ಮುಳ್ಳೇರಿಯ: ಕರ್ನಾಟಕದಲ್ಲಿ ಹನ್ನೆರಡನೇ ಶತಮಾನದಲ್ಲಿ ಜೀವಿಸಿದ್ದ ಸಮಾಜ ಸುಧಾರಕನೂ, ವಚನ ಸಾಹಿತ್ಯಗಾರನೂ, ಭಕ್ತಿ ಪಂಥದ ಪ್ರಧಾನಿಯೂ ಆಗಿರುವ ಬಸವೇಶ್ವರ ಪ್ರತಿಮೆ ಪಯ್ಯನ್ನೂರು ಸಮೀಪದ ಕುಞÂಮಂಗಲದಲ್ಲಿ ನಿರ್ಮಾಣದ ಕೊನೆಯ ಹಂತಕ್ಕೆ ಬಂದು ತಲುಪಿದೆ.
ಒಂದೂವರೆ ಅಡಿ ಎತ್ತರದಲ್ಲಿರುವ ಪ್ರತಿಮೆಯ ಎಡ ಕೈಯಲ್ಲಿ ತಾಳೆಯೋಲೆ ಹಾಗೂ ಬಲ ಕೈಯಲ್ಲಿ ತಾಳೆಗರಿ ಹಿಡಿದಿರುವ ರೀತಿಯಲ್ಲಿ ನಿರ್ಮಿಸಲಾಗಿದೆ.
ಬಿಳಿ ವಸ್ತ್ರ ಧರಿಸಿರುವ, ಕೊರಳಲ್ಲಿ ರುದ್ರಾಕ್ಷಿ ಮಾಲೆಯೂ, ಹಣೆಯಲ್ಲಿ ವಿಭೂತಿಯೂ ಹಚ್ಚಿರುವ ಶಿವ ಭಕ್ತನ ರೀತಿಯಲ್ಲಿರುವ ಪ್ರತಿಮೆಯನ್ನು ದುಬೈಯ ಬಸವ ಸಮಿತಿಗಾಗಿ ನಿರ್ಮಿಸಲಾಗುತ್ತಿದೆ.
ಬಸವ ಸಮಿತಿ ನೀಡಿರುವ ಫೆÇೀಟೋವನ್ನು ಆಧಾರವಾಗಿರಿಸಿಕೊಂಡು ಫೈಬರ್ ನಿಂದ ಪ್ರತಿಮೆಯನ್ನು ಸಿದ್ಧಪಡಿಸಲಾಗುತ್ತಿದೆ. ಪ್ರಸಿದ್ಧ ಶಿಲ್ಪಿ ಆಗಿರುವ ಕುಞÂಮಂಗಲ ನಾರಾಯಣರವರ ಮಗನೂ ಕಾಞಂಗಾಡ್ ದುರ್ಗಾ ಹಯರ್ ಸೆಕೆಂಡರಿ ಶಾಲೆಯ ಚಿತ್ರಕಲಾ ಅಧ್ಯಾಪಕನೂ ಆಗಿರುವ ಚಿತ್ರನ್ ಕುಞÂಮಂಗಲ ಈ ಪ್ರತಿಮೆ ನಿರ್ಮಿಸುತ್ತಿದ್ದಾರೆ. ಈ ಹಿಂದೆ ಅಬುಧಾಬಿಯಲ್ಲಿ ಮಹಾತ್ಮ ಗಾಂಧಿಯವರ ಪ್ರತಿಮೆಯನ್ನು ನಿರ್ಮಿಸಿ ಇವರು ಗಮನ ಸೆಳೆದಿದ್ದರು.