ಮಧೂರು: ಅರಂತೋಡು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಮಾ.7 ಮತ್ತು 8 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಮಾ.7 ರಂದು ಪೂರ್ವಾಹ್ನ 6.30 ಕ್ಕೆ ಗಣಪತಿ ಹೋಮ, 8 ಕ್ಕೆ ಶತರುದ್ರಾಭಿಷೇಕ ಪ್ರಾರಂಭ, 9 ಕ್ಕೆ ಭಜನೆ, 11 ಕ್ಕೆ ನವಕಾಭಿಷೇಕ, ಮಧ್ಯಾಹ್ನ 12 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ, 12.30 ಕ್ಕೆ ಯಕ್ಷಗಾನ ವೈಭವ, ಸಂಜೆ 5 ರಿಂದ ಭಜನಾ ಸಂಕೀರ್ತನೆ, 6.30 ಕ್ಕೆ ದೀಪಾರಾಧನೆ, ರಾತ್ರಿ 7 ರಿಂದ ಸಾಮೂಹಿಕ ಕಾರ್ತಿಕ ಪೂಜೆ, ಶ್ರೀ ಭೂತಬಲಿ, ದರ್ಶನ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಶ್ರೀ ವಿಷ್ಣುಮೂರ್ತಿ, ರಕ್ತೇಶ್ವರೀ ದೈವಗಳಿಗೆ ತಂಬಿಲ, ಅನ್ನದಾನ, ಮಾ.8 ರಂದು ಬೆಳಗ್ಗೆ 8 ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ಕೋಲ ನಡೆಯಲಿರುವುದು.