ಬದಿಯಡ್ಕ: ಶ್ರೀಮದ್ ಎಡನೀರು ಮಠದ ಆಶ್ರಯದಲ್ಲಿರುವ ಎಡನೀರು ಶ್ರೀವಿಷ್ಣುಮಂಗಲ ದೇವಾಲಯದ ವಾರ್ಷಿಕೋತ್ಸವವು ಇಂದಿನಿಂದ(ಗುರುವಾರ) ಫೆ.17ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಇಂದು ಬೆಳಿಗ್ಗೆ 10ಕ್ಕೆ ಧ್ವಜಾರೋಹಣ, ಶ್ರೀಭೂತಬಲಿ, ಹಸಿರುವಾಣಿ ಮೆರವಣಿಗೆ, ಉಗ್ರಾಣ ಮುಹೂರ್ತ ನಡೆಯಲಿದೆ. ಸಂಜೆ 6 ರಿಂದ ದೀಪೋತ್ಸವ ನಡೆಯುವುದು. ನಾಳೆ(ಶುಕ್ರವಾರ) ಬೆಳಿಗ್ಗೆ 9 ರಿಂದ ಶ್ರೀಭೂತಬಲಿ, ಸಂಜೆ 6ಕ್ಕೆ ದೀಪೋತ್ಸವ ನಡೆಯಲಿದೆ.ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ 8 ರಿಂದ ವಿದ್ವಾನ್ ದೀಪಕ್ ಕುಮಾರ್ ಮತ್ತು ವಿದುಷಿಃ ಪ್ರೀತಿಕಲಾ ಪುತ್ತೂರು ಇವರಿಂದ ಕಲಾದೀಪ-ಯುಗಳ ಭರತನಾಟ್ಯ ಪ್ರದರ್ಶನ ನಡೆಯಲಿದೆ.
ಶನಿವಾರ ಬೆಳಿಗ್ಗೆ 9 ರಿಂದ ಶ್ರೀಭೂತಬಲಿ, ರಾತ್ರಿ 8.30 ರಿಂದ ನಡು ದೀಪೋತ್ಸವ, 10.30ರಿಂದ ಶ್ರೀಮಠದ ಮುಂಭಾಗದಲ್ಲಿ ಪುಷ್ಪರಥೋತ್ಸವ ನಡೆಯಲಿದೆ.ರಾತ್ರಿ 7 ರಿಂದ ಶ್ರೀಮದ್ ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತಿ ಶ್ರೀಗಳಿಂದ ದೇವ ಭಾವ ಸಂಗೀತ ಕಚೇರಿ ನಡೆಯಲಿದೆ. ವಿದ್ವಾನ್.ಟಿ.ಜಿ.ಗೋಪಾಲಕೃಷ್ಣನ್(ವಯಲಿನ್), ವಿದ್ವಾನ್ ಎಂ.ಕೆ.ಪ್ರಾಣೇಶ್ ಬೆಂಗಳೂರು(ಕೊಳಲು), ವಿದ್ವಾನ್.ಅನೂರು ವೆಂಕಟಕೃಷ್ಣ ಶರ್ಮ(ಮೃದಂಗ), ವಿದ್ವಾನ್.ಅರುಣ್ ಕುಮಾರ್ ಬೆಂಗಳೂರು(ನಾದಪುಂಜ), ವಿದ್ವಾನ್.ಅನೂರು ವಿನೋದ್ ಶ್ಯಾಮ್(ತಬ್ಲಾ), ವಿದ್ವಾನ್.ದೇವರಾಜ ಆಚಾರ್ ಹೊಸಬೆಟ್ಟು(ಮೆಂಡೋಲಿನ್) ನಲ್ಲಿ ಸಹಕರಿಸುವರು.
ಫೆ.16 ರಂದು ಬೆಳಿಗ್ಗೆ 9 ರಿಂದ ಶ್ರೀಭೂತಬಲಿ, ರಾತ್ರಿ 8.30 ರಿಂದ ಬೆಡಿ ಉತ್ಸವ, ರಾತ್ರಿ ಭರತನಾಟ್ಯ ಪ್ರದರ್ಶನ ನಡೆಯಲಿದೆ. 11 ರಿಂದ ಶ್ರೀಮಠದ ಮುಂಭಾಗದಲ್ಲಿ ಪುಷ್ಪರಥೋತ್ಸವ ನಡೆಯಲಿದೆ. ಫೆ.17 ರಂದು ಸೋಮವಾರ ಬೆಳಿಗ್ಗೆ 10ರಿಂದ ಶಯನೋದ್ಘಾಟನೆ, ಮಂಗಳಾಭಿಷೇಕ, ರಾತ್ರಿ 10 ರಿಂದ ಶ್ರೀಮಠದ ಮುಂಭಾಗದಲ್ಲಿ ನೃತ್ಯೋತ್ಸವ, ತೆಪ್ಪೋತ್ಸವ, ಅವಭೃತ ಸ್ನಾನ, ಪ್ರಸಾದ ವಿತರಣೆ, ಧ್ವಜಾವರೋಹಣದೊಂದಿಗೆ ವಾರ್ಷಿಕ ಉತ್ಸವ ಸಂಪನ್ನಗೊಳ್ಳಲಿದೆ. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ 7 ರಿಂದ ಎಸ್.ಎಸ್.ಆರ್ಕೆಸ್ಟ್ರಾ ಪಯ್ಯನ್ನೂರು ತಂಡದವರಿಂದ ಭಕ್ತಿಗಾನ ಮೇಳ ನಡೆಯಲಿದೆ.