ಕುಂಬಳೆ: ಇಚ್ಲಂಪಾಡಿ ದರ್ಬಾರ್ ಕಟ್ಟೆಯ ಮುಂಡಪ್ಪಳ್ಳ ಶ್ರೀರಾಜರಾಜೇಶ್ವರಿ ದೇವಾಲಯದ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಫೆ.28 ರಿಂದ ಆರಂಭಗೊಂಡು ಮಾ.7ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯುತ್ತಿದ್ದು, ಏಕ ವ್ಯಕ್ತಿಯಿಂದ ಮರು ನಿರ್ಮಾಣಗೊಂಡಿರುವ ಕಾರಣ ಕುತೂಹಲಭರಿತರಾದ ಜನಸಂದೋಹ ಕ್ಷೇತ್ರದತ್ತ ಆಗಮಿಸಿ ಪ್ರಾರ್ಥನೆ, ಸೇವೆಗಳಲ್ಲಿ ಭಾಗವಹಿಸುತ್ತಿದ್ದಾರೆ.
ಭಾನುವಾರ ಬೆಳಿಗ್ಗೆ ಉಷಃಪೂಜೆ, ಅಂಕುರಪೂಜೆ, ಅನುಜ್ಞಾಕಲಶಪೂಜೆ, ತತ್ವಹೋಮ,ತತ್ವಕಲಶಪೂಜೆ, ತತ್ವಕಲಶಾಭಷೇಕ, ಮಹಾಪೂಜೆ ನಡೆಯತು. ಸಂಜೆ 4.30ರಿಂದ ಅಧಿವಾಸಹೋಮ, ಅಂಕುರಪೂಜೆ, ಕಲಶಾಧಿವಾಸ ಕ್ರಿಯೆ, ರಾತ್ರಿಪೂಜೆ, ಪ್ರಾರ್ಥನೆ, ಶ್ರೀದುರ್ಗಾಪೂಜೆಗಳು ನೆರವೇರಿತು.
ಸಾಂಸ್ಕøತಿಕ ಕಾರ್ಯಕ್ರಮಗಳ ಅಂಗವಾಗಿ ಬೆಳಿಗ್ಗೆ 9 ರಿಂದ ರೋಹಿಣಿ ಎಸ್.ದಿವಾಣ ಅವರಿಂದ ಭಕ್ತಿಸಂಗೀತ, 10 ರಿಂದ ಮಂಗಳೂರು ನೀರುಮಾರ್ಗದ ಶ್ರೀಸುಬ್ರಹ್ಮಣ್ಯ ಭಜನಾ ಮಂಡಳಿಯವರಿಂದ ಕುಣಿತ ಭಜನೆ, 11 ರಿಂದ ಎಡನಾಡು ಸ್ವಸ್ತಿಶ್ರೀ ಕಲಾಪ್ರತಿಷ್ಠಾನದವರಿಂದ ಕದಂಬ ಕೌಶಿಕೆ ಯಕ್ಷಗಾನ ತಾಳಮದ್ದಳೆ, ಸಂಜೆ 6 ರಿಂದ ಕಲಾರತ್ನ ಶಂ.ನಾ.ಅಡಿಗ ಕುಂಬಳೆ ಅವರಿಂದ ಶ್ರೀರಾಜರಾಜೇಶ್ವರಿ ಹಾಗೂ ಲಕ್ಷ್ಮೀ ಕಲ್ಯಾಣ ಕಥಾ ಭಾಗದ ಹರಿಕಥಾ ಸತ್ಸಂಗ, ರಾತ್ರಿ 8ರಿಂದ ಸ್ಥಳೀಯ ಪುಟಾಣಿಗಳಿಂದ ನೃತ್ಯ ವೈವಿಧ್ಯಗಳು ನಡೆಯಿತು.
ಇಂದಿನ ಕಾರ್ಯಕ್ರಮ:
ಮಾ.2 ರಂದು ಬೆಳಿಗ್ಗೆ 5 ರಿಂದ ಉಷಃಪೂಜೆ, ಅಂಕುರಪೂಜೆ, ಅನುಜ್ಞಾಕಲಶಾಭಿಷೇಕ, ಬಿಂಬಶುದ್ದಿ, ಕಲಶಪೂಜೆ, ಜಲದ್ರೋಣಿ ಪೂಜೆ, ಶಯ್ಯಾಮಂಟಪ ಶುದ್ದಿ, ಮಹಾಪೂಜೆ ನಡೆಯಲಿದೆ. ಸಂಜೆ 4.30ರಿಂದ ಅನುಜ್ಞಾ ಬಲಿ, ಕ್ಷೇತ್ರಪಾಲನಲ್ಲಿ ಮುಕ್ತೇಶ್ವರ ಸಹಿತಾಚಾರ್ಯರಿಂದ ಸಪರಿವಾರ ದೇವತೆಗಳಲ್ಲಿ ಅನುಜ್ಞಾ ಪ್ರಾರ್ಥನೆ, ಸತ್ಯಪ್ರತಿಜ್ಞೆ, ಚತುರ್ಥಸ್ನಾನದ ಅಂಕುರಾರೋಪಣ ಸಂಹಾರ, ತತ್ವಹೋಮದ ಕುಂಡಶುದ್ದಿ, ರಾತ್ರಿಪೂಜೆ, ಶ್ರೀದುರ್ಗಾಪೂಜೆ ನಡೆಯಲಿದೆ.
ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 10.30 ರಿಂದ ವಿದುಷಿ ಚಿತ್ತರಂಜಿನಿ ಕುಂಬಳೆ ಮತ್ತು ಬಳಗದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿ, ಸಂಜೆ 4 ರಿಂದ ಮುಜುಂಗಾವು ಯಕ್ಷಗಾನ ಹಿಮ್ಮೇಳ ತರಗತಿ ಕೇಂದ್ರದ ಮಾಂಬಾಡಿ ಶಿಷ್ಯವೃಂದದವರಿಂದ ಯಕ್ಷಗಾಯನ, ರಾತ್ರಿ 7 ರಿಂದ ಬಾಲಕೃಷ್ಣ ಮಂಜೇಶ್ವರ ಶಿಷ್ಯವೃಂದದವರಿಂದ ನೃತ್ಯವೈಭವ ನಡೆಯಲಿದೆ.