ಕುಂಬಳೆ: ಶತಮಾನಗಳಿಂದ ಸಂಪೂರ್ಣ ನಾಮಾವಶೇಷಗೊಂಡು ಅಳಿದಿದ್ದು, ಇದೀಗ ಪುನರ್ ನಿರ್ಮಾಣಗೊಂಡು ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿರುವ ದರ್ಬಾರ್‍ಕಟ್ಟೆ ಮುಂಡಪ್ಪಳ್ಳ ಶ್ರೀರಾಜರಾಜೇಶ್ವರಿ ದೇವಾಲಯದಲ್ಲಿ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ನಡೆಯುತ್ತಿದ್ದು, ಗುರುವಾರ ವಿವಿಧ ವೈದಿಕ ಕಾರ್ಯಕ್ರಮಗಳು ನೆರವೇರಿದವು.
ಗುರುವಾರ ಬೆಳಿಗ್ಗೆ 5 ರಿಂದ ವೈದಿಕ ಕಾರ್ಯಕ್ರಮಗಳಾದ ಸ್ಥೂಲವಾಹನ, ಸ್ರೋತ್ರಾವಾಹನ, ಮಂತ್ರಾವಾಹನ, ಪರಿವಾರ ಪೂಜೆ, ವೈಶ್ವಹೋಮ, ಪ್ರತಿಷ್ಠಾ ಬಲಿ, ವೈಶ್ವ ಪೂಜೆ, ಕವಾಟ ಬಂಧನ, ಸಮ್ಮೇಲಿನಮ್ ಪ್ರತಿಷ್ಠಾದಕ್ಷಿಣೆ, ಪ್ರದಕ್ಷಿಣ ನಮಸ್ಕಾರ, ನಿತ್ಯನೈಮಿತ್ತಿಕ ನಿಶ್ಚಯ, ಅಂಕುರಪೂಜೆ, ಕವಾಟ ಬಂಧನ ವಿಧಿಗಳೂ, ಸಂಜೆ 4.30 ರಿಂದ ಅಧಿವಾಸ ಹೋಮ, ಶಾಂತಿಹೋಮ, ಗೋದೋಹನಮ್, ಪಾಯಸಪೂಜೆ, ಬ್ರಾಹ್ಮಣ ಸಮಾರಾಧನೆ, ವೈಶ್ವಹೋಮ, ವೈಶ್ವಬಲಿ, ಅಧಿವಾಸ ಹೋಮ, ಸಮಾಸನೆ, ಅಂಕುರಪೂಜೆ, ಸೋಪಾನದಲ್ಲಿ ರಾತ್ರಿಪೂಜೆ, ದುರ್ಗಾಪೂಜೆಗಳು ನಡೆಯಿತು. ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಸಂಜೆ ಸಭೆ ನಡೆಯಿತು.
ಇಂದಿನ ಕಾರ್ಯಕ್ರಮಗಳು:
ಶುಕ್ರವಾರ ಬೆಳಿಗ್ಗೆ 5 ರಿಂದ ಸಹಸ್ರ ಕಲಶ ಮಂಟಪ ಶುದ್ದಿ, ಸೃಷ್ಟಿ ತತ್ವಹೋಮ ಶುದ್ದಿ, ಮಹಾಪೂಜೆ, ಸಂಜೆ 4.30 ರಿಂದ ಅಧಿವಾಸ ಹೋಮ, ಅಧಿವಾಸ ಪೂಜೆ, ಅಂಕುರಪೂಜೆ, ರಾತ್ರಿ ಪೂಜೆ, ಶ್ರೀದುರ್ಗಾಪೂಜೆ ನಡೆಯಲಿದೆ.
ಸಾಂಸ್ಕøತಿಕ ಕಾರ್ಯಕ್ರಮಗಳ ಅಂಗವಾಗಿ ಬೆಳಿಗ್ಗೆ 11 ರಿಂದ ರಾಮ ಬಟ್ ಕಾರಿಂಜ ಹಳೆಮನೆ ಹಾಗೂ ಜಯರಾಮ ಭಟ್ ದೇವಸ್ಯ ಅವರಿಂದ ಶ್ರೀದೇವೀ ಮಹಾತ್ಮ್ಯೆ ಪುರಾಣ ವಾಚನ-ಪ್ರವಚನ, ಸಂಜೆ 5 ರಿಂದ ಭಸ್ಮಾಸುರ ಮೋಹಿನಿ ಯಕ್ಷಗಾನ ಬಯಲಾಟ, 6.30 ರಿಂದ ಬಂಟರ ಸಂಘ ಬೆಳ್ಳೂರು ತಂಡದಿಂದ ಕಾರ್ಯಕ್ರಮ ವೈವಿಧ್ಯ, ರಾತ್ರಿ 8.30 ರಿಂದ ತಿರುವಾದಿರ ಕಳಿ ಹಾಗೂ ನೃತ್ಯ ವೈವಿಧ್ಯ ನಡೆಯಲಿದೆ.