ ಜಂಟಿ ಆಶ್ರಯದಲ್ಲಿ ವಾಣಿನಗರ
ಶ್ರೀಕೃಷ್ಣ ಭಜನಾ ಮಂದಿರದಲ್ಲಿ ನಡೆದ ತಾಳಮದ್ದಳೆ ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದ ಪಿ.ಎಸ್. ಕಡಂಬಳಿತ್ತಾಯ ಪಂಬತ್ತಡ್ಕ ಅವರನ್ನು ಗೌರವಿಸಲಾಯಿತು.
ಭಜನಾ ಮಂದಿರದ ಗೌರವಾಧ್ಯಕ್ಷ ಕೆ.ಗಣಪತಿ ಭಟ್ ಪತ್ತಡ್ಕ ಶಾಲು ಹೊದೆಸಿ, ಹಣ್ಣು ಹಂಪಲು, ಸಂಸ್ಮರಣಾ ಪತ್ರ ನೀಡಿ ಗೌರವಿಸಿದರು. ಕಣಿಪುರ ಮಾಸಪತ್ರಿಕೆ ಸಂಪಾದಕ ಎಂ.ನಾ. ಚಂಬಲ್ತಿಮಾರ್, ಭಜನಾ ಮಂದಿರ ಅಧ್ಯಕ್ಷ ಕೃಷ್ಣ ಜೆ., ಶೇಣಿ ವೇಣುಗೋಪಾಲ ಭಟ್, ಡಾ.ಸತೀಶ ಪುಣಿಂಚತ್ತಾಯ ಉಪಸ್ಥಿತರಿದ್ದರು.