ಮಂಜೇಶ್ವರ: ಕುಷ್ಠ ರೋಗ ನಿವಾರಣೆ ಪಕ್ಷಾಚರಣೆಯ ಜಿಲ್ಲಾ ಮಟ್ಟದ ಸಮಾರೋಪ ಸಮಾರಂಭ ಜರುಗಿತು. ಜಿಲ್ಲಾ ಮೆಡಿಕಲ್ ಆಫೀಸ್(ಆರೋಗ್ಯ) ವತಿಯಿಂದ ಮಂಜೇಶ್ವರ ಸಿರಾಜ್ ಉಲ್ ಹುದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಾರ್ಯಕ್ರಮ ನಡೆಯಿತು.
ಶಾಲಾ ಆಡಳಿತೆ ಸಮಿತಿ ಅಧ್ಯಕ್ಷ ಯು.ಎ.ಖಾದರ್ ಉದ್ಘಾಟಿಸಿದರು. ಕುಷ್ಠ ರೋಗ ನಿಯಂತ್ರಣ ಸಹಾಯಕ ಅಧಿಕಾರಿ ಮೋಹನನ್ ಪಿಳ್ಳೆ ಜನಜಾಗೃತಿ ತರಗತಿ ನಡೆಸಿದರು. ಜಿಲ್ಲಾ ಸಹಾಯಕ ಶಿಕ್ಷಣ ಮಾಧ್ಯಮ ಅಧಿಕಾರಿ ಸಯನಾ, ವೈದ್ಯಕೀಯೇತರ ಮೇಲ್ವಿಚಾರಕ ರಾಜನ್ ಕರಿಂಬಿಲ್, ಆರೋಗ್ಯ ಇನ್ಸ್‍ಸ್ಪೆಕ್ಟರ್ ಮಧುಸೂದನನ್, ಕಿರಿಯ ಆರೋಗ್ಯ ಇನ್ಸ್ ಸ್ಪೆಕ್ಟರ್ ಕುಂಞಹಮ್ಮದ್ ಮೊದಲಾದವರು ಉಪಸ್ಥಿತರಿದ್ದರು.
ಜ.30ರಂದು ಪಕ್ಷಾಚರಣೆ ಆರಂಭಗೊಂಡಿತ್ತು. ಜನಜಾಗೃತಿ, ಕರಾವಳಿ ಸಮೀಕ್ಷೆ, ಚರ್ಮ ತಪಾಸಣೆ ಶಿಬಿರ, ಮ್ಯಾಜಿಕ್ ಶೋ ಸಹಿತ ಕಾರ್ಯಕ್ರಮಗಳು ಜಿಲ್ಲೆಯ ವಿವಿಧೆಡೆ ನಡೆದುವು. ಜಿಲ್ಲಾ ಸಹಾಯಕ ವೈದ್ಯಾಧಿಕಾರಿ ಡಾ.ಷಾಂಟಿ ನೇತೃತ್ವ ವಹಿಸಿದ್ದರು.