ಕಾಸರಗೋಡು: ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಶ್ರೀ ವರದರಾಜ ವೆಂಕಟರಮಣ ದೇವಸ್ಥಾನಕ್ಕೆ ಇಂದು(ಫೆಬ್ರವರಿ 4) ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾ„ೀಶ ಶ್ರೀಮತ್ ಶ್ರೀ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರರು ತಮ್ಮ ಪಟ್ಟ ಶಿಷ್ಯ ಶ್ರೀಮತ್ ಶ್ರೀ ವಿದ್ಯಾಧೀಶ ತೀರ್ಥ ಶ್ರೀ ಪಾದ ವಡೇರರೊಂದಿಗೆ ಚಿತ್ತೈಸಲಿರುವರು.
ಕುಮಟಾ ಶ್ರೀ ವೆಂಕಟರಮಣ ದೇವಸ್ಥಾನದಿಂದ ಸಂಜೆ 6.30 ಕ್ಕೆ ಉಭಯ ಶ್ರೀಗಳು ಆಗಮಿಸಲಿದ್ದು ಅವರನ್ನು ಪೂರ್ಣ ಕುಂಭ ಸ್ವಾಗತ ನೀಡಿ ಬರಮಾಡಿ ಕೊಳ್ಳಲಾಗುವುದು. ಶ್ರೀಗಳವರ ದೇವರ ಭೇಟಿ ಬಳಿಕ ಸಭಾ ಕಾರ್ಯಕ್ರಮ ನಡೆಯಲಿದೆ.
ಫೆಬ್ರವರಿ 7 ರಂದು ಬೆಳಗ್ಗೆ ಶ್ರೀ ವರದರಾಜ ವೆಂಕಟರಮಣ ದೇವರಿಗೆ ಶ್ರೀಗಳಿಂದ ಶತಕಲಶಾಭಿಷೇಕ ನಡೆದು ಅಷ್ಟಮಂಗಲ ನಿರೀಕ್ಷಣೆ, ಪ್ರಸನ್ನ ಪೂಜೆ ಬಳಿಕ ಸಮಾಜ ಬಾಂಧವರಿಗೆ ಪ್ರಸಾದ ವಿತರಣೆ ನಡೆಯಲಿದೆ. ಫೆಬ್ರವರಿ 9 ರಂದು ಬೆಳಗ್ಗೆ 9 ರಿಂದ 11ರ ತನಕ ಸಮಾಜ ಬಾಂಧವರಿಗೆ ಶ್ರೀಗಳು ತಪ್ತ ಮುದ್ರಾ ಧಾರಣೆ ಮಾಡುವರು. ಸಂಜೆ ಸಭಾ ಕಾರ್ಯಕ್ರಮ, ಶ್ರೀಗಳ ಅನುಗ್ರಹ ಪ್ರವಚನ ಬಳಿಕ ಸಮಾಜ ಬಾಂಧವರಿಗೆ ಮಂತ್ರಾಕ್ಷತೆ ದೊರೆಯಲಿದೆ. ಫೆಬ್ರವರಿ 10 ರಂದು 12.30 ಕ್ಕೆ ಉಭಯ ಶ್ರೀಗಳವರನ್ನು ಪರ್ತಗಾಳಿ ಮಠಕ್ಕೆ ಬೀಳ್ಕೊಡಲಾಗುವುದು.