ಬದಿಯಡ್ಕ: ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞದ ಭಾಗವಾಗಿ 2019-20 ಶೈಕ್ಷಣಿಕ ವರ್ಷದ ಬದಿಯಡ್ಕ ಗ್ರಾಮ ಪಂಚಾಯತಿ ಮಟ್ಟದ ಕಲಿಕೋತ್ಸವ ಕಾರ್ಯಕ್ರಮವು ಸಂತ ಬಾರ್ತಲೋಮೆಯ ಹಿರಿಯ ಬುನಾದಿ ಶಾಲೆ ಬೇಳದಲ್ಲಿ ಬುಧವಾರ ನಡೆಯಿತು. ಬದಿಯಡ್ಕ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಝೈಬುನ್ನಿಸಾ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಎನ್. ಕೃಷ್ಣ ಭಟ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಸಂದೇಶವನ್ನು ನೀಡಿದರು. ಕುಂಬಳೆಯ ಬ್ಲಾಕ್ ನಿರೂಪಣಾಧಿಕಾರಿ ಶಿವರಾಮ. ಎ., ಕುಬಂಳೆ ಉಪಜಿಲ್ಲಾ ವಿದ್ಯಾಧಿಕಾರಿ ಯತೀಶ್ ಕುಮಾರ್ ರೈ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಭಗಿನಿ ನಿವೇದಿತಾ ಅವರು ಸ್ವಾಗತಿಸಿ, ಶಿಕ್ಷಕಿ ಬನಶಂಕರಿ ವಂದಿಸಿದರು. ಶಿಕ್ಷಕಿ ಅನಸೂಯ ಕಾರ್ಯಕ್ರಮವನ್ನು ನಿರೂಪಿಸಿದರು. ಬಳಿಕ ವಿದ್ಯಾರ್ಥಿಗಳಿಂದ ತಮ್ಮ ಕಲಿಕೆಯ ಭಾಗವಾದ ವಿವಿಧ ಅನುಭವಗಳ ಪ್ರದರ್ಶನಗಳು ನಡೆಯಿತು.
ಬದಿಯಡ್ಕ ಪಂಚಾಯತಿ ಮಟ್ಟದ ಕಲಿಕೋತ್ಸವ ಸಂಪನ್ನ
0
ಮಾರ್ಚ್ 04, 2020