HEALTH TIPS

ವಿಧವೆ ಸಹಿತ ದಿಕ್ಕಿಲ್ಲದ ಮಹಿಳೆಯರ ಸಹಾಯ ಉದ್ದೇಶ-`ಕೂಟ್' ಯೋಜನೆಯ ಅಂಗವಾಗಿ ಮೊಬೈಲ್ ಆ್ಯಪ್ ಸಿದ್ಧ


         ಕಾಸರಗೋಡು: ಜಿಲ್ಲೆಯಲ್ಲಿ ವಿಧವೆಯರ ಸಹಿತ ದಿಕ್ಕಿಲ್ಲದ ಮಹಿಳೆಯರ ಜೀವನ ಸುಧಾರಿತಗೊಳಿಸುವ ಮತ್ತು ಸಂರಕ್ಷಣೆ ಒದಗಿಸುವ ಉದ್ದೇಶದಿಂದ ಜಿಲ್ಲಾಡಳಿತೆ ಮತ್ತು ಮಹಿಳಾ ಸಂರಕ್ಷಣೆ ವಿಭಾಗ ವತಿಯಿಂದ ರಚಿಸಲಾದ `ಕೂಟ್(ಜತೆಗಾರ)' ಯೋಜನೆಯ ಅಂಗವಾಗಿ ಮಾಹಿತಿ ಸಂಗ್ರಹಿಸುವ ನಿಟ್ಟಿನಲ್ಲಿ ಮೊಬೈಲ್ ಅಪ್ಲಿಕೇಷನ್ ಸಿದ್ಧವಾಗಿದೆ.
       ಪತಿ ಮೃತ ಪಟ್ಟವರು, ಪತಿಯಿಂದ ವಿಚ್ಛೇದನ ಪಡೆದವರು, ಪತಿ ನಾಪತ್ತೆಯಾದವರು ಮೊದಲಾದವರ ಆಶ್ರಯವಿಲ್ಲದ ಮಹಿಳೆಯರಿಗೆ ಸಹಾಯ ಒದಗಿಸುವ ಯೋಜನೆ ಇದಾಗಿದೆ. ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತ್, ನಗರಸಭೆಗಳಲ್ಲಿ ವಾರ್ಡ್ ಮಟ್ಟದಲ್ಲಿ ಈ ಆ್ಯಪ್ ಬಳಸಿ ಸಮೀಕ್ಷೆ ನಡೆಸಲು ಆಶಾ ಕಾರ್ಯಕರ್ತೆಯರಿಗೆ ಹೊಣೆ ನೀಡಲಾಗಿದೆ. ಇಂಥಾ ಮಹಿಳೆಯರ ವ್ಯಕ್ತಿಗತ ಮಾಹಿತಿಗಳು, ಕುಟುಂಬ, ಶಿಕ್ಷಣಾರ್ಹತೆ, ಆರೋಗ್ಯದ ಮಟ್ಟ, ಪುನರ್ ವಿವಾಹ ಬಗ್ಗೆ ಆಸಕ್ತಿ ಸಹಿತ ಮಾಹಿತಿಗಳು ಸಮೀಪಕ್ಷೆಯಲ್ಲಿ ಸಂಗ್ರಹಿಸಲಾಗುವುದು. ಒಂದು ತಿಂಗಳ ಅವ„ಯಲ್ಲಿ  ಫೈನೆಕ್ಸ್‍ಸ್ಟ್ ಇನ್ನವೇಷನ್ ಎಂಬ ಸ್ಟಾರ್ಟ್ ಅಪ್ ಇಷನ್‍ನ ಸಹಾಯದೊಂದಿಗೆ ಕೂಟ್ ಯೋಜನೆ ಅಂಗವಾಗಿ ಮೊಬೈಲ್ ಆ್ಯಪ್ ತಯಾರಾಗಿದೆ. ಕನ್ನಡ, ಇಂಗ್ಲಿಷ್, ಮಲೆಯಾಳಂ ಭಾಷೆಗಳು ಆ್ಯಪ್ ನಲ್ಲಿವೆ.
ಎಲ್ಲ ಯೋಜನೆಗಳ ಮಾಹಿತಿಯೂ ಈ ಒಂದೇ ಆ್ಯಪ್ ನಲ್ಲಿರುವುದು ತುಂಬ ಆರೋಗ್ಯಕರ ಬೆಳವಣಿಗೆ. ಸಮೀಕ್ಷೆ ಪೂರ್ತಿಗೊಂಡು ಲಭಿಸಿರುವ ಮಾಹಿತಿಗಳ ಹಿನ್ನೆಲೆಯಲ್ಲಿ ವಿವಿಧ ವಿಭಾಗಗಳ ನಿರ್ಗತಿಕ ಮಹಿಳೆಯರಿಗೆ ಕೇಂದ್ರ-ರಾಜ್ಯಸರಕಾರಗಳ ವ್ಯಾಪ್ತಿಯಲ್ಲಿ ಲಭಿಸಬೇಕಾದ ಸೌಲಭ್ಯ ಲಭ್ಯತೆಗೆ ಬೇಕಾದ ಕ್ರಮಕೈಗೊಳ್ಳಲಾಗುವುದು. ಜಾರಿಯಲ್ಲಿ ಸರಕಾರಿ ಯೋಜನೆಗಳಲ್ಲದೆ ವಿಧವಾ ಸಂರಕ್ಷಣೆ ಸಮಿತಿ ಮತ್ತು ಯೋಜನೆಯೊಂದಿಗೆ ಸಹಕರಿಸಲು ಸಿದ್ಧರಿರುವ ಸಂಘಟನೆಗಳ, ಎನ್.ಜಿ.ಒ.ಗಳ ಸಹಕಾರವನ್ನು ಕೋರಲಾಗುವುದು. ಜಾರಿಯಲ್ಲಿರುವ ವಿವಿಧ ಸರಕಾರಿ ಯೋಜನೆಗಳ ವ್ಯಾಪ್ತಿಯಲ್ಲಿ ನೌಕರಿ, ಪರಿಣತಿ, ತರಬೇತು ಒದಗಿಸಿ ವಿಧವೆಯರನ್ನು ಸ್ವಾವಲಂಬಿಯಾಗಿಸುವ ಯತ್ನ ನಡೆಸಲಾಗುವುದು. ಜೊತೆಗೆ ಸ್ವಂತ ಉದ್ದಿಮೆ ಆರಂಭಿಸುವ ಇತ್ಯಾದಿ ಉದ್ದೇಶಗಳಿಗೆ ಬ್ಯಾಂಕ್ ಸಾಲ ಒದಗಿಸುವ ಕ್ರಮ ನಡೆಸಲಾಗುವುದು. ಕೇಂದ್ರ ಸರಕಾರ ಈ ನಿಟ್ಟಿನಲ್ಲಿ ನಡೆಸುವ ವಿವಿಧ ಯೋಜನೆಗಳ ಕುರಿತು ಜನಜಾಗೃತಿ ಮೂಡಿಸುವ ಕ್ರಮವೂ ಈ ನಿಟ್ಟಿನಲ್ಲಿ ನಡೆಸಲಾಗುವುದು. ಪುನರ್ ವಿವಾಹದ ಬಗ್ಗೆ ಆಸಕ್ತಿಹೊಂದಿರುವ ಮಹಿಳೆಯರಿಗೆ ಬೇಕಾದ ಸಹಾಯವನ್ನೂ ಒದಗಿಸಲಾಗುವುದು.
      ಈ ಸಂಬಂಧ ಜಿಲ್ಲಾ„ಕಾರಿ ಕಚೇರಿ ಸಭಾಂಗಣದಲ್ಲಿ `ಕೂಟ್' ಅಪ್ಲಿಕೇಷನ್ ತರಬೇತಿ ಕಾರ್ಯಕ್ರಮ ಅಂಗವಾಗಿ `ಶ್ರದ್ಧಾ' ಜನಜಾಗೃತಿ ವಿಚಾರ ಸಂಕಿರಣ ಜರುಗಿತು. ಜಿಲ್ಲಾ„ಕಾರಿ ಡಾ.ಡಿ.ಸಜಿತ್ ಬಾಬು ಉದ್ಘಾಟಿಸಿದರು. ಫೆನ್ನೆಕ್ಸ್‍ಟ್ ಸಂಸ್ಥೆಯ ಪ್ರತಿನಿ„ ಅಭಿಲಾಷ್ ಸತ್ಯನ್ ನೇತೃತ್ವ  ನೀಡಿದರು. ಮಹಿಳಾ ಕಲ್ಯಾಣ ಅ„ಕಾರಿ ಎಂ.ವಿ.ಸುನಿತಾ, ಪಿ.ಶಶಿಕಂತ್ ಮೊದಲಾದವರು ಉಪಸ್ಥಿತರಿದ್ದರು.
       ಚಿತ್ರ ಮಾಹಿತಿ: ಜಿಲ್ಲಾಕಾರಿ ಕಚೇರಿಯಲ್ಲಿ ನಡೆದ "ಶ್ರದ್ಧಾ" ಜನಜಾಗೃತಿ ವಿಚಾರಸಂಕಿರಣವನ್ನು ಜಿಲ್ಲಾಕಾರಿ ಡಾ.ಡಿ.ಸಜಿತ್ ಬಾಬು ಉದ್ಘಾಟಿಸಿದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries