ನವದೆಹಲಿ: 2012 ರ ಡಿಸೆಂಬರ್‍ನ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಮರಣದಂಡನೆ ವಿಧಿಸಲು ಹೊಸ ಡೆತ್ ವಾರಂಟ್ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆಯಾಗಿದ್ದು ಇಂದು ಮಧ್ಯಾಹ್ನ 2 ಗಂಟೆಗೆ ಈ ಸಂಬಂಧ ವಿಚಾರಣೆಗೆ ಕೋರ್ಟ್ ತೀರ್ಮಾನಿಸಿದೆ.
ಹೆಚ್ಚುವರಿ ಸೆಷನ್ ನ್ಯಾಯಾಧೀಶ ಧಮೇರ್ಂದರ್ ರಾಣಾ ಅರ್ಜಿ ಕುರಿತು ಪ್ರತಿಕ್ರಿಯೆ ಕೋರಿ ಅಪರಾಧಿಗಳಿಗೆ ನೋಟಿಸ್ ನೀಡಿದ್ದಾರೆ. ಸರ್ಕಾರದ ಪರ ಪಬ್ಲಿಕ್ ಪ್ರಾಸಿಕ್ಯೂಟರ್ ವಕೀಲ ಇರ್ಫಾನ್ ಅಹ್ಮದ್, ಇಂದು ಮರಣದಂಡನೆಗೆ ಹೊಸ ದಿನಾಂಕವನ್ನು ನೀಡುವಂತೆ ಕೋರಿದ್ದರು. ಅಪರಾಧಿಗಳು ತಮಗೆ ಲಭ್ಯವಿರುವ ಎಲ್ಲಾ ಕಾನೂನು ಮಾರ್ಗಗಳನ್ನು ಸಹ ಬಳಸಿಕೊಂಡಿದ್ದಾರೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. "ಪವನ್ ಗುಪ್ತಾ ಅವರಿಗೆ ಲಭ್ಯವಿದ್ದ ಏಕೈಕ ಖಾನೂನು ಪರಿಹಾರ ಸಹ ಮುಗಿದಿದೆ. ಇನ್ನು ಯಾವ ಅಪರಾಧಿಗಳಿಗೆ ಯಾವುದೇ ಬಗೆಯ ಕಾನೂನಾತ್ಮಕ ಮಾರ್ಗಗಳು ಉಳಿದಿಲ್ಲ. ಹಾಗಾಗಿ , ದಯವಿಟ್ಟು ಇಂದು ಮರಣದಂಡನೆ ವಿಧಿಸಲು ಹೊಸ ದಿನಾಂಕವನ್ನು ನಿಗದಿಗೊಳಿಸಿ ಆದೇಶ ನೀಡಬೇಕು." ಎಂದು ಅವರು ಹೇಳಿದರು.
ಇದಕ್ಕೆ ಮೊದಲು ನಾಲ್ವರು ಅಪರಾಧಿಗಳ ಪೈಕಿ ಒಬ್ಬನಾದ ಪವನ್ ಗುಪ್ತಾ ಅವರ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ಕೋವಿಂದ್ ವಜಾಗೊಳಿಸಿದ್ದರು.