ಕಾಸರಗೋಡು: ಪಾರ್ತಿಸುಬ್ಬನಿಗೆ ಯಕ್ಷಗಾನ ವಾಲ್ಮೀಕಿ ಎಂಬ ಬಿರುದಿನಿಂದ ನಾವು ಗುರುತಿಸುತ್ತೇವೆ. ಕಳೆದ ಶತಮಾನದ ಉತ್ತರಾರ್ಧದ ಆರಂಭದ ಕಾಲ ಪಾರ್ತಿಸುಬ್ಬನ ಸ್ಥಳ,ಕಾಲ, ಬದುಕು, ಬರಹಗಳ ಬಗ್ಗೆ ಭಾರೀ ಚರ್ಚೆಗಳಾದ ವಿಶಿಷ್ಟ ಕಾಲವಾಗಿತ್ತು. ಪಾರ್ತಿಸುಬ್ಬನ ಬಗೆಗಿನ ಚರ್ಚೆ ವೈವಿಧ್ಯಮಯ ಮಜಲುಗಳನ್ನು ಕಂಡುಕೊಂಡಿರುವುದು ಗಮನಾರ್ಹ. ಯಕ್ಷಗಾನ ಸಾಹಿತ್ಯ ಚರಿತ್ರೆಯ ಮರು ನಿರೂಪಣೆ ಅಗತ್ಯವಿದೆ. 1945ರಲ್ಲಿ ಮುಳಿಯ ತಿಮ್ಮಪ್ಪಯ್ಯ ಅವರು ಮೊದಲಿಗೆ ಪಾರ್ತಿಸುಬ್ಬ ಎಂಬ ಗ್ರಂಥ ರಚಿಸುವ ಮೂಲಕ ಆತನ ಬಗೆಗಿನ ಮೊದಲ ಗ್ರಂಥವಾಗಿ ವಿವಿಧ ಆಯಾಮಗಳ ಚಿಂತನೆಗೆ ಕಾರಣವಾಯಿತು ಎಂದು ಹಿರಿಯ ಯಕ್ಷಗಾನ ವಿದ್ವಾಂಸ ಡಾ.ಪಾದೇಕಲ್ಲು ವಿಷ್ಣು ಭಟ್ ಅವರು ತಿಳಿಸಿದರು.
ಕರ್ನಾಟಕ ಯಕ್ಷಗಾನ ಅಕಾಡೆಮಿಯ ಪ್ರಾಯೋಜಕತ್ವದಲ್ಲಿ, ಕಣ್ಣೂರು ವಿಶ್ವವಿದ್ಯಾನಿಲಯದ ಭಾರತೀಯ ಭಾಷಾ ಅಧ್ಯಯನಾಂಗ ಮತ್ತು ಕಾಸರಗೋಡು ಸರ್ಕಾರಿ ಕಾಲೇಜಿನ ಯಕ್ಷಗಾನ ಸಂಶೋಧನ ಕೇಂದ್ರ ಈ ಸಂಸ್ಥೆಗಳ ಸಹಯೋಗದೊಂದಿಗೆ ಕಾಸರಗೋಡಿನ ಚಾಲಾ ವಿದ್ಯಾ ಸಂಸ್ಥೆಯಲ್ಲಿ ನಡೆದ ಎರಡು ದಿನಗಳ ಪಾರ್ತಿಸುಬ್ಬ ಬದುಕು ಬರಹ ವಿಚಾರಗೋಷ್ಠಿಯ ಮೊದಲ ಭಾಗದಲ್ಲಿ ಪ್ರಸ್ತುತಗೊಂಡ ಪಾರ್ತಿಸುಬ್ಬನ ಕಾಲ ಹಾಗೂ ಕತೃತ್ವ ಚರ್ಚೆಗಳು ವಿಷಯದ ಬಗ್ಗೆ ಅವರು ಮಾತನಾಡಿದರು.
ಯಕ್ಷಗಾನಕ್ಕೆ ಸಂಬಂಧಿಸಿದ ತಿಮ್ಮಪ್ಪಯ್ಯನವರೇ ಸುಬ್ಬನ ಬಗ್ಗೆ ಮೊದಲ ಪರಿಚಯ ನೀಡಿದವರಾಗಿದ್ದು, ಆ ಮೊದಲಾಗಲಿ-ಬಳಿಕವಾಗಲಿ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಉಲ್ಲೇಖಗೊಳ್ಳದಿರುವುದು ಖೇದಕರ ಎಂದು ಅವರು ತಿಳಿಸಿದರು. ಮಹಾನ್ ಸಾಧಕರಾದ ಕುಕ್ಕಿಲ ಕೃಷ್ಣ ಭಟ್ ಅವರು ಸುಧೀರ್ಘ ಕಾಲ ಅಧ್ಯಯನ ನಡೆಸಿ ಶಾಸ್ತ್ರೀಯವಾದ ಪಾರ್ತಿಸುಬ್ಬನ ಚಿತ್ರಣವನ್ನು ಸಂಪಾದಿಸಿದರು. ಮೈಸೂರು ವಿಶ್ವ ವಿದ್ಯಾನಿಲಯ 1975ರಲ್ಲಿ ಇದನ್ನು ಪ್ರಕಟಿಸಿತು. ಮುಳಿಯ ತಿಮ್ಮಪ್ಪಯ್ಯನವರ ಪಾರ್ತಿಸುಬ್ಬ, ಶಿವರಾಮ ಕಾರಂತರ ಯಕ್ಷಗಾನ ಬಯಲಾಟ, ಕುಕ್ಕಿಲ ಕೃಷ್ಣ ಭಟ್ ಅವರ ಕುಂಬಳೆ ಪಾರ್ತಿಸುಬ್ಬನ ಕಾಲ ಮತ್ತು ಕತೃತ್ವ ನಿರ್ಣಯ ಎಂಬ 1961ರ ಕೋಟೆಕಾರಿನ ಉಪನ್ಯಾಸ ಲೇಖನ, ಅಮೃತ ಸೋಮೇಶ್ವರರ ವೆಂಕಣನಾಯಕನ ಮಗ ಸುಬ್ಬ ಬ್ರಹ್ಮಾವರದವನಲ್ಲÉಂಬ ಲೇಖನ, ಕುಕ್ಕಿಲ ಕೃಷ್ಣ ಭಟ್ ಅವರ ಮಧುಪುರದಲ್ಲಿ(1962) ಕೋಟ ಕಾರಂತರ ಸುಬ್ಬನ ಸಮಸ್ಯೆ, ಸಿರಿಬಾಗಿಲು ವೆಂಕಪ್ಪಯ್ಯನವರ ಯಕ್ಷಗಾನದಲ್ಲಿ ಸುಬ್ಬನ ಸಮಸ್ಯೆ ಮೊದಲಾದ ಲೇಖನ-ಕೃತಿಗಳು ಪಾರ್ತಿಸುಬ್ಬನ ಬಗ್ಗೆ ಮಾಹಿತಿ ನೀಡುತ್ತದೆ. ಆದರೆ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಉಲ್ಲೇಖಗೊಳ್ಳದಿರುವುದು ಆಶ್ಚರ್ಯಕರ ಎಂದು ಅವರು ತಿಳಿಸಿದರು. ಯಕ್ಷಗಾನ ಮತ್ತು ಹರಿದಾಸ ಸಾಹಿತ್ಯ ಚಂದಸ್ಸುಗಳು ನಿಕಟವಾಗಿದ್ದು, ಚರ್ಚೆಗಳು ಈ ಬಗ್ಗೆ ನಡೆದಿಲ್ಲ. ಅಖಿಲ ಕರ್ನಾಟಕ ವಿದ್ವತ್ ವಲಯವು ಯಕ್ಷಗಾನ-ಹರಿದಾಸ ಸಾಹಿತ್ಯಗಳ ಶ್ರೀಮಂತ ಚಂದೋಬದ್ದತೆಯನ್ನು ಗಮನಿಸದಿರುವುದು ಸರಿಯಲ್ಲ ಎಂದು ಅವರು ತಿಳಿಸಿದರು.
ಪಾರ್ತಿಸುಬ್ಬನ ಬಗೆಗಿನ ಅಧ್ಯಯನಗಳು ಹಾಗೂ ಕೃತಿ ಪ್ರಕಟಣೆಯ ಬಗ್ಗೆ ಈ ಸಂದರ್ಭ ರಾಮಕುಂಜ ಸರ್ಕಾರಿ ಪ.ಪೂ.ಕಾಲೇಜಿನ ಉಪನ್ಯಾಸಕ ಗಣರಾಜ ಕುಂಬ್ಳೆ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಧ್ಯಾಪಕ ಡಾ.ಕೆ.ಕಮಲಾಕ್ಷ ಅವರು ಮಾತನಾಡಿ, ಪಾರ್ತಿಸುಬ್ಬನ ಕೃತಿ ರಚನೆಗಳನ್ನು ಸಮಸಗ್ರವಾಗಿ ಅವಲೋಕಿಸಿದಾಗ ಮಲೆಯಾಳ ಸಾಂಸ್ಕøತಿಕತೆಯ ಲೇಪನಗಳೂ ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ ಆ ಬಗ್ಗೆ ಇನ್ನಷ್ಟು ಅಧ್ಯಯನಗಳಾಗಬೇಕು ಎಂದರು. ಶರಣು ತಿರುವಗ್ರ ಶಾಲಿವಾಹಿನಿ ಎಂಬ ಯಕ್ಷಗಾನ ಸ್ತುತಿ ಪದ್ಯದಲ್ಲಿ ಬರುವ ಕೇರಳದ ಚೆರುಕುನ್ನು ಭಗವತಿ ಕ್ಷೇತ್ರದ ಬಗ್ಗೆ ಆಗಿರಬಹುದು. ಜೊತೆಗೆ ನಾಲ್ಕನೇ ಚರಣದ ಅದೇ ಸ್ತುತಿಪದ್ಯದಲ್ಲಿ ದೇವರಡಿಪಡಿ ಕಾರಿಣಿ ಎಂಬ ವಾಕ್ಯವು ತಮಿಳು ಪ್ರಭಾವವನ್ನು ಬಿಂಬಿಸುತ್ತದೆ. ಕಥಕಳಿ-ರಾಮನಾಟ್ಟಂಗಳ ಪ್ರಭಾವ ಯಕ್ಷಗಾನಕ್ಕೆ ಯಕ್ಷಗಾನದ ಪ್ರಭಾವ ಅವುಗಳ ಮೇಲೆ ಎಷ್ಟರ ವರೆಗೆ ನಡೆದಿದೆ ಎಂಬ ವಿಷಯದ ಬಗೆಗೂ ಅಧ್ಯಯನಗಳಾಗಬೇಕು ಎಂದು ಅಭಿಪ್ರಾಯಪಟ್ಟರು.
ಎರಡನೇ ಹಂತದ ಗೋಷ್ಠಿಯಲ್ಲಿ ಡಾ.ಯು.ಶಂಕರನಾರಾಯಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಪಾರ್ತಿಸುಬ್ಬನ ಪದ ಪ್ರಯೋಗ ವೈಶಿಷ್ಟ್ಯಗಳು ವಿಷಯದ ಬಗ್ಗೆ ಯಕ್ಷಗಾನ ಕಲಾವಿದ ವಾಸುದೇವ ರಂಗ ಭಟ್ ಹಾಗೂ ಪಾರ್ತಿಸುಬ್ಬನ ಇತಿಹಾಸ ಹಾಗೂ ಐತಿಹ್ಯಗಳ ಬಗ್ಗೆ ಕಣಿಪುರ ಮಾಸಪತ್ರಿಕೆಯ ಸಂಪಾದಕ ಎಂ.ನಾ.ಚಂಬಲ್ತಿಮಾರ್ ಉಪನ್ಯಾಸ ನೀಡಿದರು.