ಕಾಸರಗೋಡು: ರಾಜ್ಯ ಸರ್ಕಾರ ಜಾರಿಗೊಳಿಸುತ್ತಿರುವ ಲೈಫ್ ಮಿಷನ್ ಯೋಜನೆ ಮೂಲಕ ಜಿಲ್ಲೆಯಲ್ಲಿ 7903 ಕುಟುಂಬಗಳಿಗೆ ಸ್ವಂತ ಮನೆ ನಿರ್ಮಿಸಿಕೊಡಲಾಗಿದೆ. ಲೈಫ್ ಮಿಷನ್‍ನ ದ್ವಿತೀಯ ಹಂತದಲ್ಲಿ ಮಾತ್ರ 143.08 ಕೋಟಿ ರೂ. ಜಿಲ್ಲೆಯ ಫಲಾನುಭವಿಗಳಿಗೆ ಹಸ್ತಾಂತರಗೊಂಡಿದೆ. ಇದರಲ್ಲಿ ರಾಜ್ಯ ಸರ್ಕಾರದ ಪಾಲು ಎಂಬ ರೀತಿಯಲ್ಲಿ 18.14 ಕೋಟಿ ರೂ., ಸ್ಥಳೀಯಾಡಳಿತ ಸಂಸ್ಥೆಗಳಿಂದ 9.01 ಕೋಟಿ ರೂ., ಹಡ್ಕೋದಿಂದ 47.44 ಕೋಟಿ ರೂ.,ಲೈಫ್-ಪ್ರಧಾನಮಂತ್ರಿ ರೋಜ್‍ಗಾರ್ ಯೋಜನೆ ರೂರಲ್ ಮೂಲಕ 22.75ಕೋಟಿ ರೂ., ಲೈಫ್-ಪ್ರಧಾನಮಂತ್ರಿ ರೋಜ್‍ಗಾರ್ ಯೋಜನೆ ಅರ್ಬನ್ ಪಾಲು ರೂಪದಲ್ಲಿ 45.73 ಕೋಟಿ ರೂ. ಲಭಿಸಿದೆ.
ಮೊದಲ ಹಂತದಲ್ಲಿ 2881 ಮನೆಗಳು, ದ್ವಿತೀಯಹಂತದಲ್ಲಿ 2873 ಮನೆಗಳು, ಲೈಫ್-ಪಿ.ಎಂ.ಎ.ವೈ.ರೂರಲ್ ವಿಭಾಗದಲ್ಲಿ 566 ಮನೆಗಳು, ಲೈಫ್-ಅರ್ಬನ್ ವಿಭಾಗದಲ್ಲಿ 1098 ಮನೆಗಳು, ವಿವಿಧ ಸರ್ಕಾರಿ ಇಲಾಖೆಗಳ ವ್ಯಾಪ್ತಿಯಲ್ಲಿ 485 ಮನೆಗಳು ಜಿಲ್ಲೆಯಲ್ಲಿ ಈ ವರೆಗೆ ನಿರ್ಮಾಣ ಪೂರ್ಣಗೊಳಿಸಿವೆ.
ಪರಪ್ಪ ಬ್ಲಾಕ್ ಪಂಚಾಯಿತಿಯಲ್ಲಿ ಜಿಲ್ಲೆಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಲೈಫ್ ಮಿಷನ್ ಮೂಲಕ ಮನೆಗಳಿವೆ. ಇಲ್ಲಿ 1886 ಮನೆಗಳು ಈ ಯೋಜನೆ ಮೂಲಕ ತಲೆಯೆತ್ತಿದೆ. ಕಾಸರಗೋಡು ಬ್ಲಾಕ್ ಪಂಚಾಯಿತಿ ಯಲ್ಲಿ 1102, ಕಾರಡ್ಕ ಬ್ಲೊಕ್ ಪಂಚಾಯಿತಿಯಲ್ಲಿ 788, ಮಂಜೇಶ್ವರ ಬ್ಲಾಕ್‍ನಲ್ಲಿ 608, ಕಾಞಂಗಾಡ್ ಬ್ಲಾಕ್‍ನಲ್ಲಿ 589, ನೀಲೇಶ್ವರ ಬ್ಲಾಕ್‍ನಲ್ಲಿ 534 ಮನೆಗಳು ನಿರ್ಮಾಣಗೊಂಡಿವೆ. ಕಾಸರಗೋಡು ನಗರಸಭೆ ವ್ಯಾಪ್ತಿಯಲ್ಲಿ 137 ಮನೆಗಳು, ಕಾಞಂಗಾಡ್ ನಗರಸಭೆಯಲ್ಲಿ 752 ಮನೆಗಳು, ನೀಲೇಶ್ವರ ನಗರಸಭೆ ವ್ಯಾಪ್ತಿಯಲ್ಲಿ 356 ಮನೆಗಳನ್ನು ನಿರ್ಮಿಸಲಾಗಿದೆ. ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ 51, ಪರಶಿಷ್ಟ ಜಾತಿ ಅಭಿವೃದ್ಧಿ ಇಲಾಖೆ ವ್ಯಾಪ್ತಿಯಲ್ಲಿ 455, ಪರಶಿಷ್ಟಪಂಗಡವ್ಯಾಪ್ತಿಯಲ್ಲಿ 632, ಮೀನುಗಾರಿಕೆ ವಲಯದಲ್ಲಿ 107 ಮನೆಗಳು, ಅಲ್ಪಸಂಖ್ಯಾತ ಇಲಾಖೆ ವ್ಯಾಪ್ತಿಯಲ್ಲಿ 6 ಮನೆಗಳು ನಿರ್ಮಾಣವಾಗಿವೆ.
ಲೈಫ್ ವಸತಿ ಯೋಜನೆಗೆ ಅರ್ಹರಾದ ಫಲಾನುಭವಿಗಳಿಗೆ ಮನೆ ನಿರ್ಮಾಣಕ್ಕೆ 4 ಲಕ್ಷ ರೂ. ಆರ್ಥಿಕ ಸಹಾಯ ಒದಗಿಸಲಾಗುತ್ತದೆ. ವಸತಿ ನಿರ್ಮಾಣದ ಪ್ರಗತಿಗನುಸಾರ ಕಂತುಗಳಲ್ಲಿ ಮೊತ್ತ ವಿತರಿಸಲಾಗುತ್ತದೆ. ಆದರೆ ವಿವಿಧಕಾರಣಗಳಿಂದ ಪರಿಶಿಷ್ಟ ಪಂಗಡದಮಂದಿಗೆ 6ಲಕ್ಷ ರೂ. ಆರ್ಥಿಕ ಸಹಾಯ ನೀಡಲಾಗುತ್ತದೆ. 12 ವಿವಿಧ ಶೈಲಿಗಳಿದ್ದು, ಇವುಗಳಲ್ಲಿ ಯಾವುದಾದರೊಂದನ್ನು ಫಲಾನುಭವಿಗಳಿಗೆ ಆಯ್ಕೆಮಾಡಿಕೊಳ್ಳಬಹುದಾಗಿದೆ. ಲೈಫ್ ಮಿಷನ್ ಯೋಜನೆಯ ಮೂರನೇ ಹಂತವಾಗಿರುವ ಜಾಗ, ವಸತಿ ರಹಿತರಿಗೆ ಸೂರು ಒದಗಿಸುವಫಲಾನುಭವಿಗಳಿಗೆ ವಸತಿ ಸಮುಚ್ಚಯಗಳನ್ನುನಿರ್ಮಿಸುವ ಪ್ರಕ್ರಿಯೆಗಳು ಜಿಲ್ಲೆಯಲ್ಲಿ ಪ್ರಗತಿಯಲ್ಲಿವೆ.
ಜಿಲ್ಲೆಯಲ್ಲಿ ಭೂರಹಿತ, ವಸತಿ ರಹಿತರಾಗಿರುವ 12,081 ಮಂದಿ ಪಟ್ಟಿಯಲ್ಲಿ ಸೇರಿದ್ದು, 8751 ಫಲಾನುಭವಿಗಳ ಅರ್ಹತಾ ಪರಿಶೀಲನೆಯಲ್ಲಿ 455 ಮಂದಿ ದ್ವಿತೀಯ ಹಂತಕ್ಕೆ ವರ್ಗಾವಣೆಗೊಂಡಿದ್ದಾರೆ. 2730 ಮಂದಿ ಮೂರನೇ ಹಂತದ ಅರ್ಹರಾಗಿ ಆಯ್ಕೆಯಾಗಿದ್ದಾರೆ.
ಖದೀಜಾ ಕುಟುಂಬಕ್ಕೆ ವಸತಿ ಭಾಗ್ಯ:
ಸತತ 20 ವರ್ಷಗಳ ಬಾಡಿಗೆ ಮನೆಯ ವಾಸಕ್ಕೆ ವಿದಾಯ ಹೇಳಿ ಖದೀಜಾ ಮತ್ತು ನಿಸಾರ್ ದಂಪತಿ ರಾಜ್ಯಸರ್ಕಾರ ಒದಗಿಸಿದ ಸೂರಿನಡಿ ನೆಮ್ಮದಿ ಕಾಣುತ್ತಿದ್ದಾರೆ. ಪಳ್ಳಿಕ್ಕರೆ ನಿವಾಸಿ ಖದೀಜಾ ಮತ್ತು ನಿಸಾರ್ ಅವರು ಲೈಫ್ ಮಿಷನ್ ಯೋಜನೆಯ ಮೂಲಕ ಸ್ವಂತ ಮನೆಯನ್ನು ಹೊಂದಿದ್ದಾರೆ. ವಸತಿ ಭಾಗ್ಯ ಖದೀಜಾ, ಕೂಲಿಕಾರ್ಮಿಕ ನಿಸಾರ್ ಮತ್ತು 9ನೇ ತರಗತಿ ವಿದ್ಯಾರ್ಥಿ ನಿಜಾಮುದ್ದೀನ್‍ಅವರಿಗೆ ಅತೀವ ಸಂತಸ ತಂದಿದೆ. ಬಾಡಿಗೆ ಮನೆಯಲ್ಲಿದ್ದ ಖದೀಜಾ ಅವರ ಬಡಕುಟುಂಬಕ್ಕೆ ಚಿಕ್ಕ ಪುತ್ರಿಯ ಅಸೌಖ್ಯ ತುಂಬ ಬಸವಳಿಯುವಂತೆ ಮಾಡಿದೆ. ಭಾರೀ ವೆಚ್ಚದಲ್ಲಿ ಚಿಕಿತ್ಸೆ ಅಗತ್ಯವಿದ್ದರೂ, ಇವರ ಕುಟುಂಬಕ್ಕೆ ಅದ್ನು ಭರಿಸುವ ಶಕ್ತಿಇಲ್ಲದಾಗಿದೆ.
(ಚಿತ್ರ ಮಾಹಿತಿ: ಲೈಫ್‍ಯೋಜನೆಯನ್ವಯ ಮನೆ ಪಡೆದ ಪಳ್ಳಿಕ್ಕರೆಯ ಖದೀಜಾ ಅವರು ಪುತ್ರ ನಿಜಾಮುದ್ದೀನ್ ಅವರೊಂದಿಗಿದ್ದಾರೆ.)