ಕುಂಬಳೆ: ಕುಂಬಳೆ ಸೀಮೆಯ ರಾಜವಂಶಸ್ಥರಾದ ಮಾಯಿಪ್ಪಾಡಿ ಅರಮನೆಯೊಂದಿಗೆ ಚಾರಿತ್ರಿಕ ಸಂಬಂಧಗಳನ್ನು ಹೊಂದಿದ್ದು, ಶತಮಾನಗಳಿಂದ ಸಂಪೂರ್ಣ ನಾಮಾವಶೇಷಗೊಂಡು ಅಳಿದಿದ್ದು, ಇದೀಗ ಪುನರ್ ನಿರ್ಮಾಣಗೊಂಡು ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿರುವ ದರ್ಬಾರ್‍ಕಟ್ಟೆ ಮುಂಡಪ್ಪಳ್ಳ ಶ್ರೀರಾಜರಾಜೇಶ್ವರಿ ದೇವಾಲಯದಲ್ಲಿ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ನಡೆಯುತ್ತಿದ್ದು, ಬುಧವಾರ ಪ್ರಾಣ ಪ್ರತಿಷ್ಠೆ ನೆರವೇರಿತು.
ಬುಧವಾರ ಬೆಳಿಗ್ಗೆ 5 ರಿಂದ ಪ್ರಾಸಾದ ಶುದ್ದಿ, ಪ್ರಾಸಾದ ಪ್ರತಿಷ್ಠೆ, ನಾಂದೀಮುಖ ಪುಣ್ಯಾಹ ನಪುಂಸಕಶಿಲಾ ಪ್ರತಿಷ್ಠೆ, ಪೀಠಪ್ರತಿಷ್ಠೆ, ವಿದ್ಯೇಶ್ವರ ಕಲಶ ಪ್ರೋಕ್ಷಣೆ, ಅವಸ್ಥಾವಾಹನ, ಪರಾವಾಹನ, ಮಂತ್ರಾವಾಹನ, ಬಿಂಬ ಪ್ರತಿಷ್ಠಾ, ಅಷ್ಟಬಂಧ ನಿಕ್ಷೋಪಣಂ, ಕುಂಭೇಶ ಕಲಶಾಭಿಷೇಕ, ನಿದ್ರಾಕಲಶಾಭಿಷೇಕ, ಘೃತಾದಿ ದ್ರವ್ಯಾದಿಗಳ ಪ್ರೋಕ್ಷಣೆ, ಜೀವಕಲಶಾಭಿಷೇಕ, ಜೀವಾವಾಹನ, ಪ್ರಾಣನ್ಯಾಸ ವಿಧಿಗಳು ನಡೆದು ಬೆಳಿಗ್ಗೆ 7.45ರ ಮೃಗಶಿರಾ ನಕ್ಷತ್ರ ಮೀನಲಗ್ನದಲ್ಲಿ ಪ್ರಾಣಪ್ರತಿಷ್ಠೆ ನಡೆಯಿತು. ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿ ಹಾಗೂ ವೈದಿಕ ತಂಡ ವಿಧಿವಿಧಾನಗಳನ್ನು ನೆರವೇರಿಸಿದರು. ಶ್ರೀಕ್ಷೇತ್ರದ ನಿರ್ಮಾತೃ ಕೆ.ಕೆ.ಶೆಟ್ಟಿ ದಂಪತಿಗಳ ಸಹಿತ ಬ್ರಹ್ಮಕಲಶೋತ್ಸವ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 10 ರಿಂದ ಸತ್ಯನಾರಾಯಣ ಪುಣಿಚಿತ್ತಾಯ ಪೆರ್ಲ, ಗಿರೀಶ ರೈ ಕಕ್ಕೆಪದವು, ಅಮೃತಾ ಅಡಿಗ ಭಾಗವತಿಕೆಯಲ್ಲಿ ಗಾನ ವೈಭವ ನಡೆಯಿತು. ಅಪರಾಹ್ನ 2.30 ರಿಂದ ಭಾಸ್ಕರ ರೈ ಕುಕ್ಕುವಳ್ಳಿ ಬಳಗದವರಿಂದ ಯಕ್ಷಗಾನ ತಾಳಮದ್ದಳೆ ನಡೆಯಿತು. ಸಂಜೆ 6.30 ರಿಂದ ಅಮಲ್ ರಾಜ್ ಸೂರಂಬೈಲು ಅವರಿಂದ ಶಾಸ್ತ್ರೀಯ ಸಂಗೀತ ಕಚೇರಿ ಹಾಗೂ ರಾತ್ರಿ 8.30 ರಿಂದ ಕಟೀಲು ಮೇಳದವರಿಂದ ಯಕ್ಷಗಾನ ಬಯಲಾಟ ಶ್ರೀದೇವೀ ಮಹಾತ್ಮ್ಯೆ ಪ್ರದರ್ಶನಗೊಂಡಿತು.
ಇಂದಿನ ಕಾರ್ಯಕ್ರಮ:
ಗುರುವಾರ ಬೆಳಿಗ್ಗೆ 5 ರಿಂದ ವೈದಿಕ ಕಾರ್ಯಕ್ರಮಗಳಾದ ಸ್ಥೂಲವಾಹನ, ಸ್ರೋತ್ರಾವಾಹನ, ಮಂತ್ರಾವಾಹನ, ಪರಿವಾರ ಪೂಜೆ, ವೈಶ್ವಹೋಮ, ಪ್ರತಿಷ್ಠಾ ಬಲಿ, ವೈಶ್ವ ಪೂಜೆ, ಕವಾಟ ಬಂಧನ, ಚಿದ್ದಂಬ, ಸಮ್ಮೇಲಿನಮ್ ಪ್ರತಿಷ್ಠಾದಕ್ಷಿಣೆ, ಪ್ರದಕ್ಷಿಣ ನಮಸ್ಕಾರ, ನಿತ್ಯನೈಮಿತ್ತಿಕ ನಿಶ್ಚಯ, ಅಂಕುರಪೂಜೆ, ಕವಾಟ ಬಂಧನ ವಿಧಿಗಳೂ, ಸಂಜೆ 4.30 ರಿಂದ ಅಧಿವಾಸ ಹೋಮ, ಶಾಂತಿಹೋಮ, ಗೋದೋಹನಮ್, ಪಾಯಸಪೂಜೆ, ಬ್ರಾಹ್ಮಣ ಸಮಾರಾಧನೆ, ವೈಶ್ವಹೋಮ, ವೈಶ್ವಬಲಿ, ಅಧಿವಾಸ ಹೋಮ, ಸಮಾಸನೆ, ಅಂಕುರಪೂಜೆ, ಸೋಪಾನದಲ್ಲಿ ರಾತ್ರಿಪೂಜೆ, ದುರ್ಗಾಪೂಜೆಗಳು ನಡೆಯಲಿವೆ.
ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಸಂಜೆ 4 ರಿಂದ ನಡೆಯುವ ಸಭೆಯಲ್ಲಿ ಅಹಮ್ಮದ್ ನಗರ ಸಾಯಿದೀಪ್ ಆಸ್ಪತ್ರೆಯ ಅಧ್ಯಕ್ಷ ಡಾ.ಎಸ್.ಎಸ್.ದೀಪಕ್ ಅವರ ಅಧ್ಯಕ್ಷತೆ ವಹಿಸುವರು. ಪೇಜಾವರ ಅಧೋಕ್ಷಜ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡುವರು. ಪ್ರಕಾಶ್ ಶೆಟ್ಟಿ ಉದ್ಘಾಟಿಸುವರು. ವಿದ್ವಾನ್.ಹಿರಣ್ಯ ವೆಂಕಟೇಶ್ವರ ಭಟ್ ಧಾರ್ಮಿಕ ಉಪನ್ಯಾಸ ನೀಡುವರು. ಮಾಯಿಪ್ಪಾಡಿ ಅರಮನೆಯ ದಾನ ಮಾರ್ತಾಂಡ ವರ್ಮ ರಾಜರು ಉಪಸ್ಥಿತರಿರುವರು. ಮುಖ್ಯ ಅತಿಥಿಗಳಾಗಿ ಬಿ.ರಮಾನಾಥ ರೈ, ಶಕುಂತಳಾ ಶೆಟ್ಟಿ, ಪ್ರಕಾಶ್ ಭಂಡಾರಿ, ಕೆ.ಡಿ.ಶೆಟ್ಟಿ. ಪುರುಷೋತ್ತಮ ಭಂಡಾರಿ, ಸನತ್ ಶೆಟ್ಟಿ, ಸಿ.ಕೆ.ನಾರಾಯಣ ಪಣಿಕ್ಕರ್, ಯು.ಟಿ.ಆಳ್ವ, ಡಾ.ಶಾಂತಾರಾಮ ಶೆಟ್ಟಿ, ಮಂಜುನಾಥ ಭಂಡಾರಿ, ಚಂದ್ರಶೇಖರ ರಾವ್ ಕಲ್ಲಗ, ಎ.ಚಿಕ್ಕಪ್ಪ ನಾಯ್ಕ್, ಸುಭಾಶ್ ಅಡ್ಯಂತಾಯ, ಡಾ.ಸತ್ಯಪ್ರಕಾಶ್ ರೈ, ಜಯದೇವ ಖಂಡಿಗೆ, ರವಿ.ರೈ ಕಳಸ ಮೊದಲಾದವರು ಉಪಸ್ಥಿತರಿರುವರು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 10.30 ರಿಂದ ನಾರಾಯಣಮಂಗಲದ ಶ್ರೀವಿಘ್ನೇಶ್ವರ ಯಕ್ಷಗಾನ ಕಲಾಸಂಘದವರಿಂದ ಯಕ್ಷಗಾನ ತಾಳಮದ್ದಳೆ, ರಾತ್ರಿ 7 ರಿಂದ ವೈಷ್ಣವ ಕೆ.ಸುನಿಲ್, ಶಿವಾನಿ ಎಡವಣ್ಣ ಹಾಗೂ ಶೈಲೇಶ್ ಕ್ಲಿನೀಫರ್ ಅವರಿಂದ ನೃತ್ಯ ವೈಭವ ನಡೆಯಲಿದೆ.