ಕುಂಬಳೆ: ಬಿಜೆಪಿ ಮಂಜೇಶ್ವರ ಮಂಡಲ ಸಮಿತಿಗೆ ಪದಾಧಿಕಾರಿಗಳನ್ನು ನಾಮ ನಿರ್ದೇಶನ ಮಾಡಲಾಗಿದೆ. ಉಪಾಧ್ಯಕ್ಷರುಗಳಾಗಿ ಪದ್ಮನಾಭ ಕಡಪ್ಪುರ, ಬಾಬು ಮಾಸ್ತರ್, ಶ್ಯಾಮಲಾ ಪತ್ತಡ್ಕ, ಜಯಂತಿ ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾಗಿ ಮುರಳೀಧರ ಯಾದವ್, ಆದರ್ಶ್ ಬಿ ಎಂ.,ಕಾರ್ಯದರ್ಶಿ ಗಳಾಗಿ ಸಂತೋಷ ದೈಗೋಳಿ, ಹರಿಣಿ ಜಿ.ಕೆ. ನಾಯಕ್, ಪುಷ್ಪಲಕ್ಷ್ಮಿ ಕನಿಯಾಲ, ರಮೇಶ್ ಭಟ್ ಕುಂಬ್ಳೆ, ಖಜಾಂಜಿಯಾಗಿ ತುಕಾರಾಮ ಯು ಇವರ ನ್ನು ಬಿಜೆಪಿ ಮಂಜೇಶ್ವರ ಮಂಡಲ ಪದಾಧಿಕಾರಿಗಳಾಗಿ ಆಯ್ಕೆ ಮಾಡಲಾಗಿದೆ.
ಬಿಜೆಪಿ ಮಂಜೇಶ್ವರ ಮಂಡಲ ವಿವಿಧ ಮೋರ್ಛಾ ಅಧ್ಯಕ್ಷರುಗಳಾಗಿ ಯುವ ಮೋರ್ಛಾ ಅಧ್ಯಕ್ಷರಾಗಿ ಚಂದ್ರಕಾಂತ್ ಶೆಟ್ಟಿ, ಎಸ್ ಸಿ ಮೋರ್ಛಾ ಅಧ್ಯಕ್ಷರಾಗಿ ಬಾಬು ಮೂಲಂಧಾರ, ಮಹಿಳಾ ಮೋರ್ಛಾ ಅಧ್ಯಕ್ಷರಾಗಿ ಸವಿತ ಬಾಳಿಕೆ, ಕರ್ಷಕ ಮೋರ್ಛಾ ಅಧ್ಯಕ್ಷರಾಗಿ ಸದಾಶಿವ ಚೇರಾಲ್, ಒ ಬಿ ಸಿ ಮೋರ್ಛಾ ಅಧ್ಯಕ್ಷರಾಗಿ ಚಂದ್ರಹಾಸ ಕಡಂಬಾರ್ ಇವರುಗಳನ್ನು ಆಯ್ಕೆ ಮಾಡಲಾಗಿದೆ ಎಂದು ಬಿಜೆಪಿ ಮಂಡಲಾಧ್ಯಕ್ಷ ಮಣಿಕಂಠ ರೈ ಪಟ್ಲ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.