ಸೆನೆಗಲ್(ದ.ಆಪ್ರಿಕಾ): ಭೂಗತಪಾತಕಿ ರವಿ ಪೂಜಾರಿಯನ್ನು ದಕ್ಷಿಣ ಆಫ್ರಿಕಾದಲ್ಲಿ ಬಂಧಿಸಲಾಗಿದ್ದು, ಕರ್ನಾಟಕದ ಹಿರಿಯ ಐಪಿಎಸ್ ಅಧಿಕಾರಿಗಳು ಸೇರಿದಂತೆ ಅಧಿಕಾರಿಗಳ ತಂಡ ಭಾರತಕ್ಕೆ ಕರೆತರುತ್ತಿದೆ ಎಂದು ಉನ್ನತ ಪೆÇಲೀಸ್ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಸುಲಿಗೆ, ಕೊಲೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಬೇಕಾಗಿರುವ 15 ವರ್ಷಗಳಿಂದ ವಿದೇಶಕ್ಕೆ ಹೋಗಿ ತಲೆಮರೆಸಿಕೊಂಡಿದ್ದ ರವಿ ಪೂಜಾರಿಯನ್ನು ಸೆನೆಗಲ್‍ಗೆ ಗಡೀಪಾರು ಮಾಡಲಾಗಿತ್ತು. ನಾವು ರವಿ ಪೂಜಾರಿಯನ್ನು ಸೆನೆಗಲ್ ನಿಂದ ಕರೆತರುತ್ತಿದ್ದೇವೆ. ಸಧ್ಯ ನಾವು ಪ್ಯಾರೀಸಿನಲ್ಲಿದ್ದೇವೆ. ಏರ್ ಫ್ರಾನ್ಸ್ ವಿಮಾನದ ಮೂಲಕ ನಾವು ಪಯಣಿಸುತ್ತಿದ್ದು ಮಧ್ಯರಾತ್ರಿಯ ವೇಳೆಗೆ ಭಾರತವನ್ನು ತಲುಪುತ್ತೇವೆ ಎಂದು ರವಿ ಪೂಜಾರಿ ಬಂಧನ ತಂಡದ ಬಾಗವಾಗಿರುವ ಪೆÇಲೀಸ್ ಅಧಿಕಾರಿ ಓರ್ವರು ಪಿಟಿಐಗೆ ಹೇಳಿದ್ದಾರೆ. ಭೂಗತ ಪಾತಕಿ ರವಿ ಪೂಜಾರಿ ಕಳೆದ ವರ್ಷ ಸೆನೆಗಲ್‍ನಲ್ಲಿ ಬಂಧನಕ್ಕೊಳಗಾಗಿ ಜಾಮೀನು ಪಡೆದಿದ್ದ. ಪ್ರಾರಂಭದಲ್ಲಿ ಭೂಗತ ಪಾತಕಿ ಛೋಟಾ ರಾಜನ್ ಜತೆ ಸಂಬಂಧ ಹೊಂದಿದ್ದ ಪೂಜಾರಿ ಬಳಿಕ ದಾವೂದ್ ಇಬ್ರಾಹಿಂ ಜತೆಗೆ ಸಹ ಕೆಲಸ ಮಾಡಿದ್ದನೆಂದು ಪೆÇೀಲೀಸರು ಹೇಳಿದ್ದಾರೆ.
ರಾಷ್ಟ್ರೀಯ ತನಿಖಾ ಸಂಸ್ಥೆ, ಕೇಂದ್ರೀಯ ತನಿಖಾ ದಳ ಮತ್ತು ರಿಸರ್ಚ್ ಆಂಡ್ ಅನಾಲಿಟಿಕ್ಸ್ ವಿಂಗ್ ಪೂಜಾರಿಯನ್ನು ತನಿಖೆಗೆ ಒಳಪಡಿಸಲಿದೆ ಎಂದು ಮೂಲಗಳು ತಿಳಿಸಿವೆ.