ಬದಿಯಡ್ಕ: ವಿದ್ಯಾಗಿರಿ ಶ್ರೀ ಅನಂತ ಭಟ್ ಮೆಮೋರಿಯಲ್ ಶಾಲೆಯಲ್ಲಿ ಕಲಿಕೋತ್ಸವ ಕಾರ್ಯಕ್ರಮ ಜರಗಿತು. ವಿದ್ಯಾರ್ಥಿಗಳು ತಾವು ಗಳಿಸಿದ ಕಲಿಕಾ ಸಾಮಥ್ರ್ಯಗಳನ್ನು ರಸಕರವಾಗಿ ಸಾದರಪಡಿಸಿದರು.
ಹಿರಿಯ ಪ್ರಾಥಮಿಕ ವಿಭಾಗದ ಪ್ರತಿಭೆಗಳಿಗೆ ವಿದ್ಯಾದೀಪ್ತಿ ಎಂಡೋಮೆಂಟ್ ಸ್ಮರಣಿಕೆ ಹಾಗೂ ನಗದು ಬಹುಮಾನವನ್ನು ನೀಡಲಾಯಿತು. ರಕ್ಷಕ ಶಿಕ್ಷಕ ಸಂಘದ ಹರಿಪ್ರಸಾದ್ ಮುನಿಯೂರು, ಗ್ರಾ.ಪಂ. ಸದಸ್ಯ ಬಾಲಕೃಷ್ಣ ಶೆಟ್ಟಿ ಕಡಾರು, ಎಸ್‍ಎಂಸಿ ಸಂಚಾಲಕ ರವಿ, ಅಧ್ಯಾಪಕ ಚಂದ್ರಹಾಸ ನಂಬ್ಯಾರ್, ಬಿಆರ್‍ಸಿ ತರಬೇತುದಾರೆ ಮಮತಾ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಮುಖ್ಯೋಪಾಧ್ಯಾಯಿನಿ ಲಲಿತಾಂಬಿಕಾ ಸ್ವಾಗತಿಸಿ, ಹಿರಿಯ ಅಧ್ಯಾಪಿಕೆ ಅನಿತಾ ವಂದಿಸಿದರು.