HEALTH TIPS

ಟ್ರಂಪ್ ಹಸ್ತಾಕ್ಷರ ಇಸಿಜಿ ಅಲೆಯಂತೆ ಕಾಣುತ್ತಿದೆ ಎಂದ ಟ್ವಿಟ್ಟಿಗರು

 
          ಅಹಮದಾಬಾದ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪತ್ನಿ ಮೆಲಾನಿಯಾ ಅವರು ಭಾರತ ಪ್ರವಾಸದ ವೇಳೆ ಮಹಾತ್ಮ ಗಾಂಧೀಜಿಯವರ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿ ಚರಕವನ್ನು ಸುತ್ತಿ ನೂಲು ತೆಗೆದಿದ್ದಾರೆ. ಟ್ರಂಪ್ ಪರಿವಾರ ಹೋಗಿ ಬಂದ ಕಡೆಯಲ್ಲ ಒಂದಲ್ಲ ಒಂದು ಪ್ರಮಾದ, ಅವಾಂತರ ಎಸಗುತ್ತಲೇ ಇದ್ದು, ಮೀಮ್ಸ್, ಟ್ರಾಲ್ ಪೇಜ್ ಗಳಿಗೆ ಭರ್ಜರಿ ಆಹಾರ ಒದಗಿಸಿದರು.
      ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಅವರ ಪತ್ನಿ ಮೆಲಾನಿಯಾ, ಮಗಳು ಇವಾಂಕ ಟ್ರಂಪ್ ಮತ್ತು ಅಳಿಯ ಜಾರೆಡ್ ಕುಶ್ನರ್ ಎರಡು ದಿನಗಳ ಪ್ರವಾಸಕ್ಕಾಗಿ ಭಾರತಕ್ಕೆ ಬಂದಿದ್ದು, ಮೊದಲ ದಿನದಂದು ಅಹಮದಾಬಾದ್ ನಲ್ಲಿದ್ದರು. ಆಗ್ರಾದ ತಾಜ್ ಮಹಲ್ ಗೆ ಭೇಟಿ ನೀಡಿದ್ದರು. ಫೆಬ್ರವರಿ 25ರಂದು ದೆಹಲಿಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.
       ಮೆಲಾನಿಯಾ ದಿರಿಸು ಮಾತ್ರವಲ್ಲ, ಟ್ರಂಪ್ ತೊಟ್ಟಿದ್ದ ಟೈ ಕೂಡ ನೆಟ್ಟಿಗರ ಚರ್ಚೆಗೆ ಒಳಗಾಗಿದೆ. ಅವರ ಹಳದಿ ಬಣ್ಣದ ಟೈ ತಮಾಷೆಯ ವಸ್ತುವಾಗಿದೆ. ಟ್ರಂಪ್ ದಂಪತಿ ಅವರನ್ನು ಸಬರಮತಿ ಆಶ್ರಮದಲ್ಲಿ ಸ್ವಾಗತಿಸಿದ ಪ್ರಧಾನಿ ಮೋದಿ, ಖಾದಿ ಬಟ್ಟೆಯಿಂದ ಮಾಡಿದ ಉತ್ತರೀಯವನ್ನು ಟ್ರಂಪ್ ದಂಪತಿಯ ಕುತ್ತಿಗೆಗೆ ಹಾಕಿ ಸ್ವಾಗತಿಸಿದರು. ಸಬರಮತಿ ಆಶ್ರಮ ಪ್ರವೇಶಿಸುತ್ತಿದ್ದಂತೆ ಗಾಂಧೀಜಿಯ ಭಾವಚಿತ್ರಕ್ಕೆ ಮೋದಿ ಮತ್ತು ಟ್ರಂಪ್ ಹಾರವನ್ನು ಹಾಕಿ ನಮಿಸಿದರು. ಟ್ರಂಪ್ ದಂಪತಿ ಚರಕವನ್ನು ಸುತ್ತಿ ಆನಂದಿಸಿದರು. ಇದಾದ ಬಳಿಕ ಟ್ರಂಪ್ ಸಂದರ್ಶಕರ ಪುಸ್ತಕದಲ್ಲಿ ಬರೆದಿದ್ದು ಈಗ ಟ್ರಾಲ್ ಆಗುತ್ತಿದೆ.
        ಸಂದರ್ಶಕರ ಪುಸ್ತಕದಲ್ಲಿ ಟ್ರಂಪ್ ಹಸ್ತಾಕ್ಷರ ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಸಬರಮತಿ ಆಶ್ರಮದ ಸಂದರ್ಶಕರ ಪುಸ್ತಕದಲ್ಲಿ"ಪ್ರೈಮ್ ಮಿನಿಸ್ಟರ್ ಮೋದಿ, ಥಾಂಕ್ಯೂ ಫಾರ್ ದಿಸ್ ವಂಡರ್ ಫುಲ್ ವಿಸಿಟ್" ಎಂದು ಬರೆದು ಹಸ್ತಾಕ್ಷರ ಹಾಕಿದ್ದಾರೆ. ಆದರೆ, ಮಹಾತ್ಮಾ ಗಾಂಧಿ ಬಗ್ಗೆ ಒಂದು ವಾಕ್ಯವನ್ನು ಬರೆದಿಲ್ಲದಿರುವುದು ಟೀಕೆಗೆ ಗುರಿಯಾಗಿದೆ. ಈ ಹಿಂದೆ ಭಾರತಕ್ಕೆ ಭೇಟಿ ನೀಡಿದ್ದ ಒಬಾಮಾ ಅವರು ಗಾಂಧೀಜಿ ಭಾರತಕ್ಕೆ ಮಾತ್ರವಲ್ಲ, ಇಡೀ ವಿಶ್ವಕ್ಕೆ ಮಹಾಪುರುಷ ಎಂದು ಬರೆದಿದ್ದರು. ಇದಲ್ಲದೆ, ಟ್ರಂಪ್ ಹಸ್ತಾಕ್ಷರ ಬಗ್ಗೆ ಟ್ವಿಟ್ಟರ್ ನಲ್ಲಿ ಚರ್ಚೆ, ಹಾಸ್ಯ ಮುಂದುವರೆದಿದೆ.
       ಡೊನಾಲ್ಡ್ ಟ್ರಂಪ್ ಹಸ್ತಾಕ್ಷರ ಹೇಗಿದೆ:
     ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಸ್ತಾಕ್ಷರ ಹೇಗೆ ಕಾಣುತ್ತದೆ ಎಂಬುದನ್ನು ಪ್ರತೀಕ್ ಎಂಬುವರು ವಿವರಿಸಿ, ಟ್ರಂಪ್ ಅವರು ಬಾಂದ್ರಾ-ವರ್ಲಿ ಸಮುದ್ರ ಮಾರ್ಗದ ಸೇತುವೆ ಚಿತ್ರ ಬರೆದಿದ್ದಾರೆ ತುಂಬಾ ದಯಾಳು ಎಂದು ಹಾಕಿದ್ದಾರೆ.
         ಇಸಿಜಿ ಅಲೆಯಂತೆ ಕಂಡ ಹಸ್ತಾಕ್ಷರ:
      ಇದು ಡೊನಾಲ್ಡ್ ಟ್ರಂಪ್ ಹಸ್ತಾಕ್ಷರವೋ ಅಥವಾ ಹೃದಯ ಬಡಿತದ ಸಂಕೇತವೊ, ಇಸಿಜಿ ವೇವ್ ನಂತೆ ಕಾಣುತ್ತಿದೆ ಎಂದು ಟ್ವಿಟ್ಟಿಗರೊಬ್ಬರು ಹೇಳಿದ್ದಾರೆ.
            ಡೊನಾಲ್ಡ್ ಟ್ರಂಪ್ ಹಸ್ತಾಕ್ಷರ ಬಗ್ಗೆ ಇನ್ನಷ್ಟು:
     ಡೊನಾಲ್ಡ್ ಟ್ರಂಪ್ ಹಸ್ತಾಕ್ಷರ ಬಗ್ಗೆ ಇನ್ನಷ್ಟು ವಿವರ ನೀಡಿರುವ ಮಿತೇಶ್ ಎಂಬುವರು, ಇದು ಸೈನ್ ವೇವ್ ಸಿಗ್ನಲ್, ಇದನ್ನು ನಾನು ನನ್ನ ಇಂಜಿನಿಯರಿಂಗ್ ದಿನಗಳಲ್ಲಿ ಆಸಿಲೇಟರ್ ಮ್ಯಾನಿಟರ್ ನಲ್ಲಿ ಮೂಡಿಸಲು ಯತ್ನಿಸುತ್ತಿದೆ ಎಂದಿದ್ದಾರೆ.
        ಡೊನಾಲ್ಡ್ ಟ್ರಂಪ್ ಹಸ್ತಾಕ್ಷರ ಡಿಕೋಡ್:
      ಹಾಸ್ಯ ನಟ ಬ್ರಹ್ಮಾನಂದಂ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಸ್ತಾಕ್ಷರ ಡಿಕೋಡ್ ಮಾಡುತ್ತಿರುವ ಚಿತ್ರ ಹಾಕಿ ಟ್ರಾಲ್ ಮಾಡಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries