HEALTH TIPS

ಮುಂದಿನ ತಿಂಗಳು ಎಲ್ ಪಿ ಜಿ ಬೆಲೆ ಇಳಿಕೆ - ಪ್ರಧಾನ್ ಸುಳಿವು

   
         ರಾಂಚಿ: ಮುಂದಿನ ತಿಂಗಳು ಎಲ್‍ಪಿಜಿ ಸಿಲಿಂಡರ್ ಬೆಲೆ ಕಡಿಮೆಯಾಗಲಿದೆ  ಎಂಬ ಸುಳಿವನ್ನು  ಕೇಂದ್ರ ಪೆಟ್ರೋಲಿಯಂ ಸಚಿವ ಸಚಿವ ಧಮೇರ್ಂದ್ರ ಪ್ರಧಾನ್ ವ್ಯಕ್ತಪಡಿಸಿದ್ದಾರೆ
   ಜಾಖರ್ಂಡ್   ಪ್ರವಾಸದಲ್ಲಿರುವ ಅವರು ಗುರುವಾರ ಇಲ್ಲಿನ ಸ್ವಾಮಿ ವಿವೇಕಾನಂದ ವಿಮಾನ ನಿಲ್ದಾಣದಲ್ಲಿ  ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಎಲ್‍ಪಿಜಿ ಸಿಲಿಂಡರ್ ಬೆಲೆಗಳ ನಿರಂತರ ಏರಿಕೆಯ ಕುರಿತ ಪ್ರಶ್ನೆಗೆ ಉತ್ತರಿಸಿದ ಪ್ರಧಾನ್, ಎಲ್‍ಪಿಜಿ  ಬೆಲೆ ನಿರಂತರವಾಗಿ ಹೆಚ್ಚುತ್ತಿದೆ ಎಂಬುದು ವಾಸ್ತವಿಕವಾಗಿ ನಿಜವಲ್ಲ. ಈ ತಿಂಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯ ಕಾರಣ  ದರ ಹೆಚ್ಚಾಗಿದೆ ಆದರೆ ಮುಂದಿನ ದಿನಗಳಲ್ಲಿ ಬೆಲೆಗಳು ಖಂಡಿತವಾಗಿ ಕಡೆಮೆಯಾಗಲಿದೆ ಎಂಬ ಸುಳಿವು ನೀಡಿದರು.ಚಳಿಗಾಲದಲ್ಲಿ, ಎಲ್ಪಿಜಿ ಬಳಕೆ ಹೆಚ್ಚಾಗುತ್ತದೆ, ಇದು ವಲಯದ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ. ಈ ತಿಂಗಳು ಬೆಲೆ ಏರಿಕೆಯಾದರೆ ಮುಂದಿನ ತಿಂಗಳು ಕಡಿಮೆಯಾಗಲಿದೆ ಎಂದರು.
     ಕಳೆದ ವಾರ, ಅಡುಗೆ ಅನಿಲ ಎಲ್‍ಪಿಜಿ ಬೆಲೆಯನ್ನು ಸಿಲಿಂಡರ್‍ಗೆ 144.ರೂಪಾಯಿ  ಏರಿಸಲಾಗಿತ್ತು ಇದಕ್ಕೆ  ಸಾರ್ವಜನಿಕ  ವಲಯದಲ್ಲೂ  ಭಾರಿ  ಆಕ್ರೋಶ ಸಹ ವ್ಯಕ್ತವಾಗಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries