ಮಂಜೇಶ್ವರ: ಮೀಯಪದವು ವಿದ್ಯಾವರ್ಧಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಕಲಿಕೋತ್ಸವ ಕಾರ್ಯಕ್ರಮ ವಿವಿಧ ಕಾರ್ಯಕ್ರಮಗಳೊಂದಿಗೆ ಬುಧವಾರ ಜರಗಿತು.
ಕಲಿಕೋತ್ಸವದ ಉದ್ಘಾಟನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಕೃಷ್ಣಪ್ರಸಾದ್ ವಹಿಸಿದ್ದರು. ಶಾಲಾ ಆಡಳಿತ ಸಲಹೆಗಾರ ಶ್ರೀಧರ ರಾವ್.ಆರ್. ಎಂ, ಶಾಲಾ ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಚಂದ್ರಶೇಖರ ಶೆಟ್ಟಿ ಪಳ್ಳತಡ್ಕ, ಅಧ್ಯಕ್ಷ ದಿನೇಶ್ ಅಮ್ಮೆನಡ್ಕ, ಕಾರ್ಯದರ್ಶಿ ದಾಮೋದರ ಮಾಸ್ತರ್ ಕಬ್ಬಿನಹಿತ್ತಿಲು, ಶಾಲಾ ಮಾತೃಸಂಘದ ಅಧ್ಯಕ್ಷೆ ಕೈರುನ್ನಿಸ, ಬಿ.ಆರ್.ಸಿ ಮಂಜೇಶ್ವರದ ಸಂಪನ್ಮೂಲ ವ್ಯಕ್ತಿ ಮೋಹಿನಿ ಟೀಚರ್ ಹಾಗೂ ಶಾಲಾ ಮುಖ್ಯೋಪಾಧ್ಯಾಯ ಸುಧಾಕರ ವಿ. ಉಪಸ್ಥಿತರಿದ್ದು ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಕಳೆದ ವರ್ಷ ಎಲ್.ಎಸ್.ಎಸ್ ಸ್ಕಾಲರ್‍ಶಿಪ್ ಪಡೆದ ಶ್ರೀಆಧ್ಯ ಎಸ್.ಎನ್, ಆಶಿಕಾ ಹಾಗೂ ಜ್ಯೋತಿಕ ಇವರಿಗೆ ಪ್ರಮಾಣ ಪತ್ರ ನೀಡಲಾಯಿತು. ಅಧ್ಯಾಪಕ ಸುನೀಲ್ ಕುಮಾರ್ ಎಂ ಸ್ವಾಗತಿಸಿ, ಶಾಲಾ ಎಸ್.ಆರ್.ಜಿ ಕನ್ವೀನರ್ ರಘುವೀರ್ ರಾವ್ ವಂದಿಸಿದರು. ಅಧ್ಯಾಪಕ ವಿಘ್ನೇಶ್ ಎಸ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಹಿರಿಯ, ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಕಲಿಕೋತ್ಸವ ಕಾರ್ಯಕ್ರಮ ನಡೆದವು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ವಿವಿಧ ವಿಷಯಗಳ ಕಲಿಕಾ ಚಟುವಟಿಕೆಗಳನ್ನು ತಮ್ಮ ಹೆತ್ತವರು ಹಾಗೂ ಅಧ್ಯಾಪಕರ ಮುಂದೆ ಪ್ರದರ್ಶಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಹೆತ್ತವರು ಭಾಗವಹಿಸಿ ಚಟುವಟಿಕೆಗಳಲ್ಲಿ ವೀಕ್ಷಿಸಿದರು.