ಕುಂಬಳೆ: ಕೊಡಗಿನ ಗೌರಮ್ಮ ದತ್ತಿನಿಧಿ ಹಾಗೂ ಹವ್ಯಕ ಮಹಾಮಂಡಲ ಮಾತೃಮಂಡಳಿ ಸಹಯೋಗದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಹವ್ಯಕ ಮಹಿಳೆಯರಿಗಾಗಿ ಒಂದು ಸಣ್ಣ ಕತಾಸ್ಪರ್ಧೆ ಆಯೋಜಿಸಲಾಗಿದೆ. ಅಖಿಲ ಭಾರತ ಮಟ್ಟದಲ್ಲಿ ಹವ್ಯಕ ಮಹಿಳೆಯರು ಹವ್ಯಕ ಭಾಷೆಯಲ್ಲಿರುವ
ಈ ವರೆಗೆ ಪ್ರಕಟ ಆಗದ ಸಾಮಾಜಿಕ ಕತೆಗಳನ್ನು ಬರೆದು ಕಳಿಸಬಹುದಾಗಿದೆ. ಎಂಟು ಪುಟಕ್ಕೆ ಮೀರದಂತೆ ಕಾಗದದ ಒಂದೇ ಮಗ್ಗುಲಲ್ಲಿ ಸ್ಪುಟವಾಗಿಬರೆದು ಅಥವಾ ಟೈಪ್ ಮಾಡಿ ಹೆಸರು,ವಿಳಾಸ ಬೇರೆ ಕಾಗದಲ್ಲಿ ಬರೆದು ಕಳಿಸಬಹುದಾಗಿದೆ. ಬಹುಮಾನಿತರಿಗೆ ಪ್ರಶಸ್ತಿ ಪತ್ರದ ಜೊತೆಗೆ,ಪಥಮ ಮೂರುಸಾವಿರ, ದ್ವಿತೀಯ ಎರಡುಸಾವಿರ, ತೃತೀಯ ಒಂದು ಸಾವಿರ ರೂ.ಗಳನ್ನು ವಿತರಿಸಲಾಗುವುದು. ಈ ಹಿಂದಿನ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ವಿಜೇತೆಯರಿಗೆ ಅವಕಾಶ ಇರುವುದಿಲ್ಲ. ಆಸಕ್ತರು ಮೇ.30 ರ ಮೊದಲು ವಿಜಯಾಸುಬ್ರಹ್ಮಣ್ಯ, ಕಾರ್ಯದರ್ಶಿ, ಕೊಡಗಿನ ಗೌರಮ್ಮ ಕತಾಸ್ಪರ್ಧೆ,
ಕಾರ್ತಿಕೇಯ,ನಾರಾಯಣಮಂಗಲ, ಕುಂಬಳೆ-671321,ಕಾಸರಗೋಡು ಜಿಲ್ಲೆ, ಮೊಃ8547214125 ಕಳುಹಿಸಬೇಕಾಗಿ ತಿಳಿಸಲಾಗಿದೆ.