HEALTH TIPS

ಸಿ.ಪಿ.ಸಿ.ಆರ್.ಐ. ಸುಧಾರಿತ ತಂತ್ರಜ್ಞಾನಕ್ಕೆ ಪುರಸ್ಕಾರ


               
         ಕಾಸರಗೋಡು: ಸಿಪಿಸಿಆರ್‍ಐ ಕೇಂದ್ರ ಅಭಿವೃದ್ಧಿ ಪಡಿಸಿದ ಕಟಾವು ನಂತರದ ತಂತ್ರಜ್ಞಾನ ಆಧರಿತ ಸೇವೆಗೆ ಕೇಂದ್ರೀಯ ಪುರಸ್ಕಾರ ಲಭಿಸಿದೆ.
           2019-20 ನೇ ಸಾಲಿನ ಅಖಿಲ ಭಾರತೀಯ ಸಂಯೋಜಿತ ಸಂಶೋಧನಾ ಯೋಜನೆಯಡಿ ಜಬಲ್ಪುರದ ಜವಾಹರಲಾಲ್ ಕೃಷಿ ವಿಜ್ಞಾನ ವಿಶ್ವವಿದ್ಯಾಲಯವು ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಕಟಾವು ತಂತ್ರಜ್ಞಾನ ಅಭಿವೃದ್ಧಿಪಡಿಸಿದ ಸಿಪಿಸಿಆರ್‍ಐ ಸಂಸ್ಥೆಗೆ ಈ ಪ್ರಶಸ್ತಿ ನೀಡಲಾಗಿದೆ. ಜಬಲ್ಪುರದಲ್ಲಿ ನಡೆದ ಕೃಷಿ ತಂತ್ರಜ್ಞಾನ ಆಧರಿತ ಕಾರ್ಯಾಗಾರ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಈ ಪುರಸ್ಕಾರವನ್ನು ಸಿಪಿಸಿಆರ್‍ಐ ಕಾಸರಗೋಡು ಸಂಸ್ಥೆ ತೆಂಗು ಬೆಳೆಯ ಅಭಿವೃದ್ಧಿ ಸಹಿತ ಅದನ್ನು ಪೆÇ್ರೀತ್ಸಾಹಿಸುವ ಮೂಲಕ ಜನರನ್ನು ತೆಂಗು ಕೃಷಿಯತ್ತ ಆಕರ್ಷಿಸಿದೆ.
        ಅದರಂತೆ ತೆಂಗಿನ ಐಸ್‍ಕ್ರೀಂ, ತೆಂಗಿನೆಣ್ಣೆ, ಕೊಕ್ಕೋ ಚಾಕಲೇಟ್ ಸಹಿತ ತೆಂಗಿನಿಂದ ಸಕ್ಕರೆ ಉ ತ್ಪಾದಿಸುವ ಕಾರ್ಯವನ್ನು ಯಶಸ್ವಿಯಾಗಿಸಿದೆ. ಹಲವು ಮೌಲ್ಯಾಧಾರಿತ ಉತ್ಪನ್ನಗಳನ್ನು ತಯಾರಿಸಿ, ಪೆÇ್ರೀತ್ಸಾಹಿಸುವುದರ ಜತೆಗೆ ಮಾರುಕಟ್ಟೆ ಸೃಷ್ಟಿಯಲ್ಲೂ ಸಾಧನೆ ಮಾಡಿದ ಸಿಪಿಸಿಆರ್‍ಐ ಕಾರ್ಯವನ್ನು ಶ್ಲಾಘಿಸಿರುವ ಜಬಲ್ಪುರದ ವಿವಿಯು ಕೇಂದ್ರೀಯ ಪುರಸ್ಕಾರ ನೀಡಿತು.
        ಸಿಪಿಸಿಆರ್‍ಐ ಸಂಸ್ಥೆ ಈಗಾಗಲೇ ನಾಲ್ಕು ತಂತ್ರಜ್ಞಾನವನ್ನು ಉದ್ಯಮಿಗಳಿಗೆ ನೀಡಿದೆ. ನಾಲ್ಕು ತಾಂತ್ರಿಕ ಸಾಧನಗಳನ್ನು 16 ಉದ್ಯಮಿಗಳ ಮೂಲಕ ಮುನ್ನಡೆಸುತ್ತಿದೆ. ಸಂಸ್ಥೆಯಿಂದ ತಯಾರಿಸಲಾದ ಮೌಲ್ಯಾಧಾರಿತ ವಸ್ತುಗಳು ಒಟ್ಟು ಏಳು ಕೃಷಿ ಮೇಳ, ವ್ಯಾಪಾರಿ ಮೇಳ ಸಹಿತ ನಾನಾ ಪ್ರದರ್ಶನ ಮಳಿಗೆಗಳಲ್ಲಿ ಪ್ರದರ್ಶಿಸಲಾಗಿದೆ. ನೂತನ ತಂತ್ರಜ್ಞಾನವನ್ನು ಹಲವೆಡೆ ಪ್ರದರ್ಶಿಸಲಾಗಿದ್ದು, ಸುಧಾರಿತ ತಂತ್ರಜ್ಞಾನದ ಬಗ್ಗೆ ಸಂಶೋಧನಾ ಲೇಖನಗಳು ಅಂತಾರಾಷ್ಟ್ರೀಯ ಸಂಶೋಧನಾ ಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ. ಒಂದು ತಂತ್ರಜ್ಞಾನಕ್ಕೆ ಪೇಟೆಂಟ್ ಕೂಡ ಲಭಿಸಿದೆ.
ಸಂಸ್ಥೆಯ ಹಿರಿಯ ವಿಜ್ಞಾನಿ ಡಾ.ಎಂ.ಆರ್.ಮಣಿಕಂಠನ್ ಮತ್ತು ಡಾ.ಆರ್.ಪಾಂಡಿ ಸೆಲ್ವನ್ ಸಂಸ್ಥೆಗೆ ಲಭಿಸಿದ ಉನ್ನತ ಪುರಸ್ಕಾರ ಸ್ವೀಕರಿಸಿದರು. ಜೆ.ಎನ್.ಕೆ.ವಿ.ವಿ. ಸಂಸ್ಥೆಯ ಉಪ ಕುಲಪತಿ ಡಾ.ಪಿ.ಕೆ.ಬಿಸೆನ್ ಪ್ರಶಸ್ತಿ ಹಸ್ತಾಂತರಿಸಿದರು. ಡಾ|ಎಸ್.ಎನ್.ಝಾ, ಡಾ.ಎಸ್.ಕೆ.ತ್ಯಾಗಿ ಮೊದಲಾದವರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries